ಸಕ್ಕರೆ ನಿಯಂತ್ರಣ ಕಾಯ್ದೆ ತಿದ್ದುಪಡಿಗೆ ಮುಂದಾಗದಿರಿ
Team Udayavani, Nov 4, 2021, 5:37 PM IST
ದಾವಣಗೆರೆ: ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣಕಾಯ್ದೆ-1966 ತಿದ್ದುಪಡಿಗೆ ಮುಂದಾಗಿರುವುದುಕಬ್ಬು ಬೆಳೆಗಾರರ ಕತ್ತು ಕುಯ್ಯುವ ಕೆಲಸಕ್ಕೆನಾಂದಿ ಹಾಡಿದಂತಾಗುತ್ತಿದೆ ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರಬೂರುಶಾಂತಕುಮಾರ್ ದೂರಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕಬ್ಬು ಪೂರೈಕೆ ಮಾಡಿದಂತಹ ರೈತರಿಗೆಕಾರ್ಖಾನೆಗಳು 14 ದಿನದ ಒಳಗಾಗಿ ಹಣಪಾವತಿಸಬೇಕು. ವಿಳಂಬವಾದರೆ ಶೇ.15ರಷ್ಟುಬಡ್ಡಿ ಸೇರಿಸಿ ಕೊಡಬೇಕು ಎಂಬ ನಿಯಮ ಇದೆ.ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣ ಕಾಯ್ದೆ-1966ತಿದ್ದುಪಡಿ ತರುವ ಮೂಲಕ ಕಾರ್ಖಾನೆ ಯವರು60 ದಿನಗಳ ಕಾಲಾವಕಾಶ, ಮೂರು ಕಂತುಗಳಲ್ಲಿಹಣ ಪಾವತಿಗೆ ಅವಕಾಶ ಮಾಡಿಕೊಡಲು ಮುಂದಾಗಿರುವುದು ಅತ್ಯಂತ ಖಂಡನೀಯಎಂದು ದೂರಿದರು.
ಈಗಲೇ ಸಕ್ಕರೆ ಕಾರ್ಖಾನೆಯವರು ರೈತರಿಗೆಹಣ ಪಾವತಿ ಮಾಡಲು ವಿಳಂಬ ಮಾಡುತ್ತಿದ್ದಾರೆ.ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಬ್ಬುಬೆಳೆಗಾರರ ಕತ್ತು ಕುಯ್ಯುವ ಕೆಲಸಕ್ಕೆ ನಾಂದಿಹಾಡಿದಂತಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇನೀತಿ ಆಯೋಗ ನೀಡಿರುವ ವರದಿ ತಿರಸ್ಕರಿಸಬೇಕು.ಯಾವುದೇ ಕಾರಣಕ್ಕೂ ಸಕ್ಕರೆ ನಿಯಂತ್ರಣಕಾಯ್ದೆ-1966ಕ್ಕೆ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕಬ್ಬು, ಭತ್ತ, ಮೆಕ್ಕೆಜೋಳಬೆಂಬಲ ಬೆಲೆಯನ್ನ ಕೇವಲ ಅರ್ಧ ಪರ್ಸೆಂಟ್‌ಏರಿಕೆ ಮಾಡಿದೆ. ಸರ್ಕಾರಿ ನೌಕರರಿಗೆ ಶೇ.3ರಿಂದ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡುವಂತಹಸರ್ಕಾರಗಳು ಬೆಂಬಲ ಬೆಲೆ ಹೆಚ್ಚಳ ಮಾಡಲಿಕ್ಕೆಯೋಚನೆ ಮಾಡುತ್ತವೆ. ಕೇಂದ್ರ ಸರ್ಕಾರದಅವೈಜ್ಞಾನಿಕ ನೀತಿಯ ಪರಿಣಾಮ ರೈತರ ಆದಾಯಕಡಿಮೆ ಆಗುತ್ತಿದೆ.
3,100 ರೂಪಾಯಿ ಇದ್ದಂತಹಕೂಲಿ ಕಾರ್ಮಿಕರ ಆದಾಯ 4,100 ರೂಪಾಯಿಆಗಿದೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತರಆದಾಯ ಕುಸಿಯುತ್ತಿದೆ. ಕೇಂದ್ರ ಸರ್ಕಾರರೈತ ಸಮುದಾಯಕ್ಕೆ ದ್ರೋಹ ಬಗೆಯುತ್ತಿದೆ.ಇಬ್ಬಗೆ ನೀತಿಯಿಂದ ಕಬ್ಬು ಬೆಳೆಗಾರರು ಸಂಕಷ್ಟಅನುಭವಿಸುವಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಕಬ್ಬಿಗೆ ಕಳೆದ ವರ್ಷಕ್ಕಿಂತ ಈವರ್ಷ ಕೇವಲ 50 ರೂಪಾಯಿ ಹೆಚ್ಚಿಸಿದೆ.
ಎಫ್‌ಆರ್‌ಪಿ ದರ ಪರಿಷ್ಕರಣೆಗೆ ಒತ್ತಾಯಿಸಿ ಅ.5ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿಸಚಿವ ಬಿ.ಸಿ. ಪಾಟೀಲ್ ಇತರರು ಎಫ್‌ಆರ್‌ಪಿಪುನರ್ ಪರಿಶೀಲಿಸುವ ಭರವಸೆ ನೀಡಿ ಒಂದುತಿಂಗಳು ಕಳೆದರೂ ಯಾವುದೇ ಗಂಭೀರ ಕ್ರಮತೆಗೆದುಕೊಂಡಿಲ್ಲ. ಕೂಡಲೇ ಎಫ್‌ಆರ್‌ಪಿ ಪುನರ್‌ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿ ಮಾಡಲಾಗುವುದು.
ಸಮಸ್ಯೆ ಬಗೆಹರಿಸುವಂತೆ ಒತ್ತಾಯ ಮಾಡಲಾಗುವುದು ಎಂದುತಿಳಿಸಿದರು.ಕಳೆದ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಬರಬೇಕಾದಬಾಕಿ 600 ಕೋಟಿ ಇತ್ತು. ಈಗ ಪೂರೈಕೆಮಾಡುತ್ತಿರುವ ಕಬ್ಬಿನ ಬಾಕಿ ಸೇರಿಸಿದರೆ 2500ಕೋಟಿ ಬರಬೇಕಾಗುತ್ತದೆ. ಬಾಕಿ ನೀಡುವುದು ವಿಳಂಬವಾಗುತ್ತಿದೆ.
ಕಳೆದ ಸಾಲಿನಲ್ಲಿ 3500 ಕೋಟಿಟನ್ ಕಬ್ಬಿತ್ತು. ಈ ವರ್ಷ 5 ಕೋಟಿ ಟನ್ ಬರುತ್ತಿದೆಎಂದು ತಿಳಿಸಿದರು.ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್,ಹತ್ತಳ್ಳಿ ದೇವರಾಜ್, ಸಂಚಾಲಕ ಎನ್.ಎಚ್.ದೇವಕುಮಾರ್, ಪೂಜಾರ್ ಅಂಜಿನಪ್ಪಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.