ಜಿಲ್ಲೆಗಳಲ್ಲಿ ಶೂನ್ಯಕ್ಕಿಳಿದ ಕೋವಿಡ್
Team Udayavani, Nov 4, 2021, 5:43 PM IST
ಬಳ್ಳಾರಿ: ಕೋವಿಡ್ ಸೋಂಕು ಪತ್ತೆಯಲ್ಲಿರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಗಣಿನಾಡುಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಕಳೆದಎರಡು ದಿನಗಳಿಂದ ಸೋಂಕು ಪತ್ತೆಶೂನ್ಯಕ್ಕಿಳಿದ್ದು, ಉಭಯ ಜಿಲ್ಲೆಗಳ ಜನರುನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವಮಹಮ್ಮಾರಿ ಸೋಂಕು, ಬಳ್ಳಾರಿ/ವಿಜಯನಗರಜಿಲ್ಲೆಗಳಲ್ಲೂ 1689 ಜನರನ್ನು ಬಲಿಪಡೆದುಕೊಂಡಿದೆ. ಮೊದಲ ಅಲೆಗಿಂತಲೂಎರಡನೇ ಅಲೆಯಲ್ಲಿ ಉಭಯ ಜಿಲ್ಲೆಗಳಲ್ಲಿಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದನಾಲ್ಕೈದು ತಿಂಗಳುಗಳಿಂದ ಸೋಂಕುಪತ್ತೆ, ಸಾವಿನ ಪ್ರಮಾಣವೂ ಗಣನೀಯಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತಿದಿನ 1, 2ಅಥವಾ 10ರೊಳಗಿನ ಸಂಖ್ಯೆಯಲ್ಲಿ ಸೋಂಕುಪತ್ತೆಯಾಗುತ್ತಿದೆ. ಇನ್ನುಸಾವಿನ ಪ್ರಮಾಣಅಂದಾಜು ಎರಡು ಮೂರುತಿಂಗಳಿಂದ ಸೋಂಕಿಗೆಒಬ್ಬರೂ ಬಲಿಯಾಗಿರುವ ಕುರಿತು ವರದಿಯಾಗದೆ ಶೂನ್ಯಕ್ಕಿಳಿದಿದೆ.
ಇನ್ನು ಕೋವಿಡ್ ಸೋಂಕು ಎರಡನೇಅಲೆ ಇಳಿಮುಖವಾಗುತ್ತಿದ್ದಂತೆ ಸೆಪ್ಟೆಂಬರ್,ಅಕ್ಟೋಬರ್ ತಿಂಗಳಲ್ಲಿ ಸಂಭವನೀಯಮೂರನೇ ಅಲೆ ಆವರಿಸಲಿದೆ ಎಂಬಮಾತುಗಳು ಕೇಳಿಬಂದಿದ್ದವು. ಇದು ಜನರಲ್ಲಿಮತ್ತಷ್ಟು ಆತಂಕ ಸೃಷ್ಟಿಸಿತ್ತಾದರೂ, ಎರಡುತಿಂಗಳು ಕಳೆದರೂ ಸೋಂಕು ಪತ್ತೆಯ ಪ್ರಮಾಣಹೆಚ್ಚಾಗದಿರುವುದು ಉಭಯ ಜಿಲ್ಲೆಗಳ ಜನರಲ್ಲಿ ನೆಮ್ಮದಿ ಮೂಡಿಸಿದೆ.
ಈ ನಡುವೆ ಕಳೆದ ಎರಡುದಿನಗಳಿಂದ ಅ. 2,3 ರಂದುಸೋಂಕು ಪತ್ತೆ ಶೂನ್ಯಕ್ಕಿಳಿದ್ದು,ಎರಡು ದಿನಗಳಲ್ಲಿ ತಲಾಇಬ್ಬರು ಒಟ್ಟು ನಾಲ್ಕುಜನರು ಸೋಂಕಿನಿಂದಗುಣ ಮುಖರಾಗಿಬಿಡುಗಡೆ ಯಾಗಿದ್ದಾರೆ.ಇನ್ನು ಬಳ್ಳಾರಿ 58, ಸಂಡೂರು 9, ಸಿರುಗುಪ್ಪ9, ಕೂಡ್ಲಿಗಿ 2, ಹಡಗಲಿ 8, ಹೊಸಪೇಟೆ 4,ಹ.ಬೊ.ಹಳ್ಳಿ 9, ಹರಪನಹಳ್ಳಿ 8, ಇತರೆ ರಾಜ್ಯ2, ಇತರೆ ಜಿಲ್ಲೆ 1 ಸೇರಿ ಒಟ್ಟು 110 ಸಕ್ರಿಯಪ್ರಕರಣಗಳಿವೆ. ಈವರೆಗೆ ಒಟ್ಟು 97767ಜನರಲ್ಲಿ ಸೋಂಕು ಪತ್ತೆಯಾಗಿದ್ದು, 95968ಜನರು ಗುಣಮುಖರಾಗಿದ್ದಾರೆ. 1689ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದುಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಟೆಸ್ಟ್ ಇಳಿಕೆ: ಬಳ್ಳಾರಿ/ವಿಜಯನಗರಜಿಲ್ಲೆಗಳಲ್ಲಿ ಕೋವಿಡ್ ಸೋಂಕು ನಿಧಾನವಾಗಿಇಳಿಕೆಯಾಗುತ್ತಿದ್ದಂತೆ ಕೋವಿಡ್ ಟೆಸ್ಟ್‌ಪ್ರಮಾಣವೂ ಕಡಿಮೆಯಾಗಿದೆ. ಈ ಮೊದಲುಪ್ರತಿದಿನ 2 ರಿಂದ 3 ಸಾವಿರಕ್ಕೂ ಹೆಚ್ಚು ಜನರನ್ನುಟೆಸ್ಟಿಂಗ್ ಮಾಡಲಾಗುತ್ತಿತ್ತು. ಆದರೆ, ಇದೀಗರ್ಯಾಪಿಡ್ ಆಂಟಿಜೆನ್ 534, ಆರ್‌ಟಿಪಿಸಿಆರ್532 ಸೇರಿ ಪ್ರತಿದಿನ 1066 ಜನರಿಗೆ ಟೆಸ್ಟ್‌ಮಾಡಲಾಗಿದೆ. ಈವರೆಗೆ ರ್ಯಾಪಿಡ್ ಆಂಟಿಜೆನ್3,46,409, ಆರ್‌ಟಿಪಿಸಿಆರ್ 8,29,579ಸೇರಿ ಒಟ್ಟು 11,75,988 ಜನರಿಗೆ ಟೆಸ್ಟ್‌ಮಾಡಲಾಗಿದೆ. ಇನ್ನು ಉಭಯ ಜಿಲ್ಲೆಗಳಲ್ಲಿಇವರೆಗೆ 17,26,822 ಜನರಿಗೆ ಪ್ರಥಮ,8,36,378 ಜನರಿಗೆ ಎರಡನೇ ಡೋಸ್‌ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಡಳಿತಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.