ದೇಶದ ಸೇನಾ ಸಾಮರ್ಥ್ಯ ಹೆಚ್ಚಲಿ : ಸರ್ಜಿಕಲ್‌ ದಾಳಿಯಲ್ಲಿ ಯೋಧರ ಪಾತ್ರಕ್ಕೆ ಮೋದಿ ಶ್ಲಾಘನೆ


Team Udayavani, Nov 4, 2021, 10:00 PM IST

ದೇಶದ ಸೇನಾ ಸಾಮರ್ಥ್ಯ ಹೆಚ್ಚಲಿ : ಸರ್ಜಿಕಲ್‌ ದಾಳಿಯಲ್ಲಿ ಯೋಧರ ಪಾತ್ರಕ್ಕೆ ಮೋದಿ ಶ್ಲಾಘನೆ

ನೌಶೇರಾ/ನವದೆಹಲಿ : ಗಡಿ ಪ್ರದೇಶದಲ್ಲಿ ಮಿಲಿಟರಿ ಸೌಕರ್ಯ ಮೇಲ್ದರ್ಜೆಗೆ ಏರಿಸಿದ್ದರಿಂದ ದೇಶದ ವೀರ ಯೋಧರಿಗೆ ಅನುಕೂಲವಾಗಲಿದೆ. ಬದಲಾಗುತ್ತಿರುವ ಜಗತ್ತು ಹಾಗೂ ಯುದ್ಧ ಕೌಶಲ್ಯಗಳಿಗೆ ಅನುಗುಣವಾಗಿ ದೇಶವೂ ಕೂಡ ರಣತಂತ್ರಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಗುರುವಾರ ಯೋಧರ ಜತೆಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ, ಯೋಧರನ್ನುದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ.

ಹಿಂದಿನ ಸಂದರ್ಭಗಳಲ್ಲಿ ಬೇರೆ ಬೇರೆ ಸ್ಥಳಗಳ ನಡುವೆ ಸಂಪರ್ಕ ಸಾಧಿಸುವುದು ಕಷ್ಟವಾಗುತ್ತಿತ್ತು. ಸದ್ಯ ಲಡಾಖ್‌ನಿಂದ ಅರುಣಾಚಲ ಪ್ರದೇಶದ ವರೆಗೆ, ಜೈಸಲ್ಮೇರ್‌ನಿಂದ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದವರೆಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಾಗಿದೆ ಎಂದು ಅವರು ಹೇಳಿ ದ್ದಾರೆ. 2016ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗಿದ್ದ ಸರ್ಜಿಕಲ್‌ ದಾಳಿಯಲ್ಲಿ ದೇಶದ ವೀರ ಯೋಧರು ವಹಿಸಿದ ಪಾತ್ರವನ್ನು ಪ್ರಸ್ತಾಪಿಸಿದ ಪ್ರಧಾನಿಯವರು ಅವರ ವೀರತ್ವವನ್ನು ಮುಕ್ತಕಂಠದಿಂದ ಶ್ಲಾ ಸಿದ್ದಾರೆ. ಸರ್ಜಿಕಲ್‌ ದಾಳಿಯ ಬಳಿಕ ಈ ಪ್ರದೇಶದಲ್ಲಿನ ಶಾಂತಿ-ನೆಮ್ಮದಿ ಕೆಡಿಸಲು ಪ್ರಯತ್ನಗಳು ನಡೆದರೂ, ವೀರ ಯೋಧರು ಅದಕ್ಕೆ ಅವಕಾಶ ಕೊಡಲಿಲ್ಲ ಎಂದಿದ್ದಾರೆ.

ಬೇಕು ಹೊಸ ಕೌಶಲ್ಯ :
ಜಗತ್ತಿನಲ್ಲಿ ಯುದ್ಧ ತಂತ್ರಗಳು ಬದಲಾವಣೆಯಾಗುತ್ತಿವೆ. ಅದಕ್ಕೆ ಪೂರಕವಾಗಿ ದೇಶದ ಸೇನಾಪಡೆಯೂ ಹೊಂದಿಕೊಂಡು ಅಂಥ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಅದಕ್ಕಾಗಿ ಗಡಿ ಪ್ರದೇಶಗಳಲ್ಲಿ ಬೇಕಾಗಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದರು. “ಯೋಧರ ಹೋರಾಟ, ತ್ಯಾಗಕ್ಕೆ ಮೆಚ್ಚುಗೆ ಇದೆ. ನಿಮ್ಮ ಮೇಲೆ ಭಾರತ ಮಾತೆಯ ಸುರಕ್ಷಾ ಕವಚ ಇದೆ. ನೀವು ದೇಶದ ಗಡಿಗಳನ್ನು ಕಾಯುತ್ತಿರುವುದರಿಂದಲಾಗಿಯೇ ದೇಶದ ಜನರು ನೆಮ್ಮದಿಯಿಂದ ಇರುವಂತಾಗಿದೆ’ ಎಂದು ಹೇಳಿದರು.

ಎಲ್ಲರ ಹೊಣೆ:
ದೇಶ ಹೊಂದಿರುವ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವುದು ಎಲ್ಲರ ಹೊಣೆ. ನಾವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ (ಸ್ವಾವಲಂಬನೆ) ಹೊಂದುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ರಕ್ಷಣಾ ಬಜೆಟ್‌ನ ಶೇ.65ರಷ್ಟು ಪ್ರಮಾಣವನ್ನು ದೇಶದೊಳಗೆ ಬಳಕೆ ಮಾಡಲಾಗುತ್ತದೆ. ಸದ್ಯ ದೇಶದಲ್ಲಿಯೇ ರಕ್ಷಣೆಗೆ ಸಂಬಂಧಿಸಿದ 200 ವಸ್ತುಗಳನ್ನು ಉತ್ಪಾದಿಸಲಾಗುತ್ತದೆ ಎಂದರು. ಅದನ್ನು ಶೀಘ್ರವೇ ಇನ್ನ ಷ್ಟು ವಿಸ್ತರಿಸಲಾಗುತ್ತದೆ ಎಂದೂ ಹೇಳಿ ದ ರು. ಕಾರ್ಯಕ್ರಮದಲ್ಲಿ ಯೋಧರಿಗೆ ಪ್ರಧಾನಿಯವರೇ ಖುದ್ದಾಗಿ ಸಿಹಿ ವಿತರಿಸಿದರು. 2019ರ ಬಳಿಕ ಪ್ರಧಾನಿಯವರು ಗಡಿ ಭಾಗದಲ್ಲಿರುವ ಯೋಧರ ಜತೆಗೆ ದೀಪಾವಳಿ ಆಚರಿಸುತ್ತಿದ್ದಾರೆ.

ಯೋಧರ ಜತೆ ಹಬ್ಬ ಆಚರಿಸಿದ ಉತ್ತರಾಖಂಡ ರಾಜ್ಯಪಾಲ, ಸಿಎಂ
ಉತ್ತರಾಖಂಡದ ರಾಜ್ಯಪಾಲ ಲೆ.ಜ.(ನಿವೃತ್ತ) ಗುರ್ಮೀತ್‌ ಸಿಂಗ್‌ ಮತ್ತು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರೂ ಗಡಿಭಾಗದ ಗ್ರಾಮ ಮನಾದಲ್ಲಿರುವ ಯೋಧರ ಜತೆಗೆ ದೀಪಾವಳಿ ಆಚರಿಸಿಕೊಂಡಿದ್ದಾರೆ. ಚಮೋಲಿ ಜಿಲ್ಲೆಯಲ್ಲಿರುವ ಈ ಗ್ರಾಮ, ಚೀನಾ ಜತೆಗೆ ಗಡಿಯನ್ನು ಹೊಂದಿಕೊಂಡಿರುವ ದೇಶದ ಕೊನೆಯ ಭಾಗವಾಗಿದೆ. ಜತೆಗೆ ಬದರಿನಾಥ ಕ್ಷೇತ್ರದಿಂದ ಕೆಲವೇ ಕಿಲೋಮೀಟರ್‌ಗಳ ದೂರದಲ್ಲಿದೆ.

ಭಾರತ-ಪಾಕ್‌ ಸಿಹಿ ವಿನಿಮಯ
ಗುಜರಾತ್‌ ಮತ್ತು ರಾಜಸ್ಥಾನದ ಗಡಿ ಪ್ರದೇಶಗಳಲ್ಲಿ ಭಾರತದ ಬಿಎಸ್‌ಎಫ್ ಯೋಧರು ಮತ್ತು ಪಾಕಿಸ್ತಾನದ ರೇಂಜರ್‌ ಗಳು ದೀಪಾವಳಿ ನಿಮಿತ್ತ ಗುರುವಾರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಹಬ್ಬಗಳ ಸಮಯದಲ್ಲಿ ಈ ರೀತಿ ಸಿಹಿ ವಿನಿಮಯ ಹಾಗೂ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಪರಸ್ಪರರ ನಡುವೆ ಸಾಮರಸ್ಯ, ಭಾತೃತ್ವ ಹೆಚ್ಚಿಸುತ್ತದೆ. ಅಲ್ಲದೇ, ಗಡಿಯುದ್ದಕ್ಕೂ ಸ್ನೇಹ ಪರ ಮತ್ತು ಶಾಂತಿಯುತ ವಾತಾವರಣ ನಿರ್ಮಾಣವಾಗುವುದಕ್ಕೂ ಸಹಾಯ ಮಾಡುತ್ತದೆ ಎಂದು ಬಿಎಸ್‌ಎಫ್ ಹೇಳಿದೆ.

ಇದನ್ನೂ ಓದಿ : ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ

ಟಾಪ್ ನ್ಯೂಸ್

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

saavu

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.