“ಎಲ್‌ಎಸಿ ಹಿಡಿತಕ್ಕೆ ಚೀನ ವಿಫ‌ಲ ಯತ್ನ’


Team Udayavani, Nov 5, 2021, 7:40 AM IST

“ಎಲ್‌ಎಸಿ ಹಿಡಿತಕ್ಕೆ ಚೀನ ವಿಫ‌ಲ ಯತ್ನ’

ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕದ ಜತೆಗೆ ಭಾರತ ಅತ್ಯು ತ್ತಮ ರೀತಿಯ ಬಾಂಧವ್ಯ ಹೊಂದಲು ಪ್ರಯತ್ನಿಸುತ್ತಿದೆ. ಹೀಗಾಗಿ, ಚೀನ ಭಾರತದ ಜತೆಗೆ ಹೊಂದಿರುವ ವಾಸ್ತವಿಕ ಗಡಿ ರೇಖೆ (ಎಲ್‌ಎಸಿ) ತನ್ನ ನಿಯಂತ್ರಣಕ್ಕೆ ಸೇರಿದ್ದು ಎಂಬ ನಿಟ್ಟಿನಲ್ಲಿ ಸಾಬೀತು ಮಾಡಲು ವಿಫ‌ಲ ಯತ್ನ ಮಾಡುತ್ತಿದೆ ಎಂದು ಅಮೆರಿಕದ ರಕ್ಷಣ ಸಚಿವಾಲಯ, ಪೆಂಟಗನ್‌ ಅಭಿಪ್ರಾಯಪಟ್ಟಿದೆ.

ಎಲ್‌ಎಸಿ ತನ್ನದು ಎಂದು ಹೇಳಿ ಕೊಳ್ಳಲು ಚೀನ “ಕುಶಲತೆಯ ಮತ್ತು ಹೆಚ್ಚು ಒತ್ತಡ ಹೇರುವ ತಂತ್ರ’ ಅನುಸರಿಸಿದ್ದರೂ ಅದು ಕೈಗೂಡಿಲ್ಲ ಎಂದು ಚೀನಕ್ಕೆ ಸಂಬಂ ಧಿಸಿದಂತೆ ಸಿದ್ಧಪಡಿಸಲಾಗಿರುವ ಮಹತ್ವದ ವರದಿಯಲ್ಲಿ ಉಲ್ಲೇಖೀಸಿದೆ.

ತೈವಾನ್‌ ಮತ್ತು ಅದರ ಸುತ್ತಮುತ್ತಲಿನ ವ್ಯಾಪ್ತಿಯ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವ ನಿಟ್ಟಿನಲ್ಲಿ ಅಮೆರಿಕ-ಡ್ರ್ಯಾಗನ್‌ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ರುವ ಸಮಯದಲ್ಲಿಯೇ ಈ ವರದಿ ಪ್ರಕಟವಾಗಿದೆ.

ವರದಿಯಲ್ಲಿ 2020ರ ಮೇನಲ್ಲಿ ಭಾರತದ ನಿಯಂತ್ರಣ ಹೊಂದಿರುವ ಪ್ರದೇಶದ ಮೇಲೆ ಚೀನ ದಾಳಿ ನಡೆಸಿದೆ ಎಂಬ ಅಂಶವನ್ನು ಪ್ರಸ್ತಾವಿಸಲಾಗಿದೆ. ಭಾರತ ಸರಕಾರದ ವತಿಯಿಂದ ಬಿಗುವು ತಗ್ಗಿಸಲು ರಾಜತಾಂತ್ರಿಕ ಮತ್ತು ಸೇನಾಧಿ ಕಾರಿಗಳ ಮಟ್ಟದ ಮಾತುಕತೆ ನಡೆಸಲು ಮುಂದಾಗಿದ್ದರೂ, ಚೀನ ಅದಕ್ಕೆ ತಣ್ಣೀರೆರಚಿ ಎಲ್‌ಎಸಿ ವ್ಯಾಪ್ತಿಯ ಪ್ರದೇಶ ತನ್ನದು ಎಂದು “ಕುಶಲತೆಯ ಮತ್ತು ಹೆಚ್ಚು ಒತ್ತಡ ಹೇರುವ ತಂತ್ರ’ ಅನುಸರಿಸಿದೆ. ಪ್ರಸಕ್ತ ವರ್ಷದ ಜೂನ್‌ ಅವಧಿಯಲ್ಲಿ ಎರಡೂ ದೇಶಗಳೂ ಎಲ್‌ಎಸಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನೆ ನಿಯೋಜಿಸಿಕೊಂಡಿವೆ ಎಂದು ಪ್ರಸ್ತಾಪಿಸ ಲಾಗಿದೆ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿರುವ ತನ್ನ ಸೇನೆಗೆ ಕ್ಷಿಪ್ರಗತಿಯಲ್ಲಿ ಸಂದೇಶ ನೀಡುವ ನಿಟ್ಟಿನಲ್ಲಿ ಚೀನ ಫೈಬರ್‌ ಆಪ್ಟಿಕ್‌ ನೆಟ್‌ವರ್ಕ್‌ ಸ್ಥಾಪಿಸಿದೆ ಎಂಬ ಅಂಶವೂ ವರದಿ ಡಿಯಿಂದ ಬಹಿರಂಗವಾಗಿದೆ.

2030ಕ್ಕೆ ಡ್ರ್ಯಾಗನ್‌ ರಾಷ್ಟ್ರ ಹೊಂದಲಿದೆ 1 ಸಾವಿರ ಅಣ್ವಸ್ತ್ರ ಸಿಡಿತಲೆಗಳು:

ಚೀನ ಸೇನೆ 2030ರ ವೇಳೆಗೆ ಗರಿಷ್ಠವೆಂದರೆ 1 ಸಾವಿರ, 2027ರ ವೇಳೆಗೆ 700 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದುವ ಸಾಧ್ಯತೆ ಇದೆ ಎಂದು ಪೆಂಟಗನ್‌ ವರದಿ ಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ವರ್ಷದ ಹಿಂದೆ ಚೀನಕ್ಕೆ ಸಂಬಂಧಿಸಿ ಸಿದ್ಧಗೊಳಿಸಿದ್ದ ವರದಿಯಲ್ಲಿ ನಾವು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚೀನ ಅಣ್ವಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿ ಹೇಳಿದೆ. ಈಗಾಗಲೇ ಅಣ್ವಸ್ತ್ರಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯ ಇರುವ ಖಂಡಾಂತರ ಕ್ಷಿಪಣಿಯನ್ನೂ ಚೀನ ಹೊಂದಿರುವ ಸಾಧ್ಯತೆ ಇದೆ ಎಂದು ಉಲ್ಲೇಖೀಸಲಾಗಿದೆ. ಆದರೆ, ಈ ವರದಿಯನ್ನು ಏಕಪಕ್ಷೀಯ ಎಂದು ಚೀನ ತಿರಸ್ಕರಿಸಿದೆ. ಅಮೆರಿಕದ ಬಳಿ 5,550, ರಷ್ಯಾ ಬಳಿ 6,255 ಅಣ್ವಸ್ತ್ರ ಸಿಡಿತಲೆಗಳು ಇವೆ ಎಂದು ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನ ಸಂಸ್ಥೆ ಈ ಹಿಂದೆ ನಡೆಸಿದ್ದ ಅಧ್ಯಯನದಲ್ಲಿ ಉಲ್ಲೇಖೀಸಿತ್ತು.

ಟಾಪ್ ನ್ಯೂಸ್

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

1-aa-2-bg

Ratan Tata; ಪಾರ್ಸಿ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಕ್ರಿಯೆ: ಸರ್ವ ಧರ್ಮ ಪ್ರಾರ್ಥನೆ

Terror 2

Hizb-Ut-Tahrir ಉಗ್ರ ಸಂಘಟನೆ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

Western Ghats: ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಾಸ್ ಕಾರಂತ್

Western Ghats: ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಸ್ ಕಾರಂತ್

Vijayendra (2)

Congress ಸರಕಾರದಲ್ಲಿ ಗುದ್ದಲಿ ಪೂಜೆ ಅಲ್ಲ,ಗುದ್ದಲಿ ಕೂಡ ಕಾಣದ ಸ್ಥಿತಿ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ ಆಕ್ರೋಶ: ನಾಗಾ ಮಾನವ ತಲೆಬುರುಡೆ ಹರಾಜು ವಾಪಸ್‌!

ಭಾರತ ಆಕ್ರೋಶ: ನಾಗಾ ಮಾನವ ತಲೆಬುರುಡೆ ಹರಾಜು ವಾಪಸ್‌!

Nobel Prize: ಪ್ರೊಟೀನ್‌ ಸಂಶೋಧನೆ… ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌

Nobel Prize: ಪ್ರೊಟೀನ್‌ ಸಂಶೋಧನೆ… ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್‌

isrel netanyahu

Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ

Godfather of Artificial Intelligence and the Nobel Prize in Physics for tw

Nobel: ಕೃತಕ ಬುದ್ಧಿಮತ್ತೆ ಗಾಡ್‌ಫಾದರ್‌ ಸೇರಿ ಇಬ್ಬರಿಗೆ ಭೌತಶಾಸ್ತ್ರದ ನೋಬೆಲ್‌ ಪ್ರಶಸ್ತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

kr

Udupi: ಆಟೋರಿಕ್ಷಾಕ್ಕೆ ಟೆಂಪೋ ಢಿಕ್ಕಿ: ಐವರಿಗೆ ಗಾಯ

1-deee

Chikkamagaluru: ಬಂದೂಕಿನಿಂದ ಗುಂಡು ಹಾರಿಸಿ ಕೊ*ಲೆ: ಆರೋಪಿಗೆ ಜೀವಾವಧಿ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.