![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 5, 2021, 6:44 AM IST
ಉಡುಪಿ: ಕೊಕ್ಕರ್ಣೆ ಮತ್ತು ಆರೂರು ವ್ಯಾಪ್ತಿಯ ಗ್ರಾಮಗಳಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನ. 20ರಂದು ನಡೆಯಲಿದೆ.
ಕಂದಾಯ ಸಚಿವರು ಭಾಗವಹಿ ಸಲಿದ್ದಾರೆ. ಪೂರ್ವಾಹ್ನ ಕೊಕ್ಕರ್ಣೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಅಪರಾಹ್ನ ಆರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ. ನ. 21ರ ಪೂರ್ವಾಹ್ನ ಕೆಂಜೂರು ಗ್ರಾಮದಲ್ಲಿ ಕೊರಗರ ಕಾಲನಿಗೆ ಭೇಟಿ ನೀಡಲಿದ್ದಾರೆ.
ಹಾಗೂ 38ನೇ ಕಳೂ¤ರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಆದ್ದರಿಂದ ಕೊಕ್ಕರ್ಣೆ, ಆರೂರು, 38ನೇ ಕಳ್ತೂರು ಗ್ರಾ.ಪಂ.ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಥವಾ ಅರ್ಜಿಗಳನ್ನು ನ. 16ರೊಳಗೆ ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ಅಥವಾ ಕೊಕ್ಕರ್ಣೆ, ಆರೂರು, 38ನೇ ಕಳ್ತೂರು ಗ್ರಾಮ ಕರಣಿಕರ ಕಚೇರಿಗಳಲ್ಲಿ ನೀಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.