ದೀಪಾವಳಿ ಹಬ್ಬ ಲಂಬಾಣಿ ಸಮುದಾಯಕ್ಕೆ ಹೊಸ ವರ್ಷ
Team Udayavani, Nov 5, 2021, 10:34 AM IST
ದೇವನಹಳ್ಳಿ: ಲಂಬಾಣಿಗರಿಗೆ ದೀಪಾವಳಿ ಹಬ್ಬವು ವಿಶೇಷ ಹಬ್ಬವಾಗಿದ್ದು, ಹೊಸವರ್ಷದ ಪ್ರಾರಂಭದ ಸಂಕೇತವಾಗಿದೆ. ಜಿಲ್ಲೆಯ ಲಂಬಾಣಿ ತಾಂಡಗಳಲ್ಲಿ ದೀಪಾವಳಿ ಹಬ್ಬವನ್ನು ಶ್ರದ್ಧಾಭಕ್ತಿ ಯಿಂದ ಆಚರಿಸಿದರು. ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಲಂಬಾಣಿ ತಾಂಡಗಳು ಇವೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 17, ದೇವನ ಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಯಲ್ಲಿ 6, ನೆಲಮಂಗಲ ತಾಲೂಕಿನಲ್ಲಿ 4 ತಾಂಡಗಳು ಸೇರಿದಂತೆ ಒಟ್ಟು 27 ತಾಂಡಗಳು ಜಿಲ್ಲೆಯಲ್ಲಿವೆ.
ಗಂಗಾಮಾತೆಗೆ ಪೂಜೆ: ಲಂಬಾಣಿ ತಾಂಡದವರು ಸಾಮೂಹಿಕವಾಗಿ ಮಧ್ಯಾಹ್ನದ ಭೋಜನ ನಂತರ ತಾಂಡಾದಲ್ಲಿ ಹರಟೆ, ಮೋಜು, ಮಸ್ತಿ ನಡೆಯುತ್ತದೆ. ಕತ್ತಲಾಗುತ್ತಿದ್ದಂತೆ ಹೆಣ್ಣು ಮಕ್ಕಳು ಒಂಬತ್ತು ದಿನಗಳಿಂದ ಬೆಳೆಸಿದ್ದ ನವಧಾನ್ಯಗಳ ಪೈರು (ತೀಜ್) ಮತ್ತು ಮಣ್ಣಿನ ಹಣತೆ ಹೆಚ್ಚಿ ತಟ್ಟೆಯಲ್ಲಿ ಇಟ್ಟು ದೇವಾಲಯಗಳಿಗೆ ನಂತರ ಎಲ್ಲ ಮನೆಗಳಿಗೆ ತೆರಳಿ ಹೊಸ ವರ್ಷದ ಶುಭಾಶಯ ಕೋರುತ್ತಾರೆ. ಇಡೀ ರಾತ್ರಿ ಈ ಪ್ರಕ್ರಿಯೆ ಮುಗಿದ ನಂತರ ಹೆಣ್ಣು ಮಕ್ಕಳು ಮಾರನೇ ದಿನ ಹೊಸ ಉಡುಗೆಯೊಂದಿಗೆ ಪೈರುಗಳನ್ನು ಅಲಂಕರಿಸಿ ತಲೆಯ ಮೇಲೆ ಹೊತ್ತು ನೀರು ತುಂಬಿರುವ ಕೆರೆ ಕುಂಟೆಗಳ ಬಳಿ ತೆರಳಿ ಭಕ್ಷಿಸು ಬಂದ ಹಣದಲ್ಲಿ ಪ್ರಸಾದ ಸಿದ್ಧಪಡಿಸಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುತ್ತಾರೆ.
ಇದನ್ನೂ ಓದಿ:- ಹೊರಬಂತು ‘ಒಂಬತ್ತನೇ ದಿಕ್ಕು’ ಟ್ರೇಲರ್: ಹೊಸ ದಿಕ್ಕಿನತ್ತ ಯೋಗಿ ಚಿತ್ತ
ಧೂಪ ಸಮರ್ಪಣೆ: ದಬಕಾರ್ ದೀಪಾವಳಿ ಯಲ್ಲಿ ಅತ್ಯಂತ ಮುಖ್ಯವಾದದು ಹಿರಿಯರಿಗೆ ಧೂಪ ಸಲ್ಲಿಸುವುದು. ಹತ್ತಾರು ತಲೆಮಾರಿನ ಅಜ್ಜಂದಿರ, ಅಜ್ಜಿಯರ, ದೊಡ್ಡಪ್ಪ, ಚಿಕ್ಕಪ್ಪಂದಿರ ಹೆಸ ರಿಗೂ ಪ್ರತ್ಯೇಕ ಸಿಹಿ ಖಾದ್ಯ, ತುಪ್ಪ ಧೂಪವನ್ನು ಅಡುಗೆ ಒಲೆಯ ಕೆಂಡದಲ್ಲಿ ಸಮರ್ಪಣೆ ಮಾಡುತ್ತಾರೆ. ವಂಶವೃಕ್ಷ ಆಧಾರಿತ ಪದ್ಧತಿಗೆ ಸೀಮಿತವಾಗಿದ್ದು, ಮದುವೆಯಾಗಿ ಹೋಗಿರುವ ಹೆಣ್ಣು ಮಕ್ಕಳಿಗೆ ಅವಕಾಶವಿಲ್ಲ.
ನವಧಾನ್ಯಗಳ ಬುಟ್ಟಿಗೆ ಪೂಜೆ: ದಸರಾ ನವ ರಾತ್ರಿಯ ವಿವಿಧ ಪೂಜೆಯ ಸಮಾನತೆ ಎಂಬಂತೆ ಲಂಬಾಣಿಗರಲ್ಲಿ ದೀಪಾವಳಿಗೆ ಒಂಬತ್ತು ದಿನ ಮೊದಲೇ ಹಬ್ಬದ ಸಿದ್ಧತೆ ನಡೆಯತ್ತದೆ. ಪ್ರತಿ ತಾಂಡದ ದೇವಾಲಯಗಳಲ್ಲಿ ಋತಿಮತಿಯಾಗದ ಹೆಣ್ಣು ಮಕ್ಕಳು ಬಿದಿರುಬುಟ್ಟಿ ಅಥವಾ ನೂತನ ಪಾತ್ರೆಗಳಲ್ಲಿ ಮಣ್ಣು, ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ ನವಧಾನ್ಯಗಳನ್ನು ಶುಚಿಭೂತರಾಗಿ ಬಿತ್ತನೆ ಮಾಡಿ ಪೂಜೆ ಸಲ್ಲಿಸುತ್ತಾರೆ.
ಪ್ರತಿ ದಿನ ಬಿತ್ತನೆ ಮಾಡಿದ ನವಧಾನ್ಯಗಳ ಬುಟ್ಟಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸುತ್ತಾರೆ. ತಮ್ಮ ಲಂಬಾಣಿ ಭಾಷೆಯಲ್ಲೇ ಹಾಡುವುದು ನೃತ್ಯ ಮಾಡುವುದು ಸಂಪ್ರದಾಯ ಎಂದು ಲಕ್ಷ್ಮಮ್ಮ ಹೇಳುತ್ತಾರೆ. ದೇವಾಲಯದ ಆವರಣಗಳಲ್ಲಿ, ತಾಂಡದ ನಾಯಕ್(ಯಜಮಾನ), ತೋಟಿ (ಡಾವ್), ತಳವಾರ(ಕಾರ್‌ಬಾರಿ)ಮನೆಯಂಗಳ ದಲ್ಲಿ ಹೂವುಗಳನ್ನು ಚೆಲ್ಲುವುದು ಸಂಪ್ರದಾಯ. ನಂತರ ಕುಟುಂಬದ ಹಿರಿಯ ಮೃತರಾಗಿ ರುವವ ರಿಗೆ ಧೂಪ(ದಬಕಾರ್)ಸಲ್ಲಿಸುವುದು ಮತ್ತು ಮೃತರ ಸಮಾಧಿಗಳಿಗೆ ಪೂಜೆ ನೈವೇದ್ಯ ನಡೆಸು ವುದು ಸಮುದಾಯದಲ್ಲಿ ನಡೆದು ಬಂದಿರು ವುದು ರೂಢಿ ಎಂದು ಹಿರಿಯರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.