ಈ ವಾರ ತೆರೆಗೆ ‘ಗುಲಾಲ್ ಡಾಟ್ ಕಾಂ’
Team Udayavani, Nov 5, 2021, 11:27 AM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಗುಲಾಲ್ ಡಾಟ್ ಕಾಂ’ ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು 70ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ. ಔಟ್ ಆ್ಯಂಡ್ ಔಟ್ ಕಾಮಿಡಿ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ “ಗುಲಾಲ್ ಡಾಟ್ ಕಾಂ’ ಚಿತ್ರಕ್ಕೆ ಶಿವು ಜಮಖಂಡಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಂಗೀತ ನೀಡಿ, ನಿರ್ದೇಶನ ಮಾಡಿದ್ದಾರೆ.
ಚಿತ್ರರಂಗದಲ್ಲಿ ಮಿಂಚಬೇಕು, ಸ್ಟಾರ್ ಆಗಬೇಕು ಎಂಬ ಕನಸನ್ನು ಹೊತ್ತು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಗಾಂಧಿನಗರಕ್ಕೆ ಬರುವ ಆರು ಜನ ಹುಡುಗರು ಇಲ್ಲಿ ಹೇಗೆ ಹಾದಿ ತಪ್ಪುತ್ತಾರೆ. ಅದರಿಂದ ಏನೇನಾಗುತ್ತದೆ. ಇದರಿಂದ ಆ ಹುಡುಗರು ಹೊರಗೆ ಬರುತ್ತಾರಾ? ಇಲ್ಲವಾ ಎನ್ನುವ ಒಂದು ಎಳೆಯ ಸುತ್ತ “ಗುಲಾಲ್ ಡಾಟ್ ಕಾಂ’ ಚಿತ್ರದ ಕಥಾಹಂದರ ಸಾಗುತ್ತದೆ.
ಇದನ್ನೂ ಓದಿ:ಪುನೀತ್ ಇಲ್ಲದ ಮೇಲೆ… ಹೊಸಬರ ಕನಸುಗಳು ಅರ್ಧಕ್ಕೆ ನಿಂತಿವೆ…
“ಜವಾರಿ ಜಂಕ್ಷನ್ ಮೂವೀಸ್’ ಬ್ಯಾನರ್‌ನಲ್ಲಿ ನಿರ್ಮಾಣವಾದ ಚಿತ್ರದಲ್ಲಿ ತಬಲ ನಾಣಿ, ಬಿಗ್‌ಬಾಸ್ ದಿವಾಕರ್, ಜೋಕರ್ ಹನುಮಂತು, ಸದಾನಂದ್, ಮನು ಜಮಖಂಡಿ, ಶಂಕರ್ ಅಂಬಿಕೇರ್, ನೇತ್ರಾ ಗಗನ್, ಸೋನು ಪಾಟೀಲ್, ಪೂಜಾ, ಶೋಭರಾಜ್, ಮೋಹನ್ ಜುನೇಜಾ ಮೊದಲಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಆಟೋ ರಾಮಣ್ಣ’ ಎಂಬ ಮತ್ತೂಂದು ಚಿತ್ರ ಕೂಡ ಈ ವಾರ ಬಿಡುಗಡೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.