ವ್ಯಾಲಿ ನೀರು ಚಿತ್ರಾವತಿ ನದಿಗೆ ಸೇರಿಲ್ಲ

ವದಂತಿಗಳಿಗೆ ಜನ ಆತಂಕಪಡುವುದು ಬೇಡ  ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್‌.ಆರ್‌.ರವೀಂದ್ರನಾಥ್‌ ಸ್ಪಷ್ಟನೆ

Team Udayavani, Nov 5, 2021, 12:23 PM IST

ವ್ಯಾಲಿ ನೀರು ಚಿತ್ರಾವತಿ ನದಿಗೆ ಸೇರಿಲ್ಲ

ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಬ್ಟಾಳ- ನಾಗವಾರ ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರು ಮಳೆ ನೀರಿನ ಜೊತೆಗೆ ಪೆರೇಸಂದ್ರ ಬಳಿಯ ರಾಮಸಮುದ್ರ ಕೆರೆಯ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಸೇರಿದೆ ಎಂಬುದು ಸಂಪೂರ್ಣ ನಿರಾಧಾರವಾಗಿದೆ.

ಇದು ಕೇವಲ ವದಂತಿಯಷ್ಟೇ ಎಂದು ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಸ್‌.ಆರ್‌. ರವೀಂದ್ರನಾಥ್‌ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ರಾಮಸಮುದ್ರ ಕೆರೆಯ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಎಚ್‌.ಎನ್‌.ವ್ಯಾಲಿ ಸಂಸ್ಕರಿತ ನೀರು ಸೇರಿದೆ ಎಂಬ ಕುರಿತು ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ವಿಷಯ ಹರಿದಾಡುತ್ತಿದ್ದು, ಈ ವದಂತಿಗಳ ಕುರಿತು ಅವರು ಈ ಸ್ಪಷ್ಟನೆ ನೀಡಿದ್ದಾರೆ.

62 ಕೆರೆಗೆ ನೀರು ಹರಿದಿದೆ: ಬೆಂಗಳೂರು ನಗರದ ಹೆಬ್ಟಾಳ- ನಾಗವಾರ ವ್ಯಾಲಿಯ ತ್ಯಾಜ್ಯ ನೀರನ್ನು ಸಂಸ್ಕರಣಾ ಘಟಕದಿಂದ ಎರಡು ಹಂತಗಳಲ್ಲಿ ಸಂಸ್ಕರಿಸಿ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿನ 65 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯು ಪ್ರಗತಿಯಲ್ಲಿದೆ. ಈ ಯೋಜನೆಯಡಿ ಈವರೆಗೂ ಮೂರೂ ಜಿಲ್ಲೆಯ 65 ಕೆರೆಗಳ ಪೈಕಿ 62 ಕೆರೆಗಳಿಗೆ ನೀರನ್ನು ಹರಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:- ಪುನೀತ್ ನನಗಿಂತ ಮೂರು ತಿಂಗಳು ದೊಡ್ಡವರು : ಕಂಬನಿ ಮಿಡಿದ ಸೂರ್ಯ

ಮಳೆ ನೀರಿನಿಂದ ಕೋಡಿ ಹರಿದಿದೆ: ಈ ಯೋಜನೆಯ ಕ್ಲಸ್ಟರ್‌ 9ರಲ್ಲಿ ರಾಮಸಮುದ್ರ ಕೆರೆಯೂ ಸೇರಿದೆ. ಆದರೆ, ಈ ಕೆರೆಗೆ ಈವರೆಗೂ ಹೆಬ್ಟಾಳ-ನಾಗವಾರ ವ್ಯಾಲಿ ಯೋಜನೆಯ ನೀರನ್ನು ಹರಿಸಿಲ್ಲ. ರಾಮಸಮುದ್ರ ಕೆರೆಗೆ ಹೆಚ್ಚಿನ ಜಲಾನಯನ ಪ್ರದೇಶವಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೆರೆಯು ಕೋಡಿ ಸಹಾ ಹರಿದಿರುತ್ತದೆ ಎಂದು ಹೇಳಿದರು.

ವ್ಯಾಲಿ ನೀರು ಹರಿದಿಲ್ಲ: ಪ್ರಸ್ತುತ ಈ ಕೆರೆಯ ಕೋಡಿ ಹರಿದು ಹೆಚ್ಚುವರಿ ನೀರು ಚಿತ್ರಾವತಿ ನದಿಗೆ ಹರಿಯುತ್ತಿದೆ. ರಾಮಸಮುದ್ರ ಕೆರೆಯು ಎಚ್‌.ಎನ್‌. ವ್ಯಾಲಿ ಯೋಜನೆಯಡಿ ಸೇರಿದೆಯಾದರೂ ಈವರೆಗೆ ಯೋಜನೆಯ ನೀರು ಸದರಿ ಕೆರೆಗೆ ಹರಿದಿಲ್ಲ, ಈ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದರು.

ಅಕ್ಟೋಬರ್‌ನಲ್ಲೇ ಸ್ಥಗಿತ: ಎಚ್‌.ಎನ್‌ ವ್ಯಾಲಿ ಯೋಜನೆಯು ನಿಯಂತ್ರಿತ ಪಂಪಿಂಗ್‌ ವ್ಯವಸ್ಥೆಯಾಗಿರುತ್ತದೆ. 2021ರ ಅಕ್ಟೋಬರ್‌ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದ್ದರಿಂದ ಎಚ್‌.ಎನ್‌. ವ್ಯಾಲಿ ಯೋಜನೆಯಡಿ ಬೆಂಗಳೂರಿನಿಂದ ನೀರು ಪಂಪಿಂಗ್‌ ಮಾಡುವುದನ್ನು ಅಕ್ಟೋಬರ್‌ ತಿಂಗಳಿನಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಕಂದವಾರ ಕೆರೆಯಿಂದ ಕ್ಲಸ್ಟರ್‌ 9ರಲ್ಲಿ ಬರುವ ರಾಮಸಮುದ್ರ ಕೆರೆಯೂ ಒಳಗೊಂಡಂತೆ ಎಲ್ಲಾ ಕೆರೆಗಳಿಗೂ ನೀರು ಹರಿಸುವುದನ್ನು ಸಹ ಕಳೆದ ಅಕ್ಟೋಬರ್‌ ತಿಂಗಳಿನಲ್ಲಿಯೇ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಆದ್ದರಿಂದ ಎಚ್‌-ಎನ್‌ ವ್ಯಾಲಿ ಯೋಜನೆಯಿಂದ ರಾಮಸಮುದ್ರ ಕೆರೆ ಮತ್ತು ಆ ಮೂಲಕ ಚಿತ್ರಾವತಿ ನದಿಗೆ ಈವರೆಗೆ ಯೋಜನೆಯ ನೀರು ಹರಿದಿಲ್ಲ. ಈ ಬಗ್ಗೆ ಹರಿದಾಡುತ್ತಿರುವ ವದಂತಿಗಳಂತೆ ಹೆಬ್ಟಾಳ -ನಾಗವಾರ ವ್ಯಾಲಿ ಯೋಜನೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರು ರಾಮಸಮುದ್ರ ಕೆರೆ ಮತ್ತು ಚಿತ್ರಾವತಿ ನದಿಗೆ ಸೇರಿರುವುದಿಲ್ಲ. ಈ ವದಂತಿಗಳು ಸಂಪೂರ್ಣ ನಿರಾಧಾರವಾಗಿರುತ್ತವೆ ಎಂದು ಸ್ಪಷ್ಟಪಡಿಸಿದರು.

 ನಿರಂತರ ಪರೀಕ್ಷೆಗೆ ಒಳಪಡಿಸುತ್ತೇವೆ- 

ಬಿ.ಡಬ್ಲೂ.ಎಸ್‌.ಎಸ್‌.ಬಿ ಅವರು ಎಚ್‌.ಎನ್‌ ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ನೀಡುತ್ತಿದ್ದು, ಈ ನೀರನ್ನು ನಿರಂತರ ಹಾಗೂ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕುರಿತ ಎಲ್ಲಾ ಫಲಿತಾಂಶದ ವರದಿಗಳು ಸರ್ಕಾರವು ನಿಗದಿ ಪಡಿಸಿರುವ ಮಾನದಂಡಗಳಪರಿಮಿತಿಯಲ್ಲಿರುತ್ತವೆ. ಹಾಗಾಗಿ ಸಾರ್ವಜನಿಕರುಈ ಕುರಿತು ಯಾವುದೇ ವದಂತಿಗಳಿಗೆಕಿವಿಗೊಡಬಾರದು ಹಾಗೂ ಆತಂಕ ಪಡಬಾರದುಎಂದು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.