ಕನ್ನಡ ಭಾಷೆ ಹೃದಯ ಭಾಷೆ: ಬಸವಲಿಂಗ ಮಹಾಸ್ವಾಮೀಜಿ
Team Udayavani, Nov 6, 2021, 1:21 PM IST
ಸೊಲ್ಲಾಪುರ: ಗಡಿನಾಡು ಕನ್ನಡಿಗರಿಗೆ ಯಾವ ಸೌಲಭ್ಯಗಳಿಲ್ಲ ದಿದ್ದರೂ ಅವರ ಕನ್ನಡ ಪ್ರೇಮ ಅಗಾಧ ವಾಗಿದೆ. ಆದರ್ಶ ಕನ್ನಡ ಬಳಗವು ಮಹಾರಾಷ್ಟ್ರದ ನೆಲದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಪೂಜ್ಯ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ನ. 1ರಂದು ಅಕ್ಕಲ್ ಕೋಟೆಯ ವಿರಕ್ತ ಮಠದಲ್ಲಿ ಆದರ್ಶ ಕನ್ನಡ ಬಳಗವು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಹೃದಯ ಭಾಷೆಯಾಗಿದ್ದು, ಅದು ನಮ್ಮೆಲ್ಲರ ಉಸಿರಾಗಿದೆ. ನಾವೆಲ್ಲ ಕನ್ನಡಿಗರು ಭೌತಿಕವಾಗಿ ಮಹಾರಾಷ್ಟ್ರ ದಲ್ಲಿದ್ದರೂ ಭಾವನಾತ್ಮಕವಾಗಿ ಕರ್ನಾ ಟಕದವರಾಗಿದ್ದೇವೆ. ಆದ್ದರಿಂದ ಕರ್ನಾ ಟಕ ಸರಕಾರ ಗಡಿಭಾಗದ ಕನ್ನಡಿಗರತ್ತ ಒಲವು ಹರಿಸಲಿ ಎಂದು ಹೇಳಿದರು.
ಶಿಕ್ಷಕ ವಿದ್ಯಾಧರ ಗುರವ ಮಾತನಾಡಿ, ಕನ್ನಡ ಭಾಷಾ ಬಾಂಧವ್ಯ ಬೆಸೆಯುವ ಭಾಷೆಯಾಗಿದ್ದು, ಕನ್ನಡ ನುಡಿ ನಮ್ಮೆಲ್ಲರ ಹೃದಯದ ಭಾಷೆ. ಆದ್ದರಿಂದ ಎಂದಿಗೂ ನಾವು ನಮ್ಮ ಭಾಷೆಯನ್ನು ಮರೆಯಬಾರದು. ಕನ್ನಡ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಆದರ್ಶ ಕನ್ನಡ ಬಳಗದ ಕಾರ್ಯ ಗಡಿಭಾಗದಲ್ಲಿ ನಿಜಕ್ಕೂ ಉನ್ನತ ಮಟ್ಟಕ್ಕೆ ಬೆಳೆದಿದ್ದು, ಅವರ ಕನ್ನಡ ಪರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಹಿರಿಯ ಕನ್ನಡ ಪ್ರೇಮಿ ಧೂಳಪ್ಪ ಭಜೆ ಅಧ್ಯಕ್ಷತೆ ವಹಿಸಿದರು. ಕನ್ನಡ ಹೋರಾಟಗಾರ ರಾಜಶೇಖರ ಉಮರಾಣಿಕರ ಅವರು ಕರ್ನಾಟಕ ಧ್ವಜಾರೋಹಣ ನೆರವೇರಿಸಿದರು.
ಶಿಕ್ಷಕ ಸಿದ್ರಯ್ಯ ಬಿರಾಜದಾರ, ಸಂಗಣ್ಣ ಫತಾಟೆ, ವಾಸುದೇವ ದೇಸಾಯಿ, ರಾಜಶೇಖರ ಖಾನಪುರೆ, ಮಹೇಶ ಮೇತ್ರಿ, ಬಾಬುರಾವ ಅಂದೇವಾಡಿ, ರಾಜಕುಮಾರ ಗೊಬ್ಬುರ, ಲಕ್ಷ್ಮಣ ಸಮಾಣೆ, ಯಲ್ಲಪ್ಪ ಇಟೆನ
ವರು, ವಿರೇಶ ಕೊಳ್ಳೆ ಸಹಿತ ಕನ್ನಡಾಭಿ ಮಾನಿಗಳು ಉಪಸ್ಥಿತರಿದ್ದರು. ಮಹೇಶ ಮೇತ್ರಿ ನಿರೂಪಿಸಿದರು. ರಾಜಶೇಖರ ಖಾನಪುರೆ ವಂದಿಸಿದರು.
ಕನ್ನಡಮ್ಮನ ಮಡಿಲಿನಿಂದ ದೂರವಿದ್ದರೂ ಸದಾ ಕನ್ನಡಮ್ಮನನ್ನು ಆರಾಧಿಸುತ್ತಾ ಬಂದ ಇಲ್ಲಿನ ಕನ್ನಡಿಗರನ್ನು ಒಳನಾಡಿನ ಕನ್ನಡಿಗರಂತೆ ಪರಿಗಣಿಸಬೇಕು. ಅಲ್ಲದೆ ಕರ್ನಾಟಕ ಸರಕಾರ ಕಲೆ, ಸಾಹಿತ್ಯ ಪ್ರೋತ್ಸಾಹದ ಜತೆಗೆ ಉದ್ಯೋಗ ಭದ್ರತೆ ನೀಡಬೇಕು.-ರಾಜಶೇಖರ ಉಮರಾಣಿಕರಕನ್ನಡ ಹೋರಾಟಗಾರರು, ಅಕ್ಕಲ್‌ಕೋಟೆ
ಹೊರನಾಡಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲು ಕರ್ನಾಟಕ ಸರಕಾರ ಪ್ರತೀವರ್ಷ ಅನುದಾನ ನೀಡಬೇಕು. ಇಲ್ಲಿನ ಕನ್ನಡಿಗರನ್ನು ಒಳನಾಡಿನ ಕನ್ನಡಿಗರಂತೆ ಪರಿಗಣಿಸಬೇಕು. ಅಲ್ಲದೆ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕು.-ಪೂಜ್ಯ ಬಸವಲಿಂಗ ಸ್ವಾಮೀಜಿ ವಿರಕ್ತ ಮಠ ಅಕ್ಕಲ್‌ಕೋಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.