ಜಾನಪದ ಆಚರಣೆ ಜೀವಂತವಿರಲಿ
Team Udayavani, Nov 7, 2021, 3:03 PM IST
ವಿಜಯಪುರ: ಭಾರತೀಯರ ಸಂಸ್ಕೃತಿ ಹಾಗೂ ಸಮಾಜದ ಮೇಲೆ ಪಾಶ್ಚಾತ್ಯರು ಎಷ್ಟೇ ಪ್ರಭಾವ ಬೀರಿದರೂ ಸಹಿತ ಅವರ ಸಂಸ್ಕೃತಿ ಮುಂದೆ ನಮ್ಮ ಜಾನಪದ ರಶ್ಮಿಗಳು ಬಲಿಷ್ಠವಾಗಿ ನಿಲ್ಲಬಲ್ಲವು ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಫ್ಲೋರೋಸಿಸ್ ಸಲಹೆಗಾರ ಮಹಾಂತೇಶ ಹರಗಬಾಳ ಹೇಳಿದರು.
ನಗರದ ರಾಜಾಜಿನಗರ ಬಡಾವಣೆಯಲ್ಲಿ ನಾಡದೇವಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಆಚರಣೆಗಳು ಜೀವಂತ ಇರುವವರೆಗೂ ಕನ್ನಡ ಭಾಷೆಗೆ ಸಾವಿಲ್ಲ. ಕನ್ನಡ ಉಳಿಯಲು ಸಾಂಪ್ರದಾಯಿಕ ಆಚರಣೆಗಳು ಅವಶ್ಯ. ಹಾಗಾಗಿ ನಾವು ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವುದರ ಮೂಲಕ ನಮ್ಮ ಮುಂದಿನ ಯುವ ಪೀಳಿಗೆಗೆ ಅವುಗಳನ್ನು ಬಳುವಳಿಯಾಗಿ ನೀಡಬೇಕಾಗಿದೆ. ಇಂದಿನ ಆಚರಣೆಗಳಿಗೆ ಸಾಮಾಜಿಕ ಜವಾಬ್ದಾರಿ ಕಡಿಮೆ. ಆದರೆ ಹಳೆಯ ಕಾಲದ ದೇಶಿ ಆಚರಣೆಗಳಿಗೆ ಸಮಾಜ ಕಟ್ಟುವ ಶಕ್ತಿಯಿದ್ದು ಅಂಥ ಕಲೆಗಳು ಉಳಿಯಬೇಕು ಎಂದರು.
ನ್ಯಾಯಾಂಗ ಇಲಾಖೆಯ ಅಧೀಕ್ಷಕ ಸಂಗಮೇಶ ಮನಹಳ್ಳಿ ಮಾತನಾಡಿ, ಇಂದಿನ ಆಧುನಿಕತೆ ಅಬ್ಬರದಲ್ಲಿ ನೈಜ ಕಲೆ, ಸಂಸ್ಕೃತಿ ನಶಿಸುತ್ತಿದೆ. ಅವುಗಳ ರಕ್ಷಣೆ, ಪ್ರೋತ್ಸಾಹಕ್ಕಾಗಿ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಸಿದ್ಧಲಿಂಗ ಮನಹಳ್ಳಿ, ಮುರುಗೇಶ ಸಂಗಮ, ಜೈ ಮಾತಾ ಯುವಕ ಸಂಘದ ಅಧ್ಯಕ್ಷ ಬಾಬು ಏಳಗಂಟಿ, ಶಿವಾನಂದ ಬಾಗೇವಾಡಿ, ಮುತ್ತು ದೇಶಪಾಂಡೆ, ಸಂಜು ಬಡಿಗೇರ, ವಿನಯ ಕುರ್ಲೆ, ಜ್ಯೋತಿ ಸಂಗಮ, ಜಯಶ್ರೀ ಪಾಟೀಲ, ಪವಿತ್ರಾ ಕಂಕಣವಾಡಿ, ಸರೋಜಿನಿ ಬಿರಾದಾರ, ಪವಿತ್ರಾ ಬಿರಾದಾರ, ಎಂ.ಎಸ್. ಕಳ್ಳಿಮನಿ, ಸಂತೋಷ ಬಾಗೇವಾಡಿ, ವೀರೇಶ ವಾಂಗಿ, ಸತೀಶ ಬಿರಾದಾರ, ಚಂದ್ರಶೇಖರ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.