ಕೋವಿಡ್ ಲಸಿಕೆಗೆ ನಿರ್ಲಕ್ಷ್ಯ ಸಲ್ಲ: ಡಾ| ವಿರುಪಾಕ್ಷಪ್ಪ
Team Udayavani, Nov 7, 2021, 5:15 PM IST
ಮುದಗಲ್ಲ: ಜಗತ್ತನೇ ತಲ್ಲಣಗೊಳ್ಳಿಸಿರುವ ಕೋವಿಡ್-19 ಹರಡದಂತೆ ತಡೆಗಟ್ಟಲು ಸಾರ್ವಜನಿಕರು ಕೋವಿಡ್ ಲಸಿಕೆ ಬಗ್ಗೆ ನಿರ್ಲಕ್ಷವಹಿಸಿದೆ. ಎಲ್ಲರೂ ಲಸಿಕೆ ಹಾಕಿಸಿಕೊಂಡ ಆರೋಗ್ಯವಂತ ಸಮಾಜ ನಿರ್ಮಿಸೋಣ ಎಂದು ವೈದ್ಯಾಧಿಕಾರಿ ಡಾ| ವಿರುಪಾಕ್ಷಪ್ಪ ಹೇಳಿದರು.
ಮಾಕಾಪೂರು ಪ್ರಾಥಮಿಕ ಕೇಂದ್ರದ ವ್ಯಾಪ್ತಿಯ ಬನ್ನಿಗೋಳ ಗ್ರಾಮಕ್ಕೆ ಭೇಟಿ ನೀಡಿದ ಅವರು, ಕೊರೊನಾ ಲಸಿಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ದೇಶದ ಜನ ಸಂಖ್ಯೆ 130 ಕೋಟಿಗೂ ಹೆಚ್ಚಿದೆ. ಎಲ್ಲಾರಿಗೂ ಸರಕಾರಿ ನೌಕರಿ, ಸೌಲಭ್ಯ ಬೇಕು. ಆದರೆ ಸರಕಾರವೇ ನೀಡುವ ಕೊರೊನಾ ಲಸಿಕೆ ಬಗ್ಗೆ ಅಪನಂಬಿಕೆ ಹೊಂದಲಾಗಿದೆ. ಪ್ರಜ್ಞಾವಂತರು ಲಸಿಕೆ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.
ಬನ್ನಿಗೋಳ ವೈದ್ಯಾಧಿಕಾರಿ ಡಾ| ಶೇಕ್ಷಾವಲಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸುಭಾಸ, ಲಿಂಗರಾಜ ವಿಶ್ವಕರ್ಮ, ಮುಖ್ಯಗುರುಗಳಾದ ಶೀಲಾ. ಬಿ, ಮತ್ತು ವಿರುಪಾಕ್ಷಯ್ಯ, ಅಂಗನವಾಡಿ ಕಾರ್ಯಕರ್ತೆ ಕಸ್ತೂರಿ ಬಾ, ಅಜೀಮ್ ಪ್ರೇಮಜೀ ಫೌಂಡೇಶನ್ ಸಂಸ್ಥೆಯ ಡಾಟಾ ಎಂಟ್ರಿ ಆಪರೇಟರ್ ಸುರೇಶ ಕುಂಬಾರ, ಬಸವರಾಜ ಮಾಕಾಪೂರು, ಆಶಾ ಕಾರ್ಯಕರ್ತೆ ಶಾಂತಾ ಬಡಿಗೇರ, ಸ್ವಯಂ ಸೇವಕಿ ದ್ಯಾಮಮ್ಮ ಬನ್ನಿಗೋಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.