ಹಸನ್ಮಾಳದ ಗೌಳಿವಾಡದಲ್ಲಿ ಸಂಭ್ರಮದಿಂದ ಜರುಗಿದ ದನಗರ ಗೌಳಿಗರ ಶಿಲಾಂಗಣ
Team Udayavani, Nov 7, 2021, 5:41 PM IST
ದಾಂಡೇಲಿ: ಹಿಂದು ಧರ್ಮದ ಹಬ್ಬ ಹರಿದಿನಗಳನ್ನು ತಮ್ಮದೇ ಆದ ಸಂಸ್ಕೃತಿಯಡಿಯಲ್ಲಿ ಆಚರಿಸಿಕೊಂಡು ನಾಡಿನ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ದನಗರ ಗೌಳಿ ಸಮುದಾಯವು ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುವುದನ್ನು ರೂಢಿ ಮಾಡಿಕೊಂಡಿದೆ.
ಅಂತೆಯೆ ನಗರದ ಸಮೀಪದಲ್ಲಿರುವ ಹಸನ್ಮಾಳದ ಗೌಳಿವಾಡದಲ್ಲಿ ವಾಡದಲ್ಲಿರುವ ಎಲ್ಲ ಗೌಳಿ ಸಮುದಾಯವರು ಸೇರಿ ಸಾಮೂಹಿಕವಾಗಿ ಶಿಲಾಂಗಣ ಕಾರ್ಯಕ್ರಮವನ್ನು ಶುಕ್ರವಾರದಿಂದ ಆರಂಭಿಸಿ ಭಾನುವಾರ ಸಂಪನ್ನಗೊಳಿಸಿದರು. ಈ ಕಾರ್ಯಕ್ರಮದಲ್ಲಿ ದನಗರ ಗೌಳಿ ಸಮುದಾಯದವರ ಬುಡಕಟ್ಟು ಸಂಸ್ಕತಿಯ ನೃತ್ಯಗಳು ಎಲ್ಲರ ಗಮನ ಸೆಳೆದವು. ತಮ್ಮದೇ ವಿಶಿಷ್ಟ ಸಂಸ್ಕೃತಿಯ ಉಡುಗೆಯನ್ನು ತೊಟ್ಟು ನೃತ್ಯ ಹಾಗೂ ವಿವಿಧ ಧಾರ್ಮಿಕ ಮೌಲ್ಯಗಳನ್ನು ಜನಮಾನಸಕ್ಕೆ ಪರಿಚಯಿಸುವ ಕಾರ್ಯಕ್ರಮಗಳು ಜನಾಕರ್ಷಣೆಗೆ ಪಾತ್ರವಾಯಿತು.
ದನಗರ ಗೌಳಿ ಸಮುದಾಯದ ವಿಶಿಷ್ಟ ರೀತಿಯ ಶಿಲಾಂಗಣ ಕಾರ್ಯಕ್ರಮವನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸಿದ್ದರು. ಈ ಪೂಜಾ ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ದನಗರ ಗೌಳಿ ಸಮುದಾಯದ ಬಾಂಧವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.