![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Nov 8, 2021, 7:47 AM IST
ಮೇಷ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಉತ್ತಮ ವರಮಾನ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರುಹಿರಿಯರಿಂದ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ವೃಷಭ: ನೂತನ ಜನರ ಭೇಟಿ. ದೀರ್ಘ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ನಿರೀಕ್ಷಿತ ಧನ ಸಂಪತ್ತು ಪ್ರಾಪ್ತಿ. ಅಧ್ಯಯನಶೀಲರಿಗೆ ದೂರ ಪ್ರಯಾಣ ಸಂಭವ. ದಾಂಪತ್ಯ ಸುಖ ವೃದ್ಧಿ.
ಮಿಥುನ: ಹೆಚ್ಚಿದ ಜವಾಬ್ದಾರಿಯಿಂದ ಆರೋಗ್ಯದಲ್ಲಿ ಏರುಪೇರು. ದೇಹಾಯಾಸ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ. ಗುರುಹಿರಿಯರಿಂದ ಸರಿಯಾದ ಮಾರ್ಗದರ್ಶನ. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಶಿಸ್ತು ಅಗತ್ಯ.
ಕರ್ಕ: ಉತ್ತಮ ಆರೋಗ್ಯ. ನೂತನ ಮಿತ್ರರ ಭೇಟಿ. ಪಾಲುದಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ. ನಿರೀಕ್ಷೆಯಂತೆ ಧನಾಗಮ ಪ್ರಾಪ್ತಿ. ಗುರುಹಿರಿಯರೊಂದಿಗೆ ನಿಷ್ಠುರಗೊಳ್ಳದಿರಿ. ಮನೋರಂಜನೆಯಲ್ಲಿ ಸಮಯ ಕಳೆಯುವಿಕೆ.
ಸಿಂಹ: ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳಲ್ಲಿ ಸಫಲತೆ. ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ವೃದ್ಧಿ. ಉದ್ಯೋಗದಲ್ಲಿ ಪರರ ಸಹಕಾರದಿಂದ ಗುರಿ ಸಾಧನೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಪತ್ರ ದಾಖಲೆಯಿಂದ ನೆಮ್ಮದಿ.
ಕನ್ಯಾ: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಉತ್ತಮ ವಾಕ್‌ಪಟುತ್ವ. ಭೂಮ್ಯಾರಿ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ. ಆದಾಯಕ್ಕೆ ಸರಿಯಾಗಿ ಉಳಿತಾಯ ಸಂಭವ.
ತುಲಾ: ಹಠಮಾರಿತನ ಸಲ್ಲದು. ನಿಮ್ಮಲ್ಲಿರುವ ವಿದ್ಯೆ ವಿನಯದಿಂದ ಹೆಚ್ಚಿನ ಯಶಸ್ಸು ಸಂಭವ. ಉತ್ತಮ ಧನಾರ್ಜನೆ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ದಾಂಪತ್ಯದಲ್ಲಿ ಪರಸ್ಪರ ಪ್ರೋತ್ಸಾಹ ಅಗತ್ಯ.
ವೃಶ್ಚಿಕ: ಗುರುಹಿರಿಯರ ಮಾರ್ಗದರ್ಶನದಿಂದ ಕೂಡಿದ ಕಾರ್ಯ ವೈಖರಿ. ಉದ್ಯೋಗ ವ್ಯವಾರಗಳಲ್ಲಿ ಉತ್ತಮ ಅಭಿವೃದ್ಧಿ. ದೂರದ ವ್ಯವಹಾರಗಳಿಂದ ಧನಾರ್ಜನೆ. ವಿದ್ಯಾರ್ಥಿಗಳಿಗೆ ವಿದೇಶಿ ನೆಲದಲ್ಲಿ ಅಭ್ಯಸಿಸುವವರಿಗೆ ಹೆಚ್ಚಿದ ಪ್ರಗತಿ.
ಧನು: ನಿರೀಕ್ಷಿತ ಸ್ಥಾನ ಗೌರವ ವೃದ್ಧಿ. ಆರೋಗ್ಯ ಉತ್ತಮ. ಹಿರಿಯರಿಂದಲೂ ಮೇಲಧಿಕಾರಿಗಳಿಂದಲೂ ಉತ್ತಮ ಸಹಕಾರ ಪ್ರೋತ್ಸಾಹ ಲಭ್ಯ. ದಾಂಪತ್ಯದಲ್ಲಿ ಅನುರಾಗ ಪ್ರೋತ್ಸಾಹ ವೃದ್ಧಿ. ಮಕ್ಕಳಿಂದ ಹೆಚ್ಚಿದ ಸುಖ.
ಮಕರ: ಆಸ್ತಿ ವಾಹನಾದಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ಮಾಡಿ. ಆರೋಗ್ಯ ಗಮನಿಸಿ. ಮಕ್ಕಳಿಂದ ಹೆಚ್ಚಿದ ಸಂತೋಷ. ದಾಂಪತ್ಯ ತೃಪ್ತಿದಾಯಕ.
ಕುಂಭ: ಸಹೋದ್ಯೋಗಿಗಳಿಂದಲೂ ಸಹೋದರ ಸಮಾನರಿಂದಲೂ ಸಂದಭೋìಚಿತ ಸಹಕಾರ ಲಭ್ಯ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಸಂಪತ್ತು. ದೀರ್ಘ ಪ್ರಯಾಣದ ವ್ಯವಹಾರದಲ್ಲಿ ಧನ ಲಾಭ. ಉತ್ತಮ ವಾಕ್‌ಪಟುತ್ವ ವೃದ್ಧಿ. ಹಿರಿಯರ ಆಶೀರ್ವಾದ.
ಮೀನ: ಉದಾಸೀನತೆ ತೋರದಿರಿ. ಆರೋಗ್ಯ ಗಮನಿಸಿ. ಸರಿಯಾಮ ನಿಯಮಿತ ಆಹಾರ ವ್ಯಾಯಾಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಉತ್ತಮ ಧನಾರ್ಜನೆ. ಗುರುಹಿರಿಯರ ಮಾರ್ಗದರ್ಶನದಲ್ಲಿ ಶ್ರೇಯಸ್ಸು
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.