ಮಮತಾ ಮಡಿವಾಳ: ಮಗಳ ಕ್ರಿಕೆಟ್‌ ಭವಿಷ್ಯಕ್ಕಾಗಿ ತಂದೆಯ ತ್ಯಾಗ

Team Udayavani, Nov 8, 2021, 9:10 AM IST

ಮಮತಾ ಮಡಿವಾಳ: ಮಗಳ ಕ್ರಿಕೆಟ್‌ ಭವಿಷ್ಯಕ್ಕಾಗಿ ತಂದೆಯ ತ್ಯಾಗ

ಸೇಡಂ: ಅದೊಂದು ತೀರಾ ಬಡ ಕುಟುಂಬ. ತಂದೆ ಕಂಪ್ಯೂಟರ್‌ ತರಬೇತಿ ಕೆಲಸ ಮಾಡುತ್ತಾ, ತನ್ನಿಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಿರುವ ಹೊತ್ತಿಗೆ ದೊಡ್ಡ ಮಗಳಿಗೆ ಕ್ರಿಕೆಟ್‌ ಪ್ರೀತಿ ಜೋರಾಗಿತ್ತು. ಪ್ರತೀ ರಜಾದಿನ ಯುವಕರೊಂದಿಗೆ ಸೇರಿ ಕ್ರಿಕೆಟ್‌ ಆಟ ಆಡುವಷ್ಟು ಈ ಕ್ರೀಡೆಯಲ್ಲಿ ಆಸಕ್ತಿ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಮದುವೆ ಮಾಡಿ ಮುಗಿಸುವುದು ಬಹುತೇಕ ತಂದೆಯಂದಿರ ಸ್ವಭಾವ. ಆದರೆ ಈ ತಂದೆ ಮಗಳ ಕ್ರಿಕೆಟ್‌ ಪ್ರೀತಿಯನ್ನು ನೋಡಿ, ಇರುವ ಉತ್ತಮ ನೌಕರಿ, ಊರು ಬಿಟ್ಟು ದೂರದ ಹೈದರಾಬಾದ್‌ ಸೇರಿದರು! ಅದೂ ಮಗಳ ಕ್ರಿಕೆಟ್‌ ಪ್ರಗತಿಗಾಗಿ.

ಇದು ಎಲ್ಲೋ ಬೆಂಗಳೂರು, ಮಂಗಳೂರಿನ ಕಥೆಯಲ್ಲ. ಇದು ಕಲ್ಲಿನ ನಗರಿ, ಕಲ್ಯಾಣ ನಾಡಿನ ಸೇಡಂ ತಾಲೂಕಿನ ಕೋಲಕುಂದಾ ಗ್ರಾಮದ ಯುವತಿಯ ಕಥೆ.

ತೆಲುಗನ್ನಡದ ಗ್ರಾಮದ ನಿವಾಸಿ ವೀರೇಶ, ಭಾಗ್ಯ ಮಡಿವಾಳ ದಂಪತಿಯ ಮಗಳು ಮಮತಾ. ಈಕೆ ಈಗ ಭಾರತೀಯ 19 ವಯೋಮಿತಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಗ್ರಾಮಕ್ಕೂ ಕೀರ್ತಿ ತಂದಿದ್ದಾಳೆ. ಅಲ್ಲದೇ 16 ವಯೋಮಿತಿ ತಂಡದಲ್ಲಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಇದೆ. ಜೊತೆಗೆ ರಾಷ್ಟ್ರೀಯ ಪಂದ್ಯದ ವೇಳೆ ಒಂದು ಬಾರಿ ತಂಡದ ನಾಯಕಿ ಸಹ ಆಗಿದ್ದಾರೆ.

ಇದನ್ನೂ ಓದಿ:ಭಾರತ ವಿಶ್ವಕಪ್‌ನಿಂದ ಹೊರಬೀಳಲು ಕಾರಣಗಳು ಒಂದೆರಡಲ್ಲ !

ನವೆಂಬರ್‌ನಲ್ಲಿ ಜೈಪುರದಲ್ಲಿ ನಡೆಯುವ 19 ವಯೋಮಿತಿ ಪಂದ್ಯದಲ್ಲಿ ಮಮತಾ ಆಡಲಿದ್ದಾಳೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯುವ ವಿಶ್ವಕಪ್‌ ನಲ್ಲೂ ಆಕೆ ಮಿಂಚುವ ನಿರೀಕ್ಷೆಯಿದೆ. ಮಮತಾ, ರಣಜಿ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾಳೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ತಂದೆಯೇ ಶ್ರೀರಕ್ಷೆ: ಗುಲ್ಬರ್ಗ ವಿವಿಯಲ್ಲಿ ಕಂಪ್ಯೂಟರ್‌ ಹಾರ್ಡವೇರ್‌ ಶಿಕ್ಷಣ ನೀಡುತ್ತಿದ್ದ ವೀರೇಶ ಮಡಿವಾಳ, ತನ್ನ ಮಗಳಲ್ಲಿರುವ ಕ್ರಿಕೆಟ್‌ ಆಸಕ್ತಿ ಕಂಡು ಆರು ವರ್ಷಗಳ ಹಿಂದೆಯೇ ತನ್ನ ಸ್ವಂತ ಊರು ತಾಲೂಕಿನ ಕೋಲಕುಂದಾ ಬಿಟ್ಟು, ಹೈದ್ರಾಬಾದ್‌ ಸೇರಿದ್ದರು. ಉಪ್ಪಲ್‌ ಸ್ಟೇಡಿಯಂನಲ್ಲಿ ಮಗಳಿಗೆ ಕೋಚಿಂಗ್‌ ಕೊಡಿಸಿದ್ದಾರೆ. ಮಗಳನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಹಂಬಲದಿಂದ ಅನೇಕ ಚಿಕ್ಕಪುಟ್ಟ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಆದರೆ ಈ ವಿಷಯ ಮಗಳಿಗೆ ತಿಳಿಬಾರದೆಂಬ ಮನಸ್ಥಿತಿಯೂ ಅವರದ್ದಾಗಿದೆ. ಮುಂದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ತನ್ನ ಮಗಳು ಮಿಂಚಲಿ ಎಂಬುದು ಅವರ ಆಶಯ.

ಶಿವಕುಮಾರ ನಿಡಗುಂದಾ

ಟಾಪ್ ನ್ಯೂಸ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.