ಮಳೆ ಮುಂದುವರಿಕೆ: ಸಂಕಷ್ಟದಲ್ಲಿ ಬೆಳೆಗಾರರು
Team Udayavani, Nov 8, 2021, 2:17 PM IST
ಸಕಲೇಶಪುರ: ದೀಪಾವಳಿ ಹಬ್ಬ ಮುಗಿದು ನ. 2ನೇ ವಾರಕ್ಕೆ ಕಾಲಿಟ್ಟಿದ್ದರೂ ಹವಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾಲೂಕಿನ ಕಾμ ಬೆಳೆಗಾರರ ವಲಯದಲ್ಲಿ ಆತಂಕ ಹುಟ್ಟಿದೆ.
ಕಳೆದೆರಡು ವರ್ಷಗಳಿಂದ ಹವಮಾನ ವೈಪರೀತ್ಯ ದಿಂದ ಮಳೆ ಸುರಿಯುವುದರಲ್ಲಿ ವ್ಯತ್ಯಾಸವಾಗು ತ್ತಿರುವುದು ಕಂಡು ಬಂದಿದ್ದರೂ, ಈ ವರ್ಷದಷ್ಟು ಗಂಭೀರ ಪರಿಸ್ಥಿತಿ ಕಂಡು ಬಂದಿರಲಿಲ್ಲ. ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ಅರೇ ಬಿಕಾ ಕಾಫಿ ಕೊಯ್ಲು ಬರುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮಳೆ ನಿರಂತರವಾಗಿ ಸುರಿಯು ತ್ತಿರುವುದರಿಂದ ಈಗಾಗಲೆ ಶೇ.25ರಷ್ಟು ಅರೇಬಿಕಾ ಕಾಫಿ ನೆಲದ ಪಾಲಾಗಿದೆ. ಬಾಕಿ ಉಳಿದ ಕಾಫಿ ಯನ್ನು ಕೊಯ್ಲು ಮಾಡಲು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ.
ಕಾಫಿ ಬೆಳೆ ರಕ್ಷಣೆ ಅಸಾಧ್ಯ ಮಳೆಯ ಹಿನ್ನೆಲೆಯಲ್ಲಿ ಕಾಫಿ ಒಣಗಿಸುವುದು ಅಸಾಧ್ಯವಾಗಿರುವುದರಿಂದ ಕಳೆದ 15 ದಿನಗಳಿಂದ ಕಾಫಿ ಕೊಯ್ಲು ಮಾಡುವು ದನ್ನು ಮುಂದೂಡುತ್ತಿದ್ದು, ಬೆಳೆಗಾರರು ಇದೀಗ ಮಳೆ ನಿಲ್ಲದ ಕಾರಣ ಇತ್ತ ಅರೇಬಿಕಾ ಹಣ್ಣನ್ನು ಗಿಡದಲ್ಲಿ ಬಿಡಲು ಆಗದೆ ಒಣಗಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗೂ ಹೀಗೂ ಕಾಫಿ ಯನ್ನು ಕಷ್ಟಪಟ್ಟು ಒಣಗಿಸಿದರೆ ಕಾಫಿ ಯ ಗುಣಮಟ್ಟ ಸಂಪೂರ್ಣವಾಗಿ ಕುಸಿದು ಮಾರುಕಟ್ಟೆಯಲ್ಲಿ ಇಂತಹ ಕಾಫಿ ಬೇಡಿಕೆ ಇಲ್ಲವಾಗುತ್ತದೆ. ಬೆಳೆಗಾರರ ನೋವು ಯಾರಿಗೂ ಹೇಳದಂತಾಗಿದೆ.
ಸುರಿಯುತ್ತಿರುವ ಮಳೆಯಿಂದ ಕಾಫಿ ಯ ರಕ್ಷಣೆ ಗಾಗಿ ಅರೇಬಿಕಾ ಕಾಫಿ ಬೆಳೆಗಾರರು ಕಟಾವು ಮಾಡಿದ ಕಾಫಿ ಯನ್ನು ಒಣಗಿಸಲು ವ್ಯಾಪಕ ಸರ್ಕಸ್ ಮಾಡು ತ್ತಿದ್ದು, ಗೋದಾಮಿನ ಒಳಗೆ ಮನೆಯ ಒಳಗೂ ಕಾಫಿ ಯನ್ನು ಒಣಗಿಸಲು ಇಡುತ್ತಿದ್ದಾರೆ. ಆದರೆ, ಇದೆಲ್ಲದಕ್ಕಿಂತ ಹೆಚ್ಚಾಗಿ ರೋಬಾಸ್ಟ್ ಕಾಫಿ ಕೊಯ್ಲಿನ ಸಮಯದಲ್ಲಿ ಮಳೆ ಬಂದರೆ ಹೇಗಪ್ಪ ಎಂಬ ಪ್ರಶ್ನೆ ಬೆಳೆಗಾರರನ್ನು ಕಾಡುತ್ತಿದೆ. ತಾಲೂಕಿನಲ್ಲಿ ಅರೇಬಿಕಾ ಕಾಫಿ ಬೆಳೆಯುವ ಪ್ರಮಾಣ ಸಣ್ಣಪ್ರಮಾಣದಲ್ಲಿದ್ದು, ಶೇ.85ರಷ್ಟು ಬೆಳೆಗಾರರು ರೋಬಾಸ್ಟ್ ಕಾಫಿ ಯನ್ನು ಬೆಳೆಯುತ್ತಿದ್ದು, ಮಳೆ ಇದೇ ರೀತಿ ಮುಂದುವರಿದರೆ ಕಾಫಿ ಬೆಳೆಗಾರರು ಬೀದಿ ಪಾಲಾಗುವುದರಲ್ಲಿ ಅನುಮಾನವಿಲ್ಲ.
ತಜ್ಞರ ಹೇಳಿಕೆಯಿಂದ ಆತಂಕ: ಮುಂದಿನ ವರ್ಷದ ಫೆಬ್ರವರಿವರೆಗೆ ಇನ್ನು ಹಲವು ಚಂಡಮಾರುತಗಳು ಬಾದಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದು, ಈ ತಜ್ಞರ ಹೇಳಿಕೆ ಕಾಫಿ ಬೆಳೆಗಾರರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ವಾರ್ಷಿಕ ಬೆಳೆಯಾದ ಕಾಫಿ ಏಕಕಾಲಕ್ಕೆ ಕೊಯ್ಲಿಗೆ ಬರುವುದು ಸಾಮಾನ್ಯ ವಾಗಿದ್ದು, ಕೊಯ್ಲು ನಡೆಸಿದ ನಂತರ ರೋಬಸ್ಟ್ ಕಾಫಿ ಯನ್ನು ಒಣಗಿಸಲು ತೀವ್ರ ತರಹದ ಬಿಸಿಲಿನ ಅಗತ್ಯವಿದೆ. ಆದರೆ, ಚಂಡಮಾರುತದ ಪರಿಣಾಮ ಮೊಡಮುಸುಕಿದ ವಾತವಾರಣ ಅಥವಾ ಮಳೆಯಾದರೆ ಬಾರಿ ಪ್ರಮಾಣದಲ್ಲಿ ಕೊಯ್ಲು ನಡೆಸುವ ಕಾಫಿ ಯನ್ನು ಏನು ಮಾಡುವುದು ಎಂಬ ಪ್ರಶ್ನೆ ಬೆಳೆಗಾರರ ಮುಖದಲ್ಲಿ ಈಗಲೇ ಮೂಡಿದೆ.
ಸಣ್ಣ-ಮಧ್ಯಮ ವರ್ಗಕ್ಕೆ ತೊಂದರೆ: ಅಲ್ಪಪ್ರಮಾಣ ದಲ್ಲಿ ಕೊಯ್ಲಿಗೆ ಬರುವ ಅರೇಬಿಕ ಕಾಫಿ ಹಣ್ಣನ್ನು ಒಣಗಿಸಲು ಸ್ಥಿತಿವಂತ ಕಾಫಿ ಬೆಳೆಗಾರರು ಡ್ರೈಯರ್ ಆಳವಡಿಸಿಕೊಂಡಿದ್ದಾರೆ. ಆದರೆ ಬೆರಳೆಣಿಯಷ್ಟು ದೊಡ್ಡ ಬೆಳೆಗಾರರು ಡ್ರೈಯರ್ ಅಳವಡಿಸಿಕೊಂಡಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಏನು ಮಾಡಲಾಗದೆ ಮೂಕಪ್ರೇಕ್ಷಕರಾಗಿದ್ದಾರೆ.
ಕಳೆದ 2 ವರ್ಷಗಳಿಂದ ರೋಬಾಸ್ಟ್ ಕಾಫಿ ಕೊಯ್ಲು ಮಾಡುವ ಸಮಯದಲ್ಲಿ ಬಿದ್ದ ಒಂದೆರಡು ಮಳೆಗೆ ಕಾಫಿ ಬೆಳೆಗಾರರು ತತ್ತರಿಸಿದ್ದು, ಮಳೆ ನಿರಂತರ ವಾಗಿ ಬಂದಲ್ಲಿ ಬೆಳೆಗಾರರು ಬೀದಿ ಪಾಲಾಗು ವುದರಲ್ಲಿ ಅನುಮಾನವಿಲ್ಲ. ಈ ಸ್ಥಿತಿಯನ್ನು ಎದುರಿಸಲು ಕಾಫಿ ಮಂಡಳಿ ಯಾವುದೆ ತಂತ್ರಜ್ಞಾನ ಹಾಗೂ ಯೋಜನೆಗಳನ್ನು ರೂಪಿಸ ದಿರುವುದು ಕಾಫಿ ಬೆಳೆ ಗಾರರಿಗೆ ತೊಡಕಾಗಿದೆ. ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೆ ಅರೇಬಿಕಾ ಕಾಫಿ ಬೆಳೆಗಾರರು ತೀವ್ರ ಪೆಟ್ಟು ತಿಂದಿದ್ದಾರೆ. ಕಾಫಿ ಮಂಡಳಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಧಾವಿಸಬೇಕು. ●ಡಾ.ಮೋಹನ್ ಕುಮಾರ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ
ಅಕಾಲಿಕ ಮಳೆಯಿಂದಾಗಿ ಕಟಾವು ಮಾಡಿದ ಕಾಫಿ ಯನ್ನು ಕಣದಲ್ಲಿ ಒಣಗಿಸಲಾಗದೆ ಗೋದಾಮಿನಲ್ಲಿ ಹರಿವಿದ್ದೇನೆ. ಕಾಫಿ ಬೆಳೆಗಾರನ ಬದುಕು ತುಂಬಾ ಕಷ್ಟಕರವಾಗಿದೆ. ●ಧರಣೇಶ್, ಇಬ್ಬಡಿ ಗ್ರಾಮದ ಕಾಫಿ ಬೆಳೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.