ಪ್ರೇಕ್ಷಕರ ಮುಂದೆ ‘ಬೈ 1 ಗೆಟ್ 1 ಫ್ರೀ’ ಆಫರ್
Team Udayavani, Nov 8, 2021, 2:32 PM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಬೈ 1 ಗೆಟ್ 1 ಫ್ರೀ ‘ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ, ಸೆನ್ಸಾರ್ ಮಂಡಳಿಯಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಬೈ 1 ಗೆಟ್ 1 ಫ್ರೀ’ ಚಿತ್ರ ನ. 12ರಂದು ತೆರೆಗೆ ಬರುತ್ತಿದೆ.
“ಎಸ್‌ಬಿಎಸ್‌ಸಿ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಿಶೋರ್, ಬಲರಾಜವಾಡಿ, ರಿಶಿತಾ, ಮಧುರಾಜ್ ಸಿ, ಮನುರಾಜ್ ಸಿ, ರಿಶಿತಾ ಮಲ್ನಾಡ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹರೀಶ್ ಅನಿಲಗೋಡು ನಿರ್ದೇಶನವಿದೆ.
“ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಶೈಲಿಯ ಸಿನಿಮಾ. ಮೈಸೂರಿನಲ್ಲಿರುವ ಅವಳಿ ಸೋದರರ ಮೇಲೆ ಇಡೀ ಸಿನಿಮಾದ ಕಥೆ ಸಾಗುತ್ತದೆ. ನಿಜ ಜೀವನದಲ್ಲಿ ಅವಳಿ ಸೋದರರಾಗಿರುವ ಮಧುರಾಜ್ ಮತ್ತು ಮನುರಾಜ್ ಈ ಸಿನಿಮಾದಲ್ಲೂ ಅವಳಿ ಸೋದರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲೊಂದು ಜರ್ನಿಯ ಕಥೆಯಿದೆ. ಇಬ್ಬರು ಅವಳಿಗಳ ಪ್ರಯಣ ಹೇಗೆ ಸಾಗುತ್ತದೆ ಅದರಲ್ಲಿ ಏನೆಲ್ಲ ಆಗುತ್ತದೆ ಎನ್ನುವುದು ಸಿನಿಮಾ’ ಎಂದು ಕಥಾಹಂದರ ಬಿಚ್ಚಿಡುತ್ತಾರೆ ನಿರ್ದೇಶಕ ಹರೀಶ್ ಅನಿಲಗೋಡು.
ಇದನ್ನೂ ಓದಿ:ಮತ್ತೆ ಖಾಕಿ ತೊಟ್ಟ ಆಯೇಷಾ
ಇನ್ನು “ಬೈ 1 ಗೆಟ್ 1 ಫ್ರೀ’ ಸಿನಿಮಾದಲ್ಲಿ ನಟ ಕಿಶೋರ್ ಮೊದಲ ಬಾರಿಗೆ ಮನ್ಮಥ ಎಂಬ ಹೆಸರಿನ ಪೋಸ್ಟ್‌ಮನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಮೊದಲ ಬಾರಿಗೆ ಹೊಸಬರ ಸಿನಿಮಾದಲ್ಲಿ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಿದೆ. ಪ್ರೇಕ್ಷಕರಿಗೂ ಚಿತ್ರ ಮತ್ತು ನನ್ನ ಪಾತ್ರ ಇಷ್ಟವಾಗಲಿದೆ’ ಎಂಬ ಭರವಸೆ ಕಿಶೋರ್ ಅವರದ್ದು. ಒಟ್ಟಾರೆ ತೆರೆಗೆ ಇದೇ ವಾರ ತೆರೆಗೆ ಬರಲು ತಯಾರಾಗಿರುವ ಹೊಸಬರ “ಬೈ 1 ಗೆಟ್ 1 ಫ್ರೀ’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.