ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ
Team Udayavani, Nov 9, 2021, 6:43 AM IST
ಬೆಂಗಳೂರು: ರಾಜಧಾನಿ ವ್ಯಾಪ್ತಿಯಲ್ಲಿ ಆಟೋ ಪ್ರಯಾಣ ದರ ಹೆಚ್ಚಳವಾಗಿದ್ದು, ಡಿ. 1ರಿಂದ ಜಾರಿಗೆ ಬರಲಿದೆ.
ಕನಿಷ್ಠ ಬಾಡಿಗೆ ದರ (ಮೊದಲ 2 ಕಿ.ಮೀ.ಗೆ)ವನ್ನು 25ರಿಂದ 30 ರೂ.ಗೇರಿಸಲಾಗಿದೆ. ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ. 2 ಕಿ.ಮೀ. ಅನಂತರದ ಪ್ರತಿ ಕಿ.ಮೀ.ಗೆ 15 ರೂ. ದರ ನಿಗದಿಪಡಿಸಲಾಗಿದೆ. ಪ್ರಸ್ತುತ 13 ರೂ. ಇದೆ.
ಹೊಟೇಲ್ ತಿನಿಸು ದರ ಹೆಚ್ಚಳ
ಬೆಂಗಳೂರಿನ ಹಲವು ಹೊಟೇಲ್‌ಗಳಲ್ಲಿ ಸೋಮವಾರ ತಿಂಡಿಗಳ ದರ ಏರಿಕೆಯಾಗಿದೆ. ಊಟ ಮತ್ತು ಮಸಾಲೆ ದೋಸೆ 10 ರೂ. ತುಟ್ಟಿಯಾಗಿದೆ. ಕಾಫಿ, ಚಾ, ಕೇಸರಿಬಾತ್, ಚೌಚೌ ಬಾತ್, ತಟ್ಟೆ ಇಡ್ಲಿ, ರವೆ ಇಡ್ಲಿ ಮುಂತಾದವು 2 ರೂ., ಪೂರಿ, ಪಕೋಡಾ, ರೈಸ್ ಬಾತ್, ಸೆಟ್‌ದೋಸೆ ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲಿ 3 ರಿಂದ 5ರೂ. ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಈ ಹಿಂದೆ ಸೌತ್ ಇಂಡಿಯನ್ ಮೀಲ್ಸ್ (ಪೂರಿ ಸೇರಿ) 70 ರೂ.ಗೆ ಇದ್ದು, ಈಗ 80 ರೂ. ಆಗಿದೆ. ಹಾಗೆಯೇ 45 ರೂ.ಗೆ ದೊರೆಯುತ್ತಿದ್ದ ಮಿನಿ ಮೀಲ್ಸ್‌ಗೆ 50 ರೂ., 120 ರೂ.ಗೆ ಸಿಗುತ್ತಿದ್ದ ನಾರ್ತ್ ಇಂಡಿಯನ್ ಮೀಲ್ಸ್ ಗೆ 130 ರೂ. ಆಗಿದೆ. 10 ರೂ.ಗೆ ಸಿಗುತ್ತಿದ್ದ ಚಾ, ಕಾಫಿಗೆ 12 ರೂ. ಆಗಿದೆ. 25ರೂ.ಯ ವಡಾ ಬೆಲೆ 28 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 35 ರೂಗೆ (2ಪೀಸ್) ದೊರೆಯುತ್ತಿದ್ದ ಸೆಟ್ ದೋಸೆ ಬೆಲೆ 40 ರೂ.ಆಗಿದೆ. 33 ರೂ.ಗೆ ಸಿಗುತ್ತಿದ್ದ ರವೆ ಇಡ್ಲಿಗೆ 35ರೂ., 40 ರೂ.ಗೆ ದೊರೆಯುತ್ತಿದ್ದ ಬನ್ಸ್‌ಗೆ 44 ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.