ಪ್ರತಿಭೆ ಅನಾವರಣಕ್ಕೆ ಪಂದ್ಯಾವಳಿ ಉತ್ತಮ ವೇದಿಕೆ
Team Udayavani, Nov 9, 2021, 5:53 PM IST
ನಾರಾಯಣಪುರ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆ ಗುರುತಿಸಿ-ಪ್ರೋತ್ಸಾಹಿಸಲು ಕ್ರಿಕೆಟ್ ಪಂದ್ಯಾವಳಿಗಳು ಉತ್ತಮ ವೇದಿಕೆಯಾಗಿವೆ ಎಂದು ಶಾಸಕ ರಾಜುಗೌಡ ಹೇಳಿದರು.
ಎಎನ್‌ಸಿಸಿ ಕ್ರೀಡಾಂಗಣದಲ್ಲಿ ಆರ್‌ಟಿಜೆ ಗ್ರುಪ್ ಮತ್ತು ರಾಜುಗೌಡ ಅಭಿಮಾನಿ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ ಆರ್‌ಟಿಜೆ ಚಾಲೆಂಜರ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನನ್ನ ಮತ್ತು ನನ್ನ ಸಹೋದರ ಜನ್ಮದಿನ ನಿಮಿತ್ತ ಪ್ರತಿವರ್ಷವು ಅಭಿಮಾನಿಗಳು ಮತ್ತು ಕಾರ್ಯಕರ್ತರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಯಶಸ್ವಿಗೊಳಿಸುತ್ತಿರುವುದು ಶ್ಲಾಘನೀಯ. ಬರುವ ದಿನಗಳಲ್ಲಿ ಇದೇ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಯುವಕರು ರಣಜಿ ಪಂದ್ಯದಲ್ಲಿ ಆಡಿದಾಗ ಮಾತ್ರ ನಮ್ಮೂರ ಕ್ರೀಡಾಂಗಣಕ್ಕೆ,ಹಿರಿಯ ಆಟಗಾರರಿಗೆ ಹಾಗು ನನ್ನ ಆಸೆ ಈಡೇರಿದಂತಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 40 ವರ್ಷಗಳ ಹಿಂದೆ ಕ್ರೀಡಾಂಗಣದ ಅಭಿವೃದ್ಧಿಗೆ ಶ್ರಮಿಸಿದ್ದ ಗ್ರಾಮದ ಹಿರಿಯ ಆಟಗಾರರನ್ನು ಸನ್ಮಾನಿಸಲಾಯಿತು. ಹಾಗೂ ದಿ. ತಿಮ್ಮಮ್ಮ ಶಂಭನಗೌಡ ಮತ್ತು ನಟ ಪುನೀತ್ ರಾಜಕುಮಾರ್, ವಾಟರ್ ಸಪ್ಲಾಯರ್ ಗಂಗಪ್ಪ ಗೌಡರ, ಕ್ರೀಡಾಪಟು ಅಜೀಂಪಾಶ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಹನುಮಂತ ನಾಯಕ(ಬಬಲುಗೌಡ), ಗ್ರಾಪಂ ಅಧ್ಯಕ್ಷೆ ಹಣಮವ್ವ ಸಾದೂರ, ಅಧೀಕ್ಷಕ ಅಭಿಯಂತರ ಶಂಕರ ರಾಠೊಡ್, ಕಾರ್ಯ ನಿರ್ವಾಹಕ ಅಭಿಯಂತರ ಶಂಕರ ನಾಯ್ಕೋಡಿ, ಸಿಪಿಐ ದೌಲತ್ ಎನ್.ಕೆ, ಚನ್ನಪ್ಪ, ಡಿ.ಎಸ್. ಮದಲಿ, ರಮೇಶ ನೇಲಗಿ, ಡಾ| ಬಸನಗೌಡ ಅಳ್ಳಿಕೋಟಿ, ಅಂದಾನೆಪ್ಪ ಚಿನಿವಾಲರ್, ಬಾಲಯ್ಯ ಗುತ್ತೆದಾರ, ಸಂಗಣ್ಣ ತಾಳಿಕೋಟಿ, ನರಸಪ್ಪ ದೇಗಲಮಡ್ಡಿ, ತಿಪ್ಪಣ್ಣ ರೋಡಲಬಂಡಾ, ಬಸೀರ್‌ಅಹ್ಮದ, ಬಸಯ್ಯ ಸಾxಮಿ, ಪಿಎಸ್‌ಐ ಸಿದ್ದೇಶ್ವರ ಗೆರಡೆ, ಚಿನ್ನಪ್ಪ ಡೊಳ್ಳಿ, ಅಶೋಕ ನಾಯ್ಡು ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.