ಅಂದು ಸಿಂಗರ್ ಆಗಿ ಯು.ಕೆಯಲ್ಲಿ ಮೆರಗು; ಇಂದು ಬರ್ಗರ್ ಸ್ಟಾಲಿನಲ್ಲೇ ಬದುಕು

ಇತರ ತಿಂಡಿಗಳನ್ನು ಮಾಡಲು ಕಲಿಯುತ್ತಾ, ಕೆಲಸವನ್ನು ಮಾಡುತ್ತಾರೆ

ಸುಹಾನ್ ಶೇಕ್, Nov 10, 2021, 12:15 PM IST

ಅಂದು ಸಿಂಗರ್ ಆಗಿ ಯು.ಕೆಯಲ್ಲಿ ಮೆರಗು; ಇಂದು ಬರ್ಗರ್ ಸ್ಟಾಲಿನಲ್ಲೇ ಬದುಕು

ಜೀವನ ಅಂದ್ರೆ ಕೆಲವೊಮ್ಮೆ ಎಲ್ಲವೂ ಇರುತ್ತದೆ. ನೆಮ್ಮದಿ,ಸುಖ,ಸಂತಸ, ಹೀಗಿರುವಾಗಲೇ ಅಂದೊಮ್ಮೆ ಬದುಕಿಗೆ ಸವಾಲಾಗಿ ಕೆಲವೊಂದು ಸಮಸ್ಯೆಗಳು ಎದುರಾಗಿ ಬರುತ್ತವೆ. ಆ ಸಮಸ್ಯೆಗಳನ್ನು ಎದುರಿಸುತ್ತಲೇ ನೆಮ್ಮದಿಯಿಂದ ಇದ್ದ ಜೀವಗಳು ಕುಗ್ಗಿ ಕರಗಿ, ಸೋತು ಬಿಡುತ್ತವೆ‌.

ಅಹ್ಮದಾಬಾದ್ ನ ಪೃಥ್ವಿ ಟಹ್ಕಾರ್ ಬದುಕು ಕೂಡ ಹೀಗೆಯೇ. ಮಾಧ್ಯಮ ವರ್ಗದಲ್ಲಿ ಬೆಳೆದು, ಕಷ್ಟ ಪಟ್ಟು  ಡ್ರಾಮರ್ ಕಲೆ ಹಾಗೂ ಹಾಡುಗಾರನಾಗಿ‌ ತನ್ನ 21 ವಯಸ್ಸಿನಲ್ಲಿ ಲಂಡನ್ ಗೆ ಪಯಣ ಬೆಳೆಸಿ ಅಲ್ಲಿ ಸಂಜೆಯ ಬಳಿಕ  ಡ್ರಾಮರ್ ಹಾಗೂ ಸಿಂಗರ್ ಆಗಿ ತನ್ನ ಬದುಕಿಗೊಂದು ಕೆಲಸ ಹುಡುಕಿ, ಭಾರತದಲ್ಲಿರುವ ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

ಬೆಳಗ್ಗೆಯಿಂದ ಸಂಜೆಯವರೆಗೆ  ಯಾವುದೇ ಕೆಲಸ ಇಲ್ಲದಿದ್ದಾಗ, ಪೃಥ್ವಿ ಲಂಡನ್ ನ ಪಬ್ ಗಳಲ್ಲಿ ಪಾರ್ಟ್ ಕೆಲಸ ಹುಡುಕಿ ಅಲ್ಲಿ ವಿವಿಧ ಬಗೆಯ ಬರ್ಗರ್ ಹಾಗೂ ಇತರ ತಿಂಡಿಗಳನ್ನು ಮಾಡಲು ಕಲಿಯುತ್ತಾ, ಕೆಲಸವನ್ನು ಮಾಡುತ್ತಾರೆ. ಈ‌ ಕೆಲಸದಲ್ಲಿ ಪಳಗಿದ ಅನುಭವಿಯಾಗುತ್ತಾರೆ ಪೃಥ್ವಿ.

ಬದುಕಿಗೆ ‌ಕೊಳ್ಳಿಯಿಟ್ಟ ಕೋವಿಡ್ : ಹತ್ತು  ವರ್ಷಗಳ ಕಾಲ‌ ಲಂಡನ್ ಹಾಗೂ ಅಮೆರಿಕಾದಲ್ಲಿ ನೆಲೆಸಿದ್ದ ಪೃಥ್ವಿ ಅವರು ಭಾರತಕ್ಕೆ ಬರಲು ಒಂದು ದೊಡ್ಡ ಅಪಘಾತದ ಸುದ್ದಿ ಕಾರಣವಾಗಿತ್ತು. ಅದು ಪೃಥ್ವಿ ಅವರ ಹೆಂಡತಿಗೆ ಸ್ತನ ಕ್ಯಾನ್ಸರ್ ರೋಗ ಆವರಿಸಿಕೊಂಡಿರುವ ಸುದ್ದಿ. ಈ ಕಾರಣದಿಂದ 2020 ಮಾರ್ಚ್ ನಲ್ಲಿ ಭಾರತಕ್ಕೆ ಬಂದ ಪೃಥ್ವಿ ಮತ್ತೆ ಡ್ರಾಮರ್ ನಾಗಿ ವೇದಿಕೆಯಲ್ಲಿ ಮೆರೆಯಲು, ಸಿಂಗರ್ ನಾಗಿ ಮಿಂಚಲು ಕಷ್ಟವಾಗುವ ಪರಿಸ್ಥಿತಿ ಕೋವಿಡ್ ತಂದಿಡುತ್ತದೆ.

ದಿನ ಕಳೆದಂತೆ ಪೃಥ್ವಿ ಹೆಂಡತಿಯ ಚಿಕಿತ್ಸೆಯ ವೆಚ್ಚದ ಖರ್ಚು ಹೆಚ್ಚಾಗುತ್ತಾ ಹೋಗುತ್ತದೆ. ಇದ್ದ ಬದ್ದ ಹಣ ಖಾಲಿಯಾಗುತ್ತಾ ಹೋದಾಗ, ಪೃಥ್ವಿ ಅವರಿಗೆ ಚಿಂತೆ ಕಾಡುತ್ತದೆ. ಅದೊಂದು ದಿನ ಪೃಥ್ವಿ ಅವರ ಮಗಳು ನೀವೊಂದು ಫುಡ್ ಸ್ಟಾಲ್ ತೆರೆಯಿರಿ ಎಂದು ಸಲಹೆ ನೀಡುತ್ತಾಳೆ. ಇದೇ ಮಾತನ್ನು ಗಂಭೀರವಾಗಿ ಚಿಂತಿಸಿದ ಪೃಥ್ವಿ ಮೊದಲು  ತಾನು ಯಾವ ಫುಡ್ ಸ್ಟಾಲ್ ನ್ನು ಇಡಬಹುದು ಎಂದು ಯೋಚಿಸಿ, ಕೊನೆಗೆ ಇಲ್ಲೆಲ್ಲೂ ಸುಲಭವಾಗಿ ಸಿಗದ ಬರ್ಗರ್ ನ್ನು ತಯಾರಿಸುವ ಸ್ಟಾಲ್ ವೊಂದನ್ನು ತೆರೆಯುತ್ತಾರೆ. ವ್ಯಾಪಾರ ಆರಂಭಿಸಿದ ಮೂರು ತಿಂಗಳ ಬಳಿಕವೂ ಅಂದುಕೊಂಡ ಮಟ್ಟಿಗೆ ಯಶಸ್ಸು ಸಿಗದೆ ಇದ್ದಾಗ, ಪೃಥ್ವಿ ಹೊಸ ಯೋಚನೆಯೊಂದನ್ನು ಮಾಡುತ್ತಾರೆ. ಅದುವೇ ತನ್ನ ಹಳೆಯ ಕಾರನ್ನು ನವೀಕರಣಗೊಳಿಸಿ ಅದನ್ನು ಸಂಚಾರಿ ಅಡುಗೆ ‌ಮನೆಯನ್ನಾಗಿ ಮಾಡುವುದು.

ತನ್ನ ಕಾರಿನಲ್ಲೇ ಬರ್ಗರ್ ನ್ನು ತಯಾರಿಸಿ, ಐಐಎಂ ಅಹ್ಮದಾಬಾದ್ ನ ಮುಂದೆ ಬೆಳಗ್ಗೆ 9 ಗಂಟೆಗೆ ನಿಂತರೆ ಮನೆಗೆ ಬರುವುದು ಒಂದಿಷ್ಟು ಲಾಭಗಳಿಸಿ ರಾತ್ರಿ 10 ಬಳಿಕವೇ..ಅಮೇರಿಕನ್, ಮೆಕ್ಸಿಕನ್, ಹೀಗೆ ನಾನಾ ಬರ್ಗರ್ ಗಳು 60 ರೂಪಾಯಿಯಿಂದ 250 ರೂಪಾಯಿವರಗಿನ ಫುಡ್ ಗಳು ಇವರ ಸ್ಟಾಲ್ ನಲ್ಲಿ ಸಿಗುತ್ತದೆ.

ಪೃಥ್ವಿ ಅವರಿಂದು ತಮ್ಮ ಬರ್ಗರ್ ವ್ಯಾಪಾರದಿಂದ ಸಂತಸದ ಜೀವನವನ್ನು ನಡೆಸುತ್ತಿದ್ದಾರೆ. ‘ಫಕೀರ್ಸ್ ಬರ್ಗರ್ ವಾಲಾ’ ಇಂದು ಅಹ್ಮದಾಬಾದ್ ನಲ್ಲಿ ಫೇಮಸ್.

ಸುಹಾನ್ ಶೇಕ್

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1

ಬಚ್ಚನ್, ಮೋಹನ್‌ಲಾಲ್‌ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

Rajat: 3 ವರ್ಷದ ಹಿಂದೆ ಅನ್‌ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್‌ ಕ್ರಿಕೆಟ್‌ ಪಯಣವೇ ರೋಚಕ

ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್‌)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್‌ ಮಾಫಿಯಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.