ನೇತ್ರದಾನ ಘೋಷಿಸಿದ 100ಕ್ಕೂ ಹೆಚ್ಚು  ಜನ


Team Udayavani, Nov 10, 2021, 4:04 PM IST

davanagere news

ದಾವಣಗೆರೆ: ಅಭಿಮಾನ ಎಂದರೆ ಹೇಗಿರುತ್ತೆನೋಡಿ. ಅಕಾಲಿಕವಾಗಿ ನಿಧನರಾದ ಪವರ್‌ ಸ್ಟಾರ್‌ಪುನೀತ್‌ ರಾಜ್‌ಕುಮಾರ್‌ರವರ ನೇತ್ರದಾನದಿಂದಪ್ರೇರಣಗೊಂಡ 100ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆಮುಂದಾಗುವ ಮೂಲಕ ಅಪ್ಪು ಮೇಲಿನ ಅಭಿಮಾನತೋರ್ಪಡಿಸಿ ಮಾದರಿಯಾಗಿದ್ದಾರೆ.

ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿಯಹಿರಿಯರು, ಮಹಿಳೆಯರು ಒಳಗೊಂಡಂತೆ 100ಕ್ಕೂಹೆಚ್ಚು ಜನರು ನೇತ್ರದಾನದಂತಹ ಶ್ರೇಷ್ಠ ದಾನಕ್ಕೆ ಒಪ್ಪಿಗೆಸೂಚಿಸಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟ ಪುನೀತ್‌ರಾಜ್‌ಕುಮಾರ್‌ ಸಾಗಿದ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲಾ ಕೇಂದ್ರ ದಾವಣಗೆರೆಗೆ ಸಮೀಪದಲ್ಲಿರುವಚಟ್ಟೋಬನಹಳ್ಳಿಯಲ್ಲಿ 120-125 ಮನೆಗಳಿವೆ.ಮನೆಗೆ ಒಬ್ಬರಂತೆ ನೇತ್ರದಾನಕ್ಕೆ ಒಪ್ಪಿದ್ದಾರೆ. ಅದಕ್ಕೆಮೂಲ ಕಾರಣ ಪುನೀತ್‌ ರಾಜ್‌ಕುಮಾರ್‌. ತೀವ್ರಹೃದಯಾಘಾತದಿಂದ ಅಕಾಲಿಕ ಮರಣಕ್ಕೆ ತುತ್ತಾದಪುನೀತ್‌ ರಾಜ್‌ಕುಮಾರ್‌ ಅವರ ಕಣ್ಣುಗಳು ನಾಲ್ವರುಅಂಧರ ಬಾಳಲ್ಲಿ ಬೆಳಕು ತಂದಿದ್ದನ್ನು ತಿಳಿದ ಗ್ರಾಮದಅನೇಕರು ಪುನೀತ್‌ ರಾಜ್‌ಕುಮಾರ್‌ ಅವರಂತೆಯೇತಮ್ಮ ಕಣ್ಣುಗಳು ಬೇರೆಯವರಿಗೆ ಬೆಳಕಾಗಬೇಕು,ಅತ್ಯಮೂಲ್ಯ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿಹೋಗಬಾರದು ಎಂದು ತಮ್ಮ ಮರಣದ ನಂತರಕಣ್ಣುಗಳ ದಾನ ಮಾಡಲು ನಿರ್ಧರಿಸಿದ್ದಾರೆ.ನಮ್ಮ ಊರಿನ ಜನರಿಗೆ ಪುನೀತ್‌ ರಾಜ್‌ಕುಮಾರ್‌ ಎಂದರೆ ಪಂಚಪ್ರಾಣ.

ಪ್ರತಿಯೊಬ್ಬರೂಅವರ ಅಭಿಮಾನಿಗಳು. ಪುನೀತ್‌ ರಾಜ್‌ಕುಮಾರ್‌ನಿಧನರಾದ ದಿನವಂತೂ ಗ್ರಾಮದಲ್ಲಿ ಮೌನ ಕವಿದಿತ್ತು.ಅವರ ಸಾವನ್ನು ಈ ಕ್ಷಣಕ್ಕೂ ಅರಗಿಸಿಕೊಳ್ಳಲಾರದವರುಅನೇಕರು ಇದ್ದಾರೆ ಎಂದು ಎಸ್‌ಬಿಐ ಉದ್ಯೋಗಿಯೂಆಗಿರುವ ಎಸ್‌. ಅಣ್ಣಪ್ಪ ತಿಳಿಸಿದರು.

ಪುನೀತ್‌ ರಾಜ್‌ಕುಮಾರ್‌ರವರ ನಿಧನದ ನಂತರಅವರು ನೇತ್ರದಾನ ಮಾಡಿದ್ದು, ಅವರ ಕಣ್ಣುಗಳನ್ನಪಡೆದು ಇತರೆ ನಾಲ್ವರಿಗೆ ಜೋಡಣೆ ಮಾಡಿದ್ದು,ಅವರು ಪ್ರಪಂಚವನ್ನೆಲ್ಲ ನೋಡುವಂತಾಗಿದ್ದುಗ್ರಾಮಸ್ಥರ ಮೇಲೆ ಭಾರೀ ಪರಿಣಾಮ ಉಂಟುಮಾಡಿತು.

ತಮ್ಮ ನೆಚ್ಚಿನ ನಟನಂತೆ ನಾವೂ ಕಣ್ಣುಗಳದಾನ ಮಾಡಬೇಕು, ನಾವು ಸತ್ತ ನಂತರವೂ ಇತರರಿಗೆಬೆಳಕಾಗಬೇಕು. ಮರಣದ ನಂತರವೂ ಪ್ರಪಂಚನೋಡುವಂತಾಗಬೇಕು. ಹಾಗಾಗಿ ಕಣ್ಣುಗಳದಾನ ಮಾಡಬೇಕು ಎಂದು ಗೆಳೆಯರು ವಿಷಯಪ್ರಸ್ತಾಪಿಸಿದರು. ಸಭೆ ನಡೆಸಿ ನೇತ್ರದಾನದ ಮಹತ್ವಮನವರಿಕೆ ಮಾಡಿದಾಗ 100ಕ್ಕೂ ಹೆಚ್ಚು ಜನರುಒಪ್ಪಿಕೊಂಡಿದ್ದಾರೆ. ನ. 6 ರಂದು ಗ್ರಾಮದಲ್ಲಿ ಕನ್ನಡರಾಜ್ಯೋತ್ಸವ, ಶ್ರೀ ಸೇವಾಲಾಲ್‌ ಸಂಘದ ಉದ್ಘಾಟನೆಜೊತೆಗೆ ನೇತ್ರದಾನ ಶಿಬಿರವನ್ನೂ ಕೈ ಗೊಳ್ಳಲಾಗಿತ್ತು.

ಆಸಂದರ್ಭದಲ್ಲಿ 100ಕ್ಕೂ ಹೆಚ್ಚು ಜನರು ನೇತ್ರದಾನದನಿರ್ಧಾರ ಪ್ರಕಟಿಸಿದರು ಎಂದು ಮಾಹಿತಿ ನೀಡಿದರು.45 ವರ್ಷ ಮೇಲ್ಪಟ್ಟಿರುವ ಎಲ್‌. ತಿಪ್ಪೇಶ್‌ ನಾಯ್ಕ,ಮಲ್ಲೇಶ್‌ ನಾಯ್ಕ, ರುದ್ರಾ ನಾಯ್ಕ ಸೇರಿದಂತೆನಾಲ್ವರು ಕಣ್ಣುಗಳ ದಾನಕ್ಕೆ ಒಪ್ಪಿದ್ದಾರೆ. 18 ರಿಂದ 45ವರ್ಷದೊಳಗಿನವರು ಸೇರಿಕೊಂಡು 100 ಜನರುನೇತ್ರದಾನ ಮಾಡುತ್ತಿದ್ದಾರೆ. ನನ್ನ ಜೊತೆಗೆ ನನ್ನ ತಮ್ಮಅನಿಲ್‌ ನಾಯ್ಕ ಸಹ ಕಣ್ಣು ದಾನ ಮಾಡುತ್ತಿದ್ದೇವೆಎಂದು ತಿಳಿಸಿದರು.

ನೇತ್ರದಾನಕ್ಕೆ ಸಂಬಂಧಿಸಿದಂತೆ ದಾವಣಗೆರೆಯಬಾಪೂಜಿ ಆಸ್ಪತ್ರೆಯವರನ್ನು ಸಂಪರ್ಕಿಸಿದ್ದೇವೆ. ಇನ್ನುಎರಡು ದಿನಗಳಲ್ಲಿ ಅರ್ಜಿ ಭರ್ತಿ ಮಾಡಿ ಮುಂದಿನಪ್ರಕ್ರಿಯೆ ಕೈಗೊಳ್ಳಲಾಗುವುದು. ನೇತ್ರದಾನಕ್ಕೆಒಪ್ಪಿರುವವರ ಎಲ್ಲ ಕುಟುಂಬದವರಿಗೆ ಮಾಹಿತಿನೀಡುವ ಜೊತೆಗೆ ಮುಂದೆ ಮಾಡಬೇಕಾದಂತಹಕೆಲಸಗಳ ಬಗ್ಗೆಯೂ ತಿಳಿಸಲಾಗಿದೆ ಎಂದು ಅಣ್ಣಪ್ಪಹೇಳಿದರು.

ಒಬ್ಬ ನಾಯಕ ನಟ ಸಾಗುವ ಹಾದಿ, ಮಾಡುವಂತಹಸಾಮಾಜಿಕ ಸೇವಾ ಕಾರ್ಯಗಳು ಅವರ ಅಭಿಮಾನಿಗಳಮೇಲೆ ಎಂತಹ ಪ್ರಭಾವ, ಪರಿಣಾಮ ಬೀರಬಲ್ಲವು.ಏನೆಲ್ಲ ಸಾಧನೆ ಸಾಧ್ಯ ಎಂಬುದಕ್ಕೆ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಹಾಗೂ ಚಟ್ಟೋಬನಹಳ್ಳಿ ಗ್ರಾಮಸ್ಥರೇಸಾಕ್ಷಿ ಎಂದರೆ ಅತಿಶಯೋಕ್ತಿಯಾಗಲಾರದು.
ರಾ. ರವಿಬಾಬು

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.