ಚಿತ್ರದುರ್ಗ-ದಾವಣಗೆರೆ ಟಿಕೆಟ್‌ಗೆ ಪೈಪೋಟಿ
Team Udayavani, Nov 10, 2021, 4:35 PM IST
ಚಿತ್ರದುರ್ಗ:ರಾಜ್ಯದ25 ವಿಧಾನ ಪರಿಷತ್ ಸ್ಥಾನಗಳಿಗೆಚುನಾವಣಾ ಆಯೋಗ ದಿನಾಂಕ ಘೋಷಣೆಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗರಿಗೆದರಿದ್ದು, ಚಿತ್ರದುರ್ಗ ಕ್ಷೇತ್ರದಿಂದ ಪರಿಷತ್‌ಗೆಆಯ್ಕೆಯಾಗಲು ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳದಂಡೇ ಸಿದ್ಧವಾಗಿದೆ.ಯಾವ ಪಕ್ಷದಿಂದ ಯಾವ ಪ್ರಬಲ ಅಭ್ಯರ್ಥಿಕಣಕ್ಕಿಳಿಯುತ್ತಾರೆ ಎಂದು ಕಾದು ನೋಡುವ ತಂತ್ರನಡೆಯುತ್ತಿದೆ.
ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ಎಲ್ಲಾ 9 ತಾಲೂಕುಗಳಶಾಸಕರು, ಪ್ರಮುಖರ ಸಭೆ ನಡೆಸಿ ಆಕಾಂಕ್ಷಿಗಳಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ರವಾನಿಸಿದೆ.ಕಾಂಗ್ರೆಸ್ ಕೂಡ ಬೆಂಗಳೂರಿನಲ್ಲಿಸಭೆ ನಡೆಸಿ ಎಲ್ಲಾ ಜಿಲ್ಲೆಗಳಲ್ಲಿಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.ಜೆಡಿಎಸ್ ವರಿಷ್ಠರು ನ.13 ರಂದುಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ.
ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಗಳ ವ್ಯಾಪ್ತಿ: ಸ್ಥಳೀಯ ಸಂಸೆ §ಗಳಪ್ರತಿನಿಧಿಗಳು ಮತ ಚಲಾಯಿಸುವವಿಧಾನ ಪರಿಷತ್ ಚುನಾವಣೆಗೆ ದಾವಣಗೆರೆಉತ್ತರ-ದಕ್ಷಿಣ ತಾಲೂಕುಗಳು, ಜಗಳೂರು ಹಾಗೂಹರಿಹರ ತಾಲೂಕುಗಳು ಸೇರಿದ್ದು, ಚಿತ್ರದುರ್ಗದ 6ತಾಲೂಕುಗಳ ವ್ಯಾಪ್ತಿಯಿದೆ. ಒಟ್ಟು 9 ತಾಲೂಕುಗಳುಕ್ಷೇತ್ರ ವ್ಯಾಪ್ತಿಯಲ್ಲಿವೆ.2016ರಲ್ಲಿ ನಡೆದ ಚುನಾವಣೆಯಲ್ಲಿ ಎರಡೂಜಿಲ್ಲೆಗಳಿಂದ 5348ಮತದಾರರಿದ್ದರು. ಈ ಬಾರಿಜಿಪಂ, ತಾಪಂ ಸದಸ್ಯರಿಲ್ಲದಕಾರಣ ಚಿತ್ರದುರ್ಗಜಿಲ್ಲೆಯಿಂದಲೇ 109ಮತಗಳು ಕಡಿಮೆಯಾಗಲಿವೆ.
ಆದರೆ ಗ್ರಾಪಂ ಸದಸ್ಯರ ಸಂಖ್ಯೆಹೆಚ್ಚಾಗಿರುವುದರಿಂದ 5300ರಆಸುಪಾಸಿನಲ್ಲೇ ಮತದಾರರ ಸಂಖ್ಯೆಇರಲಿದೆ ಎನ್ನುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ.ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 3421 ಗ್ರಾಪಂ ಸದಸ್ಯರಿದ್ದಾರೆ. ನಾಯಕನಹಟ್ಟಿ ಪಪಂ ಅವಧಿ ಮುಗಿದಿದ್ದು,ಅಲ್ಲಿನ 16 ಸದಸ್ಯರು ಮತದಾನ ಮಾಡುವಂತಿಲ್ಲ.ಮತ್ತೆ ಬಿಜೆಪಿ ತೆಕ್ಕೆ ಸೇರುವುದೇ?: ಈ ಹಿಂದೆಜನತಾ ಪರಿವಾರದ ಪ್ರಾಬಲ್ಯದಲ್ಲಿದ್ದ ಚಿತ್ರದುರ್ಗವಿಧಾನ ಪರಿಷತ್ ಕ್ಷೇತ್ರದಲ್ಲಿ 2010ರಲ್ಲಿ ಜಿ.ಎಚ್.ತಿಪ್ಪಾರೆಡ್ಡಿ ಗೆಲ್ಲುವ ಮೂಲಕ ಮೊದಲ ಬಾರಿ ಬಿಜೆಪಿಪಾಲಾಗಿತ್ತು. ತಿಪ್ಪಾರೆಡ್ಡಿ ಅವರಿಗೆ ಇನ್ನೂ ಮೂರುವರೆವರ್ಷದ ಅವಧಿ ಇದ್ದಾಗಲೇ 2013ರ ವಿಧಾನಸಭೆ ಚುನಾವಣೆ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿಶಾಸಕರಾಗಿ ಆಯ್ಕೆಯಾದರು.
ಈ ವೇಳೆ ನಡೆದಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಕಣಕ್ಕಿಳಿದ ರಘು ಆಚಾರ್, ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ವಿರುದ್ಧ ಗೆಲುವು ಸಾಧಿಸಿದ್ದರು. ಆನಂತರ2016ರಲ್ಲಿ ನಡೆದ ಚುನಾವಣೆಯಲ್ಲಿ ರಘು ಆಚಾರ್‌ಕಾಂಗ್ರೆಸ್‌ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ಬಿಜೆಪಿಯಿಂದಕೆ.ಎಸ್. ನವೀನ್ ಎದುರಾಳಿಯಾಗಿದ್ದರು.
ರಘುಆಚಾರ್ ಎರಡನೇ ಅವಧಿಗೂ ಆಯ್ಕೆಯಾದರು.ಈ ಎರಡೂ ಅವಧಿಯಲ್ಲಿ ಅದೇ ಮತದಾರರುಮತ ಚಲಾಯಿಸಿದ್ದರು. ಈಗ ಗ್ರಾಪಂ ಸೇರಿದಂತೆಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಪರಿಸ್ಥಿತಿಬದಲಾಗಿದೆ.
ಯಾವ ಪಕ್ಷದಿಂದ ಯಾರು ಆಕಾಂಕ್ಷಿ?: ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇಒಂದು ಪಟ್ಟಿ ವರಿಷ್ಠರಿಗೆ ರವಾನೆಯಾಗಿದ್ದು, ಇದರಲ್ಲಿಈ ಹಿಂದೆ Óರ್ಧಿಸಿ ³ ದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿಕೆ.ಎಸ್. ನವೀನ್, ರಾಜ್ಯ ಖನಿಜ ನಿಗಮದ ಅಧ್ಯಕ್ಷಎಸ್.ಲಿಂಗಮೂರ್ತಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಉಪಾಧ್ಯಕ್ಷ ಸಿದ್ದೇಶ್ ಯಾದವ್ ಹಾಗೂ ಹೊಸದುರ್ಗಎಪಿಎಂಸಿ ಮಾಜಿ ಅಧ್ಯಕ್ಷ ಹೆಬ್ಬಳ್ಳಿ ಮಲ್ಲಿಕಾರ್ಜುನ್ ಹೆಸರುಗಳಿವೆ.
ಶೀಘ್ರವೇ ಮತ್ತೂಮ್ಮೆ ಬೆಂಗಳೂರಿನಲ್ಲಿಕೋರ್ ಕಮಿಟಿ ಸಭೆ ನಡೆಯಲಿದ್ದು, ಅಭ್ಯರ್ಥಿ ಹೆಸರುಅಂತಿಮವಾಗುವ ಸಾಧ್ಯತೆ ಇದೆ.ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಸದಸ್ಯ ರಘುಆಚಾರ್ ಕಣದಿಂದ ಹಿಂದೆ ಸರಿಯುವುದಾಗಿಘೋಷಿಸಿದ್ದಾರೆ. ಮಾಜಿ ಸಚಿವ ಎಚ್. ಆಂಜನೇಯ,ಭೀಮಸಮುದ್ರದ ಜಿ.ಎಸ್. ಮಂಜುನಾಥ್ ಅಥವಾಹನುಮಲಿ ಷಣ್ಮುಖಪ್ಪಅವರಿಗೆ ಟಿಕೆಟ್ ನೀಡಬೇಕೆಂದುಹೇಳಿದ್ದಾರೆ. ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದಾಗಹಿರಿಯೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಹಾಗೂ ನೆಲಮಂಗಲದಲ್ಲಿ ನೆಲೆಸಿರುವಸೋಮಶೇಖರ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.ಜೆಡಿಎಸ್ ಪಕ್ಷದಲ್ಲಿ ಈವರೆಗೆ ಯಾವುದೇ ಅಭ್ಯರ್ಥಿಗಳಹೆಸರು ಹೊರ ಬಂದಿಲ್ಲ. ನ.13 ರಂದು ಬೆಂಗಳೂರಿನಲ್ಲಿವರಿಷ್ಠರ ಸಮ್ಮುಖದಲ್ಲಿನಡೆಯುವಸಭೆಯಲ್ಲಿಅಭ್ಯರ್ಥಿಹೆಸರು ಅಂತಿಮವಾಗುವ ಸಾಧ್ಯತೆ ಇದೆ.
ತಿಪ್ಪೇಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.