ಹವಾಮಾನ ಬದಲಾವಣೆಯ ನಿರ್ಣಯಗಳ ಬಗ್ಗೆ ಯುವಜನರು ಗಮನಹರಿಸಬೇಕು – ಡಾ. ರಘು
Team Udayavani, Nov 10, 2021, 6:20 PM IST
ಮಣಿಪಾಲ: ಇತ್ತೀಚಿನ ಗ್ಲಾಸ್ಗೋ ಶೃಂಗಸಭೆಯಲ್ಲಿನ ಬೆಳವಣಿಗೆಗಳು ಮತ್ತು ಅದರ ನಿರ್ಣಯಗಳ ಅನುಷ್ಠಾನದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನರು ಗಮನ ಹರಿಸಬೇಕು ಎಂದು ಅಮೆರಿಕೆಯ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಘು ಮುರ್ತುಗುಡ್ಡೆ ನುಡಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿದ್ಯಾರ್ಥಿಗಳು ಆಯೋಜಿಸಿದ್ದ ‘Ecospot’ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ಹವಾಮಾನ ಬದಲಾವಣೆ ಮತ್ತು ನಾವು ಮಾಡಬಹುದಾದದ್ದೇನು?’ ಎಂಬ ವಿಷಯದ ಕುರಿತು ಮಾತನಾಡಿದ ಅವರು ಸುಸ್ಥಿರ ಜೀವನ ಶೈಲಿಯ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಿ, ಆ ಮೂಲಕ ನಾವು ಒಟ್ಟಾರೆಯಾಗಿ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಬಹುದು ಎಂದರು.
ಹವಾಮಾನ ಬದಲಾವಣೆಯ ವಿಷಯಗಳಲ್ಲಿ ಯುವಕರು ಮುಂದಾಳತ್ವ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಹವಾಮಾನ ಒಪ್ಪಂದಗಳ ಮೇಲೆ ಜಾಗರೂಕರಾಗಿರಿ ಮತ್ತು ಒತ್ತಡವನ್ನು ಹೇರುವಂತೆ ಕೇಳಿಕೊಂಡರು, ಇದರಿಂದ ಸಾಮೂಹಿಕವಾಗಿ ನಾವು ಬದಲಾವಣೆಯನ್ನು ಮಾಡಬಹುದು. ಹವಾಮಾನ ವೈಪರೀತ್ಯದ ಪರಿಹಾರ ತಕ್ಷಣವೇ ದೊರಕದು ಬದಲಾಗಿ ಪ್ರತಿಯೊಬ್ಬರೂ ಸತತವಾಗಿ ಬಹುಕಾಲ ಪ್ರಯತ್ನಿಸುವುದರಿಂದ ಮಾತ್ರವೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಜಗತ್ತಿನ ಅಧಿಕ ಆದಾಯ ಹೊಂದಿರುವ 1 ಶೇಕಡಾ ಜನಸಂಖ್ಯೆ ಸರಿಸುಮಾರು 74 ಶೇಕಡಾ ವಾರ್ಷಿಕ ಇಂಗಾಲದ ಉತ್ಪತ್ತಿಗೆ ಕಾರಣವಾಗಿದ್ದರೆ, ಕಡಿಮೆ ಆದಾಯದ 50 ಶೇಕಡಾಕ್ಕಿಂತಲೂ ಅಧಿಕ ಜನಸಂಖ್ಯೆ ಈ ಮೂಲಕ ಉಂಟಾಗುವ ಹವಾಮಾನ ವೈಪರೀತ್ಯದ ಪರಿಣಾಮವನ್ನು ಅನುಭವಿಸಿದ್ದಾರೆ ಎಂದರು.
ಇದನ್ನೂ ಓದಿ:- ಚಿಕ್ಕಮಗಳೂರು: ಚಾರ್ಮಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿದ ಮದುವೆ ವಾಹನ: ತಪ್ಪಿದ ದೊಡ್ಡ ದುರಂತ
ಡಾ. ರಘು ಮುರ್ತುಗುಡ್ಡೆ ಅವರು ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ವಾತಾವರಣ, ಸಾಗರ ವಿಜ್ಞಾನ ಮತ್ತು ಭೂ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ. ಅವರು ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಮಾನವನ ಕ್ರಿಯೆಗಳು ಮತ್ತು ಪ್ರತಿಕ್ರಿಯೆಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಅದರ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ GCPAS ನ ನಿರ್ದೇಶಕರಾದ ಪ್ರೊ.ವರದೇಶ್ ಹಿರೇಗಂಗೆ, ವಿಜ್ಞಾನಿಗಳು, ಪರಿಸರಶಾಸ್ತ್ರಜ್ಞರು ಮತ್ತು ಹವಾಮಾನ ಬದಲಾವಣೆಯಿಂದ ನೇರ ಪರಿಣಾಮಕ್ಕೊಳಗಾದವರ ನಡುವೆ ಸಂವಾದ ನಡೆಯಬೇಕು. ಇದರಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು, ಆದರೆ ವೈಜ್ಞಾನಿಕ ದೃಷ್ಟಿಕೋನವು ಈ ವಿಷಯದಲ್ಲಿ ಅತೀ ಮಹತ್ವವಾದದ್ದು ಎಂದರು.
ಶ್ರವಣ್ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು, ಚಿನ್ಮಯಿ ಬಾಳ್ಕರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಆಲಿಸ್ ಚೌಹಾಣ್ ಅವರು ಇಕೋಸ್ಪಾಟ್ ಕುರಿತು ಮಾತನಾಡಿದರು, ಮನಸ್ವಿನಿ ಶ್ರೀರಂಗಂ ವಂದಿಸಿದರು. ‘ಬಿಎ- ಏಸ್ತೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್ ನ ವಿದ್ಯಾರ್ಥಿಗಳು ತಮ್ಮ ‘ಇಕೋಸ್ಪಾಟ್’ ನ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
‘ಇಕೋಸ್ಪಾಟ್’ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ವಿದ್ಯಾರ್ಥಿಗಳು ‘ಸುಸ್ಥಿರ ಜೀವನ’ ಕ್ರಮದ ಕುರಿತು ನಡೆಸುತ್ತಿರುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನವನ್ನು ಜನರಿಗೆ ತಲುಪಿಸಲು ಮತ್ತು ಸುಸ್ಥಿರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಸಂಘಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.