ಭಾರತ “ಎ’ ತಂಡದಲ್ಲಿ ದೇವದತ್ತ ಪಡಿಕ್ಕಲ್
Team Udayavani, Nov 10, 2021, 11:38 PM IST
ಹೊಸದಿಲ್ಲಿ: ನ್ಯೂಜಿಲ್ಯಾಂಡ್ ಎದುರಿನ ಟಿ20 ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಪೃಥ್ವಿ ಶಾ ಮತ್ತು ದೇವದತ್ತ ಪಡಿಕ್ಕಲ್, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ “ಎ’ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಜತೆಗೆ ಜಮ್ಮು ಮತ್ತು ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಕೂಡ ಸ್ಥಾನ ಪಡೆದಿದ್ದಾರೆ. ಗುಜರಾತ್ ಆರಂಭಕಾರ ಪ್ರಿಯಾಂಕ್ ಪಾಂಚಾಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಟೀಮ್ ಇಂಡಿಯಾ ಆಟಗಾರರಾದ ನವದೀಪ್ ಸೈನಿ, ರಾಹುಲ್ ಚಹರ್ ಕೂಡ “ಎ’ ತಂಡದಲ್ಲಿದ್ದಾರೆ. ಉತ್ತರಪ್ರದೇಶದ ಉಪೇಂದ್ರ ಯಾದವ್ ಈ ತಂಡದ ಏಕೈಕ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಆಗಿದ್ದಾರೆ.
ಇದನ್ನೂ ಓದಿ:ಟಿ20 ರ್‍ಯಾಂಕಿಂಗ್ : ಎಂಟಕ್ಕೆ ಇಳಿದ ವಿರಾಟ್ ಕೊಹ್ಲಿ
ಪ್ರವಾಸದ ವೇಳೆ 3 ಚತುರ್ದಿನ ಪಂದ್ಯಗಳನ್ನು ಆಡಲಾಗುವುದು. ಎಲ್ಲ ಪಂದ್ಯಗಳು ಬ್ಲೋಮ್‌ಫಾಂಟೈನ್‌ನಲ್ಲಿ ನಡೆಯಲಿವೆ.
ಭಾರತ “ಎ’ ತಂಡ
ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ತ ಪಡಿಕ್ಕಲ್, ಸಫರಾಜ್ ಖಾನ್, ಬಾಬಾ ಅಪರಾಜಿತ್, ಉಪೇಂದ್ರ ಯಾದವ್ (ವಿ.ಕೀ.), ಕೆ. ಗೌತಮ್, ರಾಹುಲ್ ಚಹರ್, ಸೌರಭ್ ಕುಮಾರ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ಇಶಾನ್ ಪೊರೆಲ್, ಅರ್ಜಾನ್ ನಗÌಸ್ವಾಲಾ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.