ನೋಡುವ ದೃಷ್ಟಿಗಿಂತ ಒಳಗಣ್ಣಿನ ದೃಷ್ಟಿಕೋನ ಮುಖ್ಯ
Team Udayavani, Nov 11, 2021, 5:30 AM IST
ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರು ಕರಿಹಲಗೆಯಲ್ಲಿ ಬರೆದದ್ದು ಸರಿಯಾಗಿ ಕಾಣಿಸುತ್ತಿಲ್ಲವೆಂದು ಕೆಲವೊಂದು ವಿದ್ಯಾರ್ಥಿಗಳು ಗೊಣಗುತ್ತಿದ್ದಾಗ ಗುರುಗಳು ಹೇಳುತ್ತಿದ್ದ ಮಾತುಗಳು ಅದೆಷ್ಟು ವಾಸ್ತವದಿಂದ ಕೂಡಿದೆ ಎಂದು ಈಗ ಅನಿಸತೊಡಗಿದೆ. “ಜೀವನದಲ್ಲಿ ಯಶಸ್ಸಿಗೆ ದೃಷ್ಟಿಗಿಂತ ದೃಷ್ಟಿಕೋನ ಮುಖ್ಯ’ ಎಂಬ ಅವರ ಮಾತುಗಳು ಈಗಲೂ ನನ್ನ ಕಿವಿಗಳಲ್ಲಿ ಅನುರಣಿಸುತ್ತಿರುತ್ತವೆ. ಆಗ ಆ ಮಾತಿಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ನನಗೆ ಈಗ ಅವರ ಮಾತಿನ ಒಳಮರ್ಮ ಅರ್ಥವಾಗತೊಡಗಿದೆ.
ದೃಷ್ಟಿ ಬದಲಿಸಿದರೆ ದೃಶ್ಯವೂ ಬದಲಾ ದೀತು. ಸೃಷ್ಟಿಯನ್ನು ಬದಲಿಸಲು ಸಾಧ್ಯ ವಿಲ್ಲ. ಆದರೆ ನಮ್ಮ ದೃಷ್ಟಿಕೋನವನ್ನು ಬದಲಿಸಬಹುದು. ನಾವು ಖುಷಿಯಾಗಿ ಇದ್ದಾಗ ಎಲ್ಲರೂ ಒಳ್ಳೆಯವರಂತೆ ಕಾಣುತ್ತಾರೆ. ಅದೇ ನಾವು ದುಃಖ ಅಥವಾ ಕೋಪದಲ್ಲಿದ್ದಾಗ ಎಲ್ಲರೂ ಕೆಟ್ಟವರಂತೆ ಭಾಸವಾಗುತ್ತಾರೆ. ಹೇಗೆ ಕನ್ನಡಕದಲ್ಲಿ ಧೂಳು ಹಿಡಿದಿದ್ದರೆ ಕಾಣುವ ವಸ್ತು ಕೂಡ ಮಂಜಾಗಿಯೇ ಕಾಣುವುದೋ ಹಾಗೆಯೇ ನಮ್ಮ ದೃಷ್ಟಿಕೋನ ಸರಿ ಇಲ್ಲದಿದ್ದರೆ ಬೇರೆಯವರ ವ್ಯಕ್ತಿತ್ವವೂ ಸಂಶಯಾಸ್ಪದವಾಗಿಯೇ ಕಾಣುವುದು.
ಸಕಾರಾತ್ಮಕ ದೃಷ್ಟಿಯಿಂದ ನೋಡಿದರೆ ಒಳ್ಳೆಯದು; ನಕಾರಾತ್ಮಕ ದೃಷ್ಟಿಯಿಂದ ನೋಡಿದರೆ ಕೆಟ್ಟದ್ದು. ಕಣ್ಣಿನ ಒಂದೇ ನೋಟದಲ್ಲಿ ಎರಡು ಭಿನ್ನ ವ್ಯತ್ಯಾಸಗಳಿವೆ. ಒಂದೇ ಯೋಚನೆಯಲ್ಲಿ ಖುಷಿಯೂ ಇರುತ್ತದೆ, ದುಃಖವೂ ಇರುತ್ತದೆ. ಒಮ್ಮೊಮ್ಮೆ ತಪ್ಪೂ ಸರಿಯಾಗಿ ಕಾಣುವುದು. ಸರಿಯೂ ತಪ್ಪಾಗಿ ಕಾಣುವುದು. ಆದರೆ ನಾವು ಯಾವ ದೃಷ್ಟಿಕೋನದಿಂದ ನೋಡುತ್ತೇವೋ ಅದರೆ ಮೇಲೆ ನಿರ್ಧಾರವಾಗುವುದು.
ಒಮ್ಮೆ ಒಂದೂರಲ್ಲಿ ಪಂಡಿತರ ಸಭೆಯೊಂದು ನಡೆಯುತ್ತಿತ್ತು. ಪಂಡಿತರ ಭಾಷಣಗಳನ್ನು ಕೇಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭೆಯ ನಡುವೆ ಜನಸಾಗರದಲ್ಲಿದ್ದ ವ್ಯಕ್ತಿಯೋರ್ವರು ಎದ್ದು ನಿಂತು ವೇದಿಕೆಯ ಮುಂಭಾಗಕ್ಕೆ ಬಂದು ಪ್ರಶ್ನೆಯೊಂದನ್ನು ಕೇಳಿದರು. ಆದರೆ ಆ ಸಭೆಯಲ್ಲಿದ್ದ ಪಂಡಿತರೆಲ್ಲರೂ ತಮ್ಮ ತಮ್ಮ ಪಾಂಡಿತ್ಯಕ್ಕನುಗುಣವಾಗಿ ಉತ್ತರಿಸಿದರು. ಆದರೆ ಸೇರಿದ್ದ ಜನ ಸಾಗರಕ್ಕೆ ಮಾತ್ರ ಈ ಉತ್ತರಗಳು ಅಷ್ಟೊಂದು ಸಮಂಜಸ ಎಂದು ಅನಿಸ ಲಿಲ್ಲ. ಅಷ್ಟಕ್ಕೂ ಆ ಪ್ರಶ್ನೆ ಏನೆಂದರೆ ದೇವರು ಎಲ್ಲಿದ್ದಾನೆ ಎಂಬುದು. ಆಗ ಎಳೆಯ ಬಾಲಕನೋರ್ವ ಎದ್ದು ನಿಂತು “ದೇವರು ಇಲ್ಲೇ ಇದ್ದಾನೆ’ ಎಂದು ಉತ್ತರಿಸಿದನು. ಇದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಅವನನ್ನು ಕಂಡು ಅನೇಕರು “ಎಲ್ಲಿದ್ದಾರೆ ದೇವರು?, ತೋರಿಸು’ ಎಂದು ಒತ್ತಾಯಿಸಿದರು. ಆಗ ಆ ಹುಡುಗನು ಎಲ್ಲರಿಗೂ ಕೆಲವೇ ಕೆಲವು ನಿಮಿಷಗಳವರೆಗೆ ಉಸಿರಾಟವನ್ನು ನಿಲ್ಲಿಸುವಂತೆ ಮನವಿ ಮಾಡಿದನು. ಅವನ ಮಾತಿಗೆ ಬೆಲೆ ಕೊಟ್ಟು ಉಸಿರಾಟವನ್ನು ಹಿಡಿ ದಿಟ್ಟುಕೊಳ್ಳಲು ಕೆಲವರು ಪ್ರಯ ತ್ನಿಸಿದರಾದರೂ ವಿಫಲರಾದರು. ಯಾರಿಂದಲೂ ಉಸಿರಾಟವನ್ನು ಹೆಚ್ಚು ಸಮಯ ದವರೆಗೆ ತಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:96 ಲಕ್ಷ ಕೋಟಿ ರೂ. ಪರಿಹಾರ ನೀಡಿ! ಮಾಲಿನ್ಯದ ದುಷ್ಪರಿಣಾಮ ತಡೆಗೆ ಆರ್ಥಿಕ ಸಹಾಯ ಕೋರಿಕೆ
ಆಗ ಆ ಹುಡುಗನು “ಇದು ದೇವರು’. ಈ ಗಾಳಿ ದೇವರು. ಇದಿಲ್ಲದೇ ಬದುಕಲು ಅಸಾಧ್ಯವಾಗುವ ಈ ನಮ್ಮ ಉಸಿರೇ ದೇವರು. ಒಬ್ಬ ಮನುಷ್ಯನು ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಶಕ್ತಿಶಾಲಿಯಾಗಿರಲಿ ಉಸಿರಾಟವಿದ್ದರೆ ಮಾತ್ರ ಅವನ ಅಸ್ತಿತ್ವ ಇರಲು ಸಾಧ್ಯ. ಅಷ್ಟಕ್ಕೂ ನಾವು ಮನುಷ್ಯರು ಆರಾಧನಾಲ ಯಗಳಿಗೇ ಹೋಗಿಯೇ ಪ್ರಾರ್ಥಿಸ ಬೇಕೆಂದೇನಿಲ್ಲ, ದೇವರನ್ನು ಕಾಣಲು ಸುಮ್ಮನೆ ಕನ್ನಡಿಯ ಮುಂದೆ ನಿಂತು ನೋಡಿದರೆ ಸಾಕು. ನಮ್ಮ ತನು, ಮನ ಶುದ್ಧವಾಗಿದ್ದರೆ ನಾವೇ ದೇವರು. ಹೀಗಾಗಿ ದೇವರು ಎಲ್ಲೆಲ್ಲಿಯೂ ಇರುವನು ಎಂಬ ಹುಡುಗನ ಮಾತು ಅಲ್ಲಿ ನೆರೆದಿದ್ದ ಅಷ್ಟೂ ಮಂದಿಯ ಕಣ್ಣು ತೆರೆಸಿತು.ಅವನು ಉಸಿರಾಟದಲ್ಲಿ ದೇವರನ್ನು ಕಂಡರೆ ಕೆಲವರು ಅವನಲ್ಲಿಯೇ ದೇವ ರನ್ನು ಕಂಡರು. ನಮ್ಮೆಲ್ಲರಿಗೂ ದೇವರು ಉಸಿರಾಟವಾಗಿಯೋ ಮಗುವಾಗಿಯೋಕಾಣಬಹುದು. ಆದರೆ ನಮಗೆ ನೋಡುವ ಕಣ್ಣಿರಬೇಕು. ನಾವು ನೋದಲು ಸಿದ್ಧರಾಗಿರಬೇಕು. ನೋಡುವ ಕಣ್ಣು ಒಂದೇ ಆದರೆ ಯೋಚಿಸುವ, ಆಲೋಚಿಸುವ ಮನಸ್ಸು ಬೇರೆ. ದೃಷ್ಟಿ ಕೋನ ಬೇರೆ. ಹೊರನೋಟಕ್ಕೆ ಕಾಣೋದೆಲ್ಲ ಮಿಥ್ಯ. ಒಳಹೊಕ್ಕು ನೋಡಿದಾಗ ಎಲ್ಲವೂ ಸತ್ಯ ಎನ್ನುವುದು ಸರ್ವ ವೇದ್ಯ. ಅದ್ದರಿಂದ ಹೊರಗಣ್ಣಿನ ದೃಷ್ಟಿ ಯಿಂದ ದೃಶ್ಯವನ್ನು ನೋಡೋಣ. ಆದರೆ ಒಳಗಣ್ಣಿನ ದೃಷ್ಟಿಕೋನದಿಂದ ಆ ದೃಶ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳೋಣ.
-ನಿಕ್ಷಿತಾ ಸಿ., ಹಳೆಯಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.