ದೇವದಾಸಿಯರ ಬಾಕಿ ಪಿಂಚಣಿ ಬಿಡುಗಡೆಗೊಳಿಸಿ
Team Udayavani, Nov 11, 2021, 3:18 PM IST
ಬಳ್ಳಾರಿ: ದೇವದಾಸಿಯರ ಬಾಕಿಪಿಂಚಣಿ ಹಣವನ್ನು ಕೂಡಲೇಬಿಡುಗಡೆಗೊಳಿಸಬೇಕು. ಮಾಸಿಕಸಹಾಯಧನವನ್ನು 3 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಸೇರಿದಂತೆ ಇನ್ನಿತರೆಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ರಾಜ್ಯದೇವದಾಸಿಯರ ವಿಮೋಚನಾ ಸಂಘ, ಜಿಲ್ಲಾಘಟಕದಿಂದ ಬುಧವಾರ ಅನಿರ್ದಿಷ್ಟಾವ ಧಿಪ್ರತಿಭಟನೆಗೆ ಹಮ್ಮಿಕೊಳ್ಳಲಾಯಿತು.
ರಾಜ್ಯ ಸರ್ಕಾರ ದೇವದಾಸಿಯರಿಗೆಮತ್ತಷ್ಟು ನೆರವನ್ನು ಕಲ್ಪಿಸಿ ಅನಿಷ್ಟ ದೇವದಾಸಿಪದ್ಧತಿಯಿಂದ ಬಿಡುಗಡೆ ಹೊಂದಲುನೆರವಾಗುವ ಬದಲು ಇರುವ ಸೌಲಭ್ಯಗಳನ್ನುಕಿತ್ತುಕೊಂಡು ಅವರನ್ನು ಇನ್ನಷ್ಟು ಸಂಕಷ್ಟಕ್ಕೆದೂಡುವ ನೀತಿ ಅನುಸರಿಸುತ್ತಿದೆ. ರಾಜ್ಯದ14 ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಅಧಿಕಸಂಖ್ಯೆಯಲ್ಲಿ ತೀವ್ರ ಸಂಕಷ್ಟದಲ್ಲಿರುವಇವರ ಕುರಿತು ಯಾವೊಬ್ಬ ಶಾಸಕರು ಸಹವಿಧಾನಸಭೆಯಲ್ಲಿ ಚರ್ಚಿಸುತ್ತಿಲ್ಲ. ಆದರೆಹೋರಾಟ ನಡೆಸಿ ಸಣ್ಣಪುಟ್ಟ ಸೌಲಭ್ಯಗಳನ್ನುಪಡೆಯುತ್ತಿರುವ ದೇವದಾಸಿಯರನ್ನುಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಉನ್ನತಾ ಧಿಕಾರಿಗಳುಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದುಪ್ರತಿಭಟನಾಕಾರರು ಆರೋಪಿಸಿದ್ದಾರೆ.
ದೇವದಾಸಿಯರ ಮದುವೆ, ಪ್ರೋತ್ಸಾಹಧನನೀಡುವಾಗ ಪ್ರತಿ ಫಲಾನುಭವಿಗಳಿಂದಲೂ 1ಲಕ್ಷ ರೂಗಳಿಗಿಂತ ಹೆಚ್ಚಿನ ಮೊತ್ತ ನೀಡುವಂತೆಒತ್ತಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ನ.10ರಿಂದ 12 ರವರೆಗೆ ಮೂರು ದಿನಗಳಕಾಲ ಅನಿರ್ದಿಷ್ಟಾವ ಧಿ ಪ್ರತಿಭಟನೆನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇವದಾಸಿಯರ ಆರೇಳು ತಿಂಗಳಿಂದಬಾಕಿ ಇರುವ ಪಿಂಚಣಿ ಹಣವನ್ನುತಕ್ಷಣವೇ ಬಿಡುಗಡೆ ಮಾಡಬೇಕು.ಎಲ್ಲ ದೇವದಾಸಿಯರ ಮಾಸಿಕಸಹಾಯಧನವನ್ನು 3 ಸಾವಿರ ರೂಗಳಿಗೆಹೆಚ್ಚಿಸಬೇಕು. ಗಣತಿಯಲ್ಲಿ ಪರಿಗಣಿಸಲಾಗದಸಾವಿರಾರು ಮಹಿಳೆಯರನ್ನು ಗಣತಿ ಪಟ್ಟಿಗೆಸೇರ್ಪಡೆ ಮಾಡಿ ಸೌಲಭ್ಯ ಒದಗಿಸಬೇಕು.ದೇವದಾಸಿಯರ ಪರಿತ್ಯಕ್ತ ಮಕ್ಕಳ ಗಣತಿ ನಡೆಸಿಅವರಿಗೂ ದೇವದಾಸಿಯರ ರೀತಿಯಲ್ಲಿಪುನರ್ವಸತಿಗೆ ಕ್ರಮ ವಹಿಸಬೇಕು.
ಶೇ.75ರಷ್ಟು ಸಹಾಯಧನದೊಂದಿಗೆ ಉಳಿದಶೇ. 25ರಷ್ಟು ಸಾಲಕ್ಕೆ ಐದು ವರ್ಷಗಳಕಾಲ ಬಡ್ಡಿರಹಿತವಾಗಿ ಕ್ರಮ ಕೈಗೊಳ್ಳಬೇಕು.ದೇವದಾಸಿಯರ ಕುಟುಂಬದ ಸದಸ್ಯರಿಗೆಕನಿಷ್ಠ 10 ಲಕ್ಷ ರೂಗಳ ಮೌಲ್ಯ 80/80ಅಳತೆಯ ಹಿತ್ತಲು ಸಹಿತ ಮನೆ ಒದಗಿಸಲುಯೋಜನೆ ರೂಪಿಸಬೇಕು ಸೇರಿದಂತೆ ಇನ್ನಿತರೆಬೇಡಿಕೆಗಳನ್ನು ಈಡೇರಿಸಬೇಕು ಎಂದುಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯರಾಜ್ಯ ಮುಖಂಡ ಯು.ಬಸವರಾಜ, ಜೆ.ಚಂದ್ರಕುಮಾರಿ, ಜಿಲ್ಲಾ ಕಾರ್ಯದರ್ಶಿಎ. ಸ್ವಾಮಿ, ಎಚ್. ದುರುಗಮ್ಮ, ಬಸಮ್ಮ,ಗಂಗಮ್ಮ, ಎಚ್. ಯಂಕಮ್ಮ, ಈರಮ್ಮ,ದುರುಗಮ್ಮ, ತಿಪ್ಪಮ್ಮ, ಹುಲಿಗಮ್ಮ,ಮುಖಮ್ಮ, ಲಕ್ಷ್ಮಮ್ಮ, ಮಾಳಮ್ಮ, ರಾಜಮ್ಮ,ನೀಲಾವತಿ, ಹೊನ್ನೂರಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.