ನೆಲ-ಜಲ-ಭಾಷೆ ಉಳಿವಿಗೆ ಕಂಕಣ ಬದ್ಧರಾಗಿ
Team Udayavani, Nov 11, 2021, 3:27 PM IST
ಕೊಟ್ಟಿಗೆಹಾರ: ಕರುನಾಡಿನಲ್ಲಿರುವ ಎಲ್ಲ ಭಾಷಿಗರು ಕನ್ನಡದನೆಲ ಜಲ ಭಾಷೆಯ ಉಳಿವಿಗೆ ಕಂಕಣಬದ್ಧರಾಗೋಣಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಅಧ್ಯಕ್ಷ ರಾಮಚಂದ್ರ ಹೇಳಿದರು.
ಬಣಕಲ್ ಬಾಳೂರು ಹಿರೇಬೈಲ್‌ನ ಬ್ರಹ್ಮಶ್ರೀನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಬಣಕಲ್‌ನಲ್ಲಿ ಬುಧವಾರ ನಡೆದ 66ನೇ ಕನ್ನಡ ರಾಜ್ಯೋತ್ಸವಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಹುತೇಕ ಅನ್ಯಭಾಷಿಕರು ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡಿಗರೇಆಗಿ ಹೋಗಿದ್ದಾರೆ.
ಕನ್ನಡ ಭಾಷೆಯನ್ನು ನಿತ್ಯ ಬದುಕಿನಲ್ಲಿಬಳಸಬೇಕಿದೆ ಎಂದರು.ಕಸಾಪ ತಾಲೂಕು ಪೂರ್ವಾಧ್ಯಕ್ಷರಾದ ಮಗ್ಗಲಮಕ್ಕಿಗಣೇಶ್ ಮಾತನಾಡಿ ಕನ್ನಡ ಭಾಷೆಯ ಸಮೃದ್ಧ ಇತಿಹಾಸವನ್ನುಎಲ್ಲರೂ ಅರಿಯಬೇಕಿದೆ. ಕನ್ನಡ ನಾಡು ನುಡಿಯ ಹಿರಿಮೆಮಕ್ಕಳಿಗೆ ಕಲಿಸಬೇಕಿದೆ ಎಂದರು.
ಬಣಕಲ್ ಗ್ರಾಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಮಾತನಾಡಿ,ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಿ ಬೆಳೆಯಬೇಕು.ಬದಲಾದ ಕಾಲಮಾನದಲ್ಲಿ ಕನ್ನಡ ತಂತ್ರಜ್ಞಾನದಭಾಗವಾದಾಗ ಕನ್ನಡ ಭಾಷೆಯ ಉಳಿವು ಸಾಧ್ಯ ಎಂದರು.ಕನ್ನಡ ಪರ ಹೋರಾಟಗಾರರಾದ ಹೊರಟ್ಟಿ ರಘುಮಾತನಾಡಿ, ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಲುಸೇರಿದಂತೆ ಎಲ್ಲ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲಆದ್ಯತೆ ಕೊಡಬೇಕು. ಕನ್ನಡ ಭಾಷೆ ಕರ್ನಾಟಕದಲ್ಲಿಅಗ್ರಸ್ಥಾನದಲ್ಲಿರಬೇಕು ಎಂದರು.
ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷಅಭಿಲಾಷ್, ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಕ್ಕಿಮಂಜುನಾಥ್, ಕಸಾಪ ಬಣಕಲ್ ಹೋಬಳಿ ಪೂರ್ವಾಧ್ಯಕ್ಷವಸಂತ್ ಹಾರ್‌ಗೊàಡು, ಸಂಘದ ಕಾನೂನು ಸಲಹೆಗಾರರುಹಾಗೂ ವಕೀಲರಾದ ಪರೀಕ್ಷಿತ್ ಜಾವಳಿ ಮಾತನಾಡಿದರು.ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ನೂತನಅಧ್ಯಕ್ಷರಾಗಿ ಆಯ್ಕೆಯಾದ ಅಭಿಲಾಷ್ ಅವರನ್ನು ಬ್ರಹ್ಮಶ್ರೀನಾರಾಯಣಗುರು ಮಲಯಾಳಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮೌನಾಚರಣೆ ಮಾಡುವ ಮೂಲಕನಟ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿಸಲ್ಲಿಸಲಾಯಿತು.ಶಿಕ್ಷಕ ಭಕ್ತೇಶ್, ಸಾಹಿತಿಗಳಾದ ಹೆಸಗಲ್ ವೆಂಕಟೇಶ್,ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಬಣಕಲ್ ಬಾಳೂರು ಹಿರೇಬೈಲ್ ಭಾಗದ ಪದಾಧಿ ಕಾರಿಗಳುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.