ಸಲ್ಮಾನ್ ಖುರ್ಷಿದ್ ವಿರುದ್ಧ ಎರಡು ಪ್ರತ್ಯೇಕ ದೂರು
Team Udayavani, Nov 12, 2021, 5:54 AM IST
ಹೊಸದಿಲ್ಲಿ: ಸನಾತನ ಧರ್ಮದ ವಿರುದ್ಧ ಆಕ್ಷೇಪಾರ್ಹವಾಗಿ ಬರೆದ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿರುವ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ವಿರುದ್ಧ ಹೊಸದಿಲ್ಲಿಯ ವಿವೇಕ್ ಗಾರ್ಗ್ ಹಾಗೂ ವಿನೀತ್ ಜಿಂದಾಲ್ ಎಂಬ ಇಬ್ಬರು ವಕೀಲರು, ಎರಡು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಸಲ್ಮಾನ್ ಖುರ್ಷಿದ್ ಪುಸ್ತಕ “ಸನ್‌ರೈಸ್ ಓವರ್ ಅಯೋಧ್ಯಾ’ದಲ್ಲಿ ಹಿಂದುತ್ವಕ್ಕೆ ಅವಮಾನಕಾರಿಯಾದ ವಾಕ್ಯಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಪುಸ್ತಕದಲ್ಲಿರುವ ಈ ಸಾಲುಗಳು, ದೇಶದ್ರೋಹ, ಭಾರತದ ಸಾರ್ವಭೌಮತ್ವವನ್ನು ಬುಡಮೇಲಾಗಿಸುವ ಪಿತೂರಿಯನ್ನು ತೋರಿಸುತ್ತಿದ್ದು, ಈ ಪ್ರಕರಣ ತನಿಖೆಗೆ ಅರ್ಹವಾಗಿದೆ ಎಂದು ವಿವೇಕ್ ಗಾರ್ಗ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ
ಏನಿದೆ ಪುಸ್ತಕದಲ್ಲಿ?: ರಾಮಜನ್ಮಭೂಮಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ಖುರ್ಷಿದ್ ಈ ಪುಸ್ತಕ ಬರೆದಿದ್ದು, “ಭಾರತದ ಪುರಾತನ ಋಷಿಮುನಿಗಳು ಹುಟ್ಟುಹಾಕಿದ್ದ ಹಿಂದುತ್ವ ಹಾಗೂ ಸನಾತನ ಧರ್ಮಗಳ ಪರಿಕಲ್ಪನೆಗಳನ್ನು ರಾಜಕೀಯ ಆವಶ್ಯ ಕತೆಗಳಿಗೆ ತಕ್ಕಂತೆ ಬದಲಾಯಿಸಲಾಗಿದೆ. ಹೊಸ ಪರಿಕಲ್ಪನೆಗಳು ಇಸ್ಲಾಂನ ಜೆಹಾದ್ ಸಂಘಟನೆಗಳಾದ ಬೊಕೊ ಹರಾಮ್ ಹಾಗೂ ಐಎಸ್‌ಐಎಸ್‌ನ ಸಿದ್ಧಾಂತಗಳನ್ನು ಹೋಲುತ್ತಿವೆ’ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.