ಕ್ಯೂಟ್ ಜೋಡಿ ಮೋಡಿಗೆ ರೆಡಿ! ಟಾಮ್ ಅಂಡ್ ಜೆರ್ರಿ ಇಂದು ತೆರೆಗೆ
Team Udayavani, Nov 12, 2021, 11:11 AM IST
ರಾಘವ್ ವಿನಯ್ ಶಿವಗಂಗೆ ನಿರ್ದೇಶನ ಮಾಡಿರುವ “ಟಾಮ್ ಆಂಡ್ ಜೆರ್ರಿ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ನಿಶ್ಚಿತ್ ಕೊರೋಡಿ ಮತ್ತು ಚೈತ್ರಾ ರಾವ್ ಜೋಡಿಯಾಗಿ ಕಾಣಿಸಿಕೊಂಡಿರುವ “ಟಾಮ್ ಅಂಡ್ ಜೆರ್ರಿ’ಯಲ್ಲಿ ತಾರಾ ಅನುರಾಧಾ, ಜೈ ಜಗದೀಶ್, ಕೋಟೆ ಪ್ರಭಾಕರ್, ಸೂರ್ಯ ಶೇಖರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಕಾರ್ಟೂನ್ ಆಗಿ “ಟಾಮ್ ಅಂಡ್ ಜೆರ್ರಿ’ ಚಿಣ್ಣರಿಗೆ ಇಷ್ಟವಾಗಿರುವಂತೆ, ಸಿನಿಮಾವಾಗಿ “ಟಾಮ್ ಅಂಡ್ ಜೆರ್ರಿ’ ದೊಡ್ಡವರಿಗೆ ಇಷ್ಟವಾಗಲಿದೆ ಎನ್ನುವುದು ಚಿತ್ರತಂಡದ ಮಾತು. ಇನ್ನು ಚಿತ್ರದಲ್ಲಿ “ಟಾಮ್ ಅಂಡ್ ಜೆರ್ರಿ’ಯಂಥದ್ದೇ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿಶ್ಚಿತ್ ಮತ್ತು ಚೈತ್ರಾ ರಾವ್ ತೆರೆಮೇಲೆ ಕಿತ್ತಾಟ, ಗುದ್ದಾಟ, ಮುದ್ದಾಟ ಎಲ್ಲವನ್ನೂ ಮಾಡಲಿದ್ದಾರಂತೆ.
ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ನಿಶ್ಚಿತ್, “ಟಾಮ್ ಅಂಡ್ ಜೆರ್ರಿ’ ಸಿನಿಮಾದಲ್ಲಿ ಎಲ್ಲಾ ಮಧ್ಯಮವರ್ಗದ ಹುಡುಗರನ್ನು ಪ್ರತಿನಿಧಿಸುವ ಧರ್ಮ ಎನ್ನುವ ಪಾತ್ರ ನನ್ನದು. ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಎಂಬ ಛಲ ಮತ್ತು ಕಾನ್ಫಿಡೆನ್ಸ್ ಇರುವಂಥ ಹುಡುನಿಗೆ ಎದುರಾಗುವ ಹುಡುಗಿಯೊಬ್ಬಳು ಹೇಗೆಲ್ಲ ಅವನ ಮೇಲೆ ಪರಿಣಾಮ ಬೀರುತ್ತಾಳೆ ಅನ್ನೋದು ನನ್ನ ಪಾತ್ರ. ತುಂಬ ಸ್ಟ್ರಾಂಗ್ ಆಗಿರುವಂಥ, ನೋಡುಗರಿಗೆ ಇಷ್ಟವಾಗುವಂಥ ಪಾತ್ರ’ ಎನ್ನುತ್ತಾರೆ.
ಇದನ್ನೂ ಓದಿ:ಮನೆಯಲ್ಲಿಯೇ ಇದ್ರೆ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತೆ ಅನ್ನೋ ಭಯ : ಸೈಫ್ ಅಲಿಖಾನ್
ನಟಿ ಚೈತ್ರಾ ರಾವ್ ಮಾತನಾಡಿ, “ಈ ಸಿನಿಮಾದಲ್ಲಿ ಸತ್ಯ ಎನ್ನುವ ಹುಡುಗಿಯ ಪಾತ್ರ ನನ್ನದು. ಎನ್ ಜಿಒ ಒಂದರಲ್ಲಿ ಕೆಲಸ ಮಾಡುವ ಮತ್ತು ಯಾವಾಗಲೂ ಸ್ವತಂತ್ರವಾಗಿರಲು ಬಯಸುವ ಹುಡುಗಿಯಾಗಿರುತ್ತಾಳೆ. ಯಾವುದಕ್ಕೂ ತುಂಬ ತಲೆಕೆಡಿಸಿಕೊಳ್ಳದ, ಇಂದಿನ ಜೀವನ ಇಂದಿಗೆ ಎಂದುಕೊಂಡಿರುವ ಹುಡುಗಿಯ ಪಾತ್ರ ನನ್ನದು. ನಿಜ ಜೀವನದಲ್ಲಿ ನನ್ನಗೆ ತದ್ವಿರುದ್ದವಾಗಿರುವಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ’ ಎನ್ನುತ್ತಾರೆ .
“ರಿದ್ಧಿ ಸಿದ್ಧಿ ಫಿಲಂಸ್’ ಬ್ಯಾನರ್‌ನಲ್ಲಿ ರಾಜು ಶೇರಿಗಾರ್ ನಿರ್ಮಿಸಿರುವ “ಟಾಮ್ ಅಂಡ್ ಜೆರ್ರಿ’ ಚಿತ್ರದ ಟ್ರೇಲರ್, ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.