ರೈತರ ಹಿತ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ದವಿದೆ: ಡಾ. ಸುಮನ್
Team Udayavani, Nov 12, 2021, 3:03 PM IST
ಶಿರಸಿ: ಹಳ್ಳಿಯಲ್ಲಿ ಅಡಿಕೆ ರಕ್ಷಣೆಗೆ ಕಾವಲು ಪಡೆ ಮಾಡಿಕೊಂಡರೆ ಪೊಲೀಸ್ ಇಲಾಖೆ ಗುರುತಿನ ಚೀಟಿ ಕೊಡಲಿದೆ. ಇಲಾಖೆಯು ಕಳ್ಳತನ ಆಗದಂತೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೆಕರ್ ಶುಕ್ರವಾರ ತಿಳಿಸಿದರು.
ಅವರು ಟಿಎಸ್ಎಸ್, ಟಿಆರ್ಸಿ ಸಹಕಾರಿ ಸಂಸ್ಥೆ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಹಮ್ಮಿಕೊಂಡ ಅಡಿಕೆ ಕಳವು ಹಾಗೂ ಸಾಮೂಹಿಕ ಜವಾಬ್ದಾರಿ, ಕಾನೂನು ಅರಿವು ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರ ಹಿತ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ದವಿದೆ. ಕಳವು, ಶಂಕಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕೊಡಿ ಎಂದ ಅವರು, ಇಲಾಖೆ ಹಾಗೂ ಸಮಾಜದ ಸಮಸ್ಯೆ ಗುರುತಿಸಿ ಕೆಲಸ ಮಾಡಲಾಗುತ್ತದೆ. ಬಂದೂಕು ಪರವಾನಗಿಗೆ ತರಬೇತಿ ಶಿಬಿರ ನಡೆಸಲಾಗಿದೆ. ಅಡಿಕೆ ಕಳ್ಳರ ಪೆರೆಡ್ ಕೂಡ ಇಲಾಖೆ ನಡೆಸಲಿದೆ ಎಂದರು.
ಟಿಆರ್ ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಮಾತನಾಡಿ, ಅಡಿಕೆಗೆ ಉತ್ತಮ ಮಾರುಕಟ್ಟೆ ಬಂದಿದೆ. ಆದರೆ ಅದಕ್ಕೆ ಕಾಡು ಪ್ರಾಣಿಗಳು ಹಾಗೂ ಕಳ್ಳಕಾರರ ಭಯ ಕಾಡಲಾರಂಭಿಸಿದೆ. ಅದಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ಸತತ 10 ದಿನಗಳ ಮಳೆಗೆ ಚೆನ್ನೈ ತತ್ತರ; ಆಸ್ಪತ್ರೆ, ಮನೆಗಳಿಗೆ ನುಗ್ಗಿದ ನೀರು; 14 ಮಂದಿ ಸಾವು
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬದರಿನಾಥ ಮಾತನಾಡಿ, ರೈತರ ಬೆಳೆಗಳ ಕಳ್ಳತನದ ಜಾಗೃತಿ ಕಾರ್ಯಕ್ರಮ ಮಾಡಿರಲಿಲ್ಲ. ಯಾವುದೋ ಬೇರೆ ರಾಜ್ಯಗಳಿಂದ ಜನರು ಬರುತ್ತಾರೆ. ನಕಲಿ ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಬೇರೆ ರಾಜ್ಯಗಳಿಂದ ಬಂದು ತಾವು ಅಡಿಕೆ ಖರೀರಿಗೆ ಬಂದಿರುವುದಾಗಿ ಹೇಳಿ ದೋಚುತ್ತಾರೆ. ಈ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಬಗ್ಗೆ ಜಾಗೃತಿ ಇರಬೇಕು. ಬಂದೂಕು ಪುನರ್ ಬಂದೂಕು ಪರವಾನಗಿ ಕೊಡುತ್ತೇವೆ. ಏನೇ ಘಟನೆ ಆದರೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು ಎಂದರು.
ಶಿರಸಿ ಉಪವಿಭಾಗದ ಡಿಎಸ್ಪಿ ರವಿ ಡಿ ನಾಯ್ಕ, ಅಡಿಕೆಗೆ ಹೆಚ್ಚಿನ ಬೆಲೆ ಬಂದಿದ್ದರಿಂದ ಅದರ ರಕ್ಷಣೆ ರೈತರಿಗೆ ಸವಾಲು. ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಅಡಿಕೆ ತೋಟಗಳು ಹೆಚ್ಚಿನ ಭಾಗ ಇದ್ದಲ್ಲಿ ಗಸ್ತುಗಳನ್ನು ಹೆಚ್ಚಿಸಲಾಗಿದೆ. ಹೇರೂರು ಹೆಗ್ಗರಣಿ, ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಚೆಕ್ ಪೋಸ್ಟ್ ಹೆಚ್ಚಿಸಲಾಗಿದೆ. ಅನುಮಾನ ಬಂದರೆ 112 ಗೆ ಕಾಲ್ ಮಾಡಿ ತಕ್ಷಣ ಸ್ಪಂದನೆ ಸಿಗುತ್ತದೆ. ಅಪರಿಚಿತರು ಯಾರೇ ಬಂದರೂ ಅವರೊಟ್ಟಿಗೆ ವ್ಯವಹರಿಸಬೇಡಿ. ಅಧಿಕೃತ ಟ್ರೇಡರ್ಸ್ ಜೊತೆ ಮಾತ್ರ ವ್ಯವಹರಿಸಿ. ಮನೆಯಲ್ಲಿ ಹೆಚ್ಚಿನ ಹಣ ಇರಿಸಿಕೊಳ್ಳಬೇಡಿ. ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಮನೆಯಲ್ಲಿಟ್ಟುಕೊಳ್ಳಿ. ಕಳ್ಳತನದ ಬಗ್ಗೆ ಜಾಗೃತಿಯಿಂದ ಇರಬೇಕು. ಯಾರಾದರೂ ಅಪರಿಚಿತರು ಬಂದು ಬೆಳೆಗಳ ಬಗ್ಗೆ ಮೋಸ ಮಾಡಲು ಬಂದಾಗ ರೈತರು ಕಾನೂನು ಕೈಗೆ ತೆಗೆದುಕೊಳ್ಳದೇ ತಕ್ಷಣ ಪೊಲೀಸರಿಗೆ ತಿಳಿಸಿ. ಆನ್ ಲೈನ್ ವಂಚನೆ ಆಗುತ್ತವೆ. ಈ ಬಗ್ಗೆ ಹತ್ತು ಬಾರಿ ಯೋಚನೆ ಮಾಡಿ ವ್ಯವಹರಿಸಿ ಎಂದರು.
ಸಿಪಿಐ ರಾಮಚಂದ್ರ ನಾಯಕ ವಂದಿಸಿದರು. ಶಿರಸಿ, ಯಲ್ಲಾಪುರ, ಮುಂಡಗೋಡ ಭಾಗದ ರೈತರು ಇದ್ದರು. ಪೊಲೀಸರ ಜೊತೆ ಸಂವಾದ ಕೂಡ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.