ಡಿಕ್ಟೇಟರ್ ಆಫ್ ಡಾರ್ಕ್ ವರ್ಲ್ಡ್ ‘ಹಿಟ್ಲರ್’ ಎಂಟ್ರಿಗೆ ಕೌಂಟ್‌ಡೌನ್
Team Udayavani, Nov 12, 2021, 2:01 PM IST
“ಹಿಟ್ಲರ್’ ಎಂಬ ಹೆಸರನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಸರ್ವಾಧಿಕಾರಿಯಾಗಿ ಅಬ್ಬರಿಸಿದ್ದ “ಹಿಟ್ಲರ್’ ಕೆಲವರ ಪಾಲಿಗೆ ಹೀರೋ ಆದರೆ, ಇನ್ನು ಕೆಲವರ ಪಾಲಿಗೆ ಎಂದೆಂದಿಗೂ ಕ್ಷಮಿಸಲಾಗದ ವಿಲನ್. ಈಗ ಇದೇ “ಹಿಟ್ಟರ್’ ಹೆಸರಿನಲ್ಲಿ ಸಿನಿಮಾವೊಂದು ಇಂದು ತೆರೆಗೆ ಬಂದಿದೆ.
ಅಂದಹಾಗೆ, ಈ ಸಿನಿಮಾದ ಹೆಸರು, “ಹಿಟ್ಲರ್’ ಅಂತಿದ್ದರೂ, ಇದೇನೂ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಯೋಪಿಕ್ ಅಲ್ಲ. ಇದೊಂದು ಔಟ್ ಆ್ಯಂಡ್ ಔಟ್ ಅಂಡರ್‌ವಲ್ಡ್ ಕಂ ಲವ್ ಕಥಾಹಂದರದ ಸಿನಿಮಾ. ಸಿನಿಮಾದ ಸಬೆjಕ್ಟ್ ಮತ್ತು ಹೀರೋ ಪಾತ್ರಕ್ಕೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ತಮ್ಮ ಸಿನಿಮಾಕ್ಕೆ “ಹಿಟ್ಲರ್’ ಎಂದು ಹೆಸರಿಡಲಾಗಿದೆ ಅನ್ನೋದು ಚಿತ್ರತಂಡದ ವಿವರಣೆ.
“ಕೆಜಿಎಫ್’ ಚಿತ್ರದ ಗೀತ ಸಾಹಿತ್ಯದ ಮೂಲಕ ಗಮನ ಸೆಳೆದಿದ್ದ ಕಿನ್ನಾಳ್ ರಾಜ್ “ಹಿಟ್ಲರ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:ತಮಗಿಂತ ಚಿಕ್ಕ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ಹೇಳಿಕೊಂಡ ರಶ್ಮಿಕಾ
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಕಿನ್ನಾಳ್ ರಾಜ್, “ಅಂಡರ್ ವಲ್ಡ್‌ನಲ್ಲಿರುವ ಅನಾಥ ಹುಡುಗನೊಬ್ಬನ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಮುಂದೆ ತನ್ನ ದಾರಿ ಸರಿಯಿಲ್ಲವೆಂದು ಅರಿತು, ಅದರಿಂದ ಹೊರ ಬರುವಾಗ ಆತ ಏನೇನು ಕಷ್ಟಗಳು ಎದುರಿಸುತ್ತಾನೆ. ಅದೆಲ್ಲವನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಸಿನಿಮಾ ಒನ್‌ಲೈನ್ ಸ್ಟೋರಿ. ಇಲ್ಲಿ ಲವ್, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲವೂ ಇದೆ. ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟ ವಾಗುವಂತೆ ಸಿನಿಮಾ ಮಾಡಿದ್ದೇವೆ’ ಎಂದು ಚಿತ್ರದ ಕಥಾಹಂದರದ ವಿವರಣೆ ನೀಡುತ್ತಾರೆ.
“ಹಿಟ್ಲರ್’ ಬಗ್ಗೆ ಮಾತನಾಡುವ ಲೋಹಿತ್, “ಸಾಮಾನ್ಯವಾಗಿ “ಹಿಟ್ಲರ್’ ಅಂದ್ರೆ ಎಲ್ಲರಿಗೂ ಉಗ್ರ ಮತ್ತು ಗಂಭೀರ ರೂಪ ಕಣ್ಮುಂದೆ ಬರುತ್ತದೆ. ಅಂಥದ್ದೇ ಪಾತ್ರ ಈ ಸಿನಿಮಾದಲ್ಲಿ ನನಗೂ ಸಿಕ್ಕಿದೆ. ಇದೊಂದು ಅಂಡರ್ ವಲ್ಡ್ ಸಬೆjಕ್ಟ್ ಆಗಿದ್ದು, ಇದರಲ್ಲಿ ನಾನು ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.
“ಹಿಟ್ಲರ್’ ಚಿತ್ರದಲ್ಲಿ ಲೋಹಿತ್‌ಗೆ ನಾಯಕಿಯಾಗಿ ಸಸ್ಯಾ ಜೋಡಿಯಾಗಿ ದ್ದಾರೆ. ಚಿತ್ರದ 3 ಹಾಡುಗಳಿಗೆ ಆಕಾಶ್ ಪರ್ವ ಸಂಗೀತವಿದ್ದು, “ಗಾನಶಿವ ಮೂವೀಸ್’ ಬ್ಯಾನರ್‌ನಲ್ಲಿ ಮಮತಾ ಲೋಹಿತ್ “ಹಿಟ್ಲರ್’ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.