ವಯಸ್ಸು 75 ದಾಟಿದರೂ , ಇವರೀಗ ಪಿಎಚ್ ಡಿ ಮಾಡಲು ಹೊರಟ ವಿದ್ಯಾರ್ಥಿ…
ಈ ಉತ್ಸಾಹಕ್ಕೆ ಆರಂಭ ಇತ್ತು. ಅಂತ್ಯವೆನ್ನುವುದು ಇವತ್ತಿಗೂ ನಿಂತಿಲ್ಲ.
Team Udayavani, Nov 12, 2021, 2:18 PM IST
ಕಲಿಕೆಗೆ ವಯಸ್ಸಿಲ್ಲ. ಯಾವ ವಯಸ್ಸಿನಲ್ಲಾದರೂ ಕಲಿಯುತ್ತಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಸಾವಿರಾರು ಜನರು ಸಾಕ್ಷ್ಯವಾಗಿ ಕಾಣ ಸಿಗುತ್ತಾರೆ. ಅಂಥ ಸಾವಿರಾರು ಸಾಕ್ಷ್ಯಗಳಲ್ಲಿ ಒಬ್ಬರು ಕೇರಳದ ತೂತುಕುಡಿಯ 75 ವರ್ಷದ ಎಂ.ಗಣೇಶ್ ನಾಡಾರ್. ಇವರಿಗೀಗ ವಯಸ್ಸು 75 .ಆದರೆ ಇವರೀಗ ಪಿಎಚ್ ಡಿ ಗೆ ತಯಾರಾಗಿರುವ ವಿದ್ಯಾರ್ಥಿ ! ರೈತ ಕುಟುಂಬದಲ್ಲಿ ಜನಿಸಿದ ಗಣೇಶ್ ಮನೆಯಲ್ಲಿ ಬಡತನ ಸುಲಭವಾಗಿ ಕುಗ್ಗದ ಸವಾಲಾಗಿತ್ತು. ಕಷ್ಟದಲ್ಲೂ ಗಣೇಶ್ ತಂದೆ ತಾಯಿ ಅವರನ್ನು ಎಸ್ ಎಸ್ ಎಲ್ ಸಿ ವರೆಗಿನ ಶಿಕ್ಷಣವನ್ನು ನೀಡಿ, ಆರ್ಥಿಕ ಸಮಸ್ಯೆಯಿಂದ ಮುಂದೆ ಮಕ್ಕಳನ್ನು ಕಲಿಸುವ ಸಾಹಸಕ್ಕೆ ಹೋಗುವುದಿಲ್ಲ.
1974 ರಲ್ಲಿ ಗಣೇಶ್ ಕಂಪೆನಿಯೊಂದರಲ್ಲಿ ಅಟೆಂಡರ್ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾರೆ. ನಿಧಾನವಾಗಿ ದಿನನಿತ್ಯದ ಬಡತನದ ದಿನವನ್ನು ನೆಮ್ಮದಿಯ ದಿನಗಳನ್ನಾಗಿ ಮಾಡಿ ಪರಿಶ್ರಮ ಪಟ್ಟು ದುಡಿಯುತ್ತಾರೆ ಗಣೇಶ್. 2004 ರ ಸಮಯ ಅಂದು ಗಣೇಶ್ ತನ್ನ ಸುದೀರ್ಘ ಕೆಲಸದ ಅನುಭವದಿಂದ, ಭಡ್ತಿ ಹೊಂದಿ ನಿವೃತ್ತಿಯಾಗುವ ದಿನ. ನಿವೃತ್ತಿ ಆಗಿ ಎಲ್ಲರಂತೆ ನೆಮ್ಮದಿಯ ಜೀವನ ನಡೆಸುವುದು ಗಣೇಶ್ ಅವರ ಕನಸಾಗಿರಲಿಲ್ಲ. ತನ್ನ ನಾಲ್ಕು ಮಕ್ಕಳು,ಆರು ಮೊಮ್ಮಕ್ಕಳು, ಒಂದು ಮರಿಮೊಮ್ಮಗುವಿನ ಸಮ್ಮುಖದಲ್ಲಿ ಗಣೇಶ್ ಅವರು ಅಂದುಕೊಂಡ ಉನ್ನತ ವ್ಯಾಸಂಗ ಮಾಡುವ ಮೊದಲ ಹಂತದ ಹೆಜ್ಜೆಯನ್ನು ಇಡುತ್ತಾರೆ.
ಈ ಉತ್ಸಾಹಕ್ಕೆ ಅರಂಭ ಇತ್ತು. ಅಂತ್ಯವೆನ್ನುವುದು ಇವತ್ತಿಗೂ ನಿಂತಿಲ್ಲ. ಗಣೇಶ್ ಮೊದಲು ಮಾಡಿದ್ದು ಇಂಗ್ಲಿಷ್ ನಲ್ಲಿ ಮಾಸ್ಟರ್ಸ್, ಆ ಬಳಿಕ 2008 ರಲ್ಲಿ ಸೋಶಿಯಲಿಜಿ ಕೋರ್ಸ್ ಗೆ ಸೇರುತ್ತಾರೆ. 2011 ಮತ್ತು 2021 ರ ನಡುವೆ ಗಣೇಶ್ ಸಮಾಜಶಾಸ್ತ್ರ, ಇತಿಹಾಸ, ಸಾರ್ವಜನಿಕ ಆಡಳಿತ, ರಾಜಕೀಯ ವಿಜ್ಞಾನ, ಮಾನವ ಹಕ್ಕುಗಳು, ಸಾಮಾಜಿಕ ಕೆಲಸ, ಅರ್ಥಶಾಸ್ತ್ರ ಮತ್ತು ತಮಿಳಿನಲ್ಲಿ M.ಅ ಪದವಿಗಳನ್ನು ಪಡೆದಿದ್ದಾರೆ.
ಇಷ್ಟು ಮಾತ್ರವಲ್ಲದೆ, 75 ವರ್ಷದ ಹರೆಯದಲ್ಲಿ ಗಣೇಶ್ ಸಮಾಜಶಾಸ್ತ್ರದಲ್ಲಿ ಪಿಎಚ್ ಡಿ ಮಾಡಲು ತಮಿಳುನಾಡಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಅಪ್ಲೈ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಲೇಜಿನ ಕುಲಪತಿಗಳು ಡಿಸೆಂಬರ್ ನಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಗೆ ತಯರಾಗಲು ಹೇಳಿದ್ದಾರೆ. ತನ್ನ ವಯಸ್ಸನ್ನು ಪರಿಗಣಿಸಿ ತನಗೆ ಪ್ರವೇಶ ಪರೀಕ್ಷೆಯಿಲ್ಲದೆ ಪಿಎಚ್ ಡಿ ಮಾಡಲು ಅವಕಾಶ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗಣೇಶ್ ಅವರ ವಯಸ್ಸು 75 ದಾಟಿದರೂ, ಎಂ ಗಣೇಶ್ ನಾಡಾರ್ ಸಕ್ರಿಯ ಕ್ರೀಡಾಪಟು ಮತ್ತು ತರುವೈನಲ್ಲಿರುವ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸುತ್ತಿದ್ದಾರೆ.
*ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.