ನೋ ಡ್ರಾಮಾ ಶರ್ಮಾ: ಅಲೋಕ್ ಗೇಲಿ
Team Udayavani, Nov 13, 2021, 6:55 AM IST
ಹೊಸದಿಲ್ಲಿ: ತಮ್ಮನ್ನು ತಾವೇ ಹಾಸ್ಯ ಮಾಡಿ ಕೊಳ್ಳುವ ವ್ಯಕ್ತಿತ್ವ ಉಳ್ಳವರಾದ ಆಗ್ರಾ ಮೂಲದ ಬ್ರಿಟನ್‌ನ ರಾಜಕಾರಣಿ, ಅಲೋಕ್ ಶರ್ಮಾ, ತಮ್ಮನ್ನು ಜನರು “ನೋ ಡ್ರಾಮಾ… ಶರ್ಮಾ’ ಎಂದು ಆಡಿಕೊಳ್ಳುತ್ತಾರೆ ಎಂದು ತಮ್ಮನ್ನು ತಾವು ಗೇಲಿ ಮಾಡಿಕೊಂಡಿದ್ದಾರೆ.
ಅಸಲಿಗೆ, “ನೋ ಡ್ರಾಮಾ…’ ಎಂಬ ಕುಚೋ ದ್ಯದ ಸಾಲು ಬಳಕೆಯಾಗುತ್ತಿದ್ದುದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ. 2009ರಲ್ಲಿ ಅವರು ಅಧ್ಯಕ್ಷರಾದ ಹೊಸತರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಹವಾಮಾನ ಸಮ್ಮೇಳನದ (ಸಿಒಪಿ 2009) ವೇಳೆ ಒಂದು ಅಚಾತುರ್ಯ ಮಾಡಿ ಕೊಂಡಿದ್ದರು. ಆಗ, ಅವರನ್ನು “ನೋ ಡ್ರಾಮಾ ಒಬಾಮಾ’ ಎಂದು ಜನರು ಕುಚೋದ್ಯ ಮಾಡಿದ್ದರು. ಈಗ, ಬ್ರಿಟನ್‌ನ ಜನ ಅದೇ ವಾಕ್ಯ ವನ್ನು ಬಳಸಿ ನೋ ಡ್ರಾಮಾ ಶರ್ಮಾ ಎನ್ನುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಗ್ಲಾಸೊYàದಲ್ಲಿ ನಡೆ ಯುತ್ತಿರುವ ಜಾಗತಿಕ ಹವಾಮಾನ ಸಮ್ಮೇಳನ ವನ್ನು (ಸಿಒಪಿ 26) ನಿಭಾಯಿಸುವ ಹೊಣೆಗಾರಿಕೆ ಯನ್ನು ಬ್ರಿಟನ್ ಸರಕಾರ ಶರ್ಮಾರಿಗೆ ವಹಿಸಿದೆ. ಆದರೆ, ಸಮ್ಮೇಳನ ನಿಭಾಯಿಸಿದ ಬಗ್ಗೆ ಟೀಕೆಗಳು ಬಂದಿವೆ ಹಾಗಾಗಿ ತಮ್ಮನ್ನು ಜನರು ಗೇಲಿ ಮಾಡುತ್ತಿದ್ದಾರೆ ಎಂದು ಶರ್ಮಾರೇ ಹೇಳಿದ್ದಾರೆ.
ಭಾರತದ ಆಗ್ರಹ:
2015ರಲ್ಲಿ ನಡೆದಿದ್ದ ಸಿಒಪಿ 15ರ ಸಮ್ಮೇಳನದಲ್ಲಿ ಅಭಿವೃದ್ಧಿಗೊಂಡ ರಾಷ್ಟ್ರ ಗಳಿಂದ ಆಗಿರುವ ಪರಿಸರ ಮಾಲಿನ್ಯದಿಂದಾಗಿ ಅಭಿವೃದ್ಧಿಶೀಲ ರಾಷಟ್‌ರಗಳು ಅನುಭವಿಸುತ್ತಿ ರುವ ಸಮಸ್ಯೆಗಳ ನಿವಾರಣೆಗಾಗಿ ಧನ ಸಹಾಯ ನೀಡುವುದಾಗಿ ಅಭಿವೃದ್ಧಿ ಗೊಂಡಿ ರುವ ರಾಷ್ಟ್ರಗಳು ವಾಗ್ಧಾನ ಮಾಡಿ ದ್ದವು. ಅದನ್ನು ನಿಭಾ ಯಿಸಬೇಕು ಎಂದು ಪರಿಸರ ಸಚಿವ ಭುಪೇಂದರ್ ಯಾದವ್, ಗ್ಲಾಸೊYà ದ ಸಿಒಪಿ 26 ಸಮ್ಮೇಳನದಲ್ಲಿ ಆಗ್ರಹಿಸಿದ್ದಾರೆ.
ಕಲ್ಲಿದ್ದಲು ನಿಷೇಧಕ್ಕೆ ಹಿಂದೇಟು?: ವಿಶ್ವವನ್ನು ಮಾಲಿನ್ಯ ಮುಕ್ತವಾಗಿಸಲು ಎಲ್ಲ ದೇಶಗಳು ತಮ್ಮಲ್ಲಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾ ದನೆಗೆ ಇತಿಶ್ರೀ ಹಾಡಬೇಕೆಂದು ಹಲವಾರು ರಾಷ್ಟ್ರ ಗಳು, ಸಿಒಪಿ 26 ಸಮ್ಮೇಳನದಲ್ಲಿ ಒತ್ತಾಯಿಸಿದ್ದವು. ಸಮ್ಮೇಳನದ ಅಂತ್ಯದ ಹೊತ್ತಿಗೆ ಈ ಕುರಿತಂತೆ ನಿರ್ಣಯವನ್ನು
ಕೈಗೊಳ್ಳಲು ಕಲ್ಲಿದ್ದಲು ನಿಷೇಧಕ್ಕೆ ಆಗ್ರಹಿಸಿದ್ದ ರಾಷ್ಟ್ರ ಗಳೇ ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ. ಸಮ್ಮೇಳನದಲ್ಲಿ ಕೈಗೊಳ್ಳಲಾಗುವ ನಿರ್ಧಾರಗಳ ಬಗ್ಗೆ ಕರಡು ಪ್ರತಿ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.