ರಾಜ್ಯಕ್ಕೆ ಮುದ್ರಾದಲ್ಲಿ 4ನೇ, ಪಿಎಂ ಸನ್ನಿಧಿಯಲ್ಲಿ 5ನೇ ಸ್ಥಾನ!
ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್.ಎಲ್.ಬಿ.ಸಿ)ಯ 155ನೇ ಸಭೆ
Team Udayavani, Nov 13, 2021, 9:46 AM IST
ಬೆಂಗಳೂರು: ಮಂಜೂರಾತಿ ಮತ್ತು ವಿತರಣೆಯಲ್ಲಿ “ಮುದ್ರಾ” ಯೋಜನೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿ 4ನೇ ಹಾಗೂ “ಪಿಎಂ-ಸ್ವನಿಧಿ” ಯೋಜನೆಯಲ್ಲಿ 5ನೇ ಸ್ಥಾನ ಪಡೆದಿದೆ ಎಂದು ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಬ್ರಿಜ್ ಮೋಹನ್ ಶರ್ಮಾ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ನಡೆದ “ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ” (ಎಸ್.ಎಲ್ .ಬಿ.ಸಿ)ಯ 155ನೇ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಭೆಯಲ್ಲಿ 2021ರ ಸೆಪ್ಟೆಂಬರ್ ವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಬ್ರಿಜ್ ಮೋಹನ್ ಶರ್ಮಾ, ಕೇಂದ್ರ ಸರ್ಕಾರ ಅತ್ಮ ನಿರ್ಭರ ಅಭಿಯಾನದಡಿ ಇಸಿಜಿಎಲ್‌ಎಸ್ 1.0 ರಿಂದ ಇಸಿಜಿಎಲ್‌ಎಸ್ 4.0, ಪಿಎಂ-ಸ್ವನಿಧಿ ಪ್ರಥಮ ಹಾಗೂ ಎರಡನೇ ಹಂತ, ಪಿಎಂಎಫ್‌ಎಂಇ, ಒಂದು ಜಿಲ್ಲೆ ಒಂದು ಉತ್ಪನ್ನ, ಕೃಷಿ ಮೂಲಸೌಕರ್ಯ ನಿಧಿ ಯೋಜನೆ, ಪಶುಸಂಗೋಪನೆ ಮೂಲಸೌಕರ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಇದನ್ನೂ ಓದಿ:- ಪ್ರಧಾನಿ ಮೋದಿ 4 ಗಂಟೆಯ ಕಾರ್ಯಕ್ರಮಕ್ಕೆ 23 ಕೋಟಿ ರೂ ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!
ಈ ಯೋಜನೆಗಳ ನಿಗದಿತ ಗುರಿ ಸಾಧಿಸುವಂತೆ ಶರ್ಮಾ ಎಲ್ಲಾ ಬ್ಯಾಂಕುಗಳಿಗೆ ಮನವಿ ಮಾಡಿದರು. ಡಿಜಿಟಲ್ ಫೈನಾನ್ಷಿಯಲ್ ಸರ್ವಿಸಸ್ (ಡಿಎಫ್ ಎಸ್) 2021ರ ನ.8ರವರೆಗೆ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಮಂಜೂರಾತಿ ಮತ್ತು ವಿತರಣೆಯಲ್ಲಿ “ಮುದ್ರಾ” ಯೋಜನೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿ 4ನೇ ಹಾಗೂ “ಪಿಎಂ-ಸ್ವನಿಧಿ” ಯೋಜನೆಯಲ್ಲಿ 5ನೇ ಸ್ಥಾನ ಪಡೆದಿದೆ ಎಂದು ಮಾಹಿತಿ ನೀಡಿದರು.
” ಫ್ರೂಟ್ಸ್” ಪೋರ್ಟಲ್ ಫ್ರೂಟ್ಸ್ ಟೀಮ್, ಇ-ಆಡಳಿತ ಕಾರ್ಯಾಗತಗೊಳಿಸುವ ವಿಚಾರದಲ್ಲಿ ಬಹುತೇಕ ಬ್ಯಾಂಕುಗಳು ಅಂತಿಮ ಹಂತದಲ್ಲಿವೆ. ಫ್ರೂಟ್ಸ್ ಪೋರ್ಟಲ್ ಅನುಷ್ಠಾನಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಕಂದಾಯ ಇಲಾಖೆ ನ.1 ರಿಂದ ಸಜ್ಜುಗೊಳಿಸಿದೆ ಎಂದು ಶರ್ಮಾ ಮಾಹಿತಿ ನೀಡಿದರು. 2021-22ನೇ ಸಾಲಿನ ಆದ್ಯತಾ ವಲಯದ ಸಾಲಗಳ ಒಟುx 2,92,392 ಕೋಟಿ ರೂ. ಗುರಿ ಪೈಕಿ 2021 ರ ಸೆಪ್ಟೆಂಬರ್ ತ್ರೈಮಾಸಿಕದವರೆಗೆ 93 ಸಾವಿರ ಕೋಟಿ (ಶೇ.31.96) ಗುರಿ ಸಾಧಿಸಲಾಗಿದೆ.
ಒಟುx ಆದ್ಯತಾ ವಲಯದ ಸಾಲಗಳಲ್ಲಿ ಕೃಷಿ ಶೇ. 40.96, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಶೇ. 30.80 ಗುರಿ ಸಾಧಿಸಲಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ಶೇ 100ರಷ್ಟು ಡಿಜಿಟಲ್ ಸೇವೆಗೆ ಸಾಧ್ಯವಾಗಿಸಿದ ರಾಯಚೂರು ಜಿಲ್ಲೆಯ ಎಲ್ಲಾ ಬ್ಯಾಂಕುಗಳಿಗೆ ಶರ್ಮಾ ಅಭಿನಂದನೆ ಸಲ್ಲಿಸಿದರು.
ಅಕ್ಟೋಬರ್ 13 ರಿಂದ ನಡೆದ ರಾಜ್ಯವ್ಯಾಪಿ ಸಾಲ ಅರಿವು ಕಾರ್ಯಕ್ರಮದಡಿ 27 ಜಿಲ್ಲೆಗಳಲ್ಲಿ ಎಲ್ಲಾ ಲೀಡ್ ಬ್ಯಾಂಕುಗಳ ಮೂಲಕ 5871.98 ಕೋಟಿ ರೂ. ಮೊತ್ತದ ವಿವಿಧ 1.54 ಲಕ್ಷ ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಶರ್ಮಾ ತಿಳಿಸಿದರು. ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕ ಆರ್. ಗುರುಮೂರ್ತಿ, ನಬಾರ್ಡ್ ಚೀಫ್ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮಾ ಸೇರಿದಂತೆ ವಿವಿಧ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.