ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಕ್ತ ಕಸಾಪ ನನ್ನ ಗುರಿ : ರಾಜಶೇಖರ ಮುಲಾಲಿ

Team Udayavani, Nov 13, 2021, 4:09 PM IST

ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಕ್ತ ಕಸಾಪ ನನ್ನ ಗುರಿ : ರಾಜಶೇಖರ ಮುಲಾಲಿ

ವಿಜಯಪುರ: ಶತಮಾನದ ಹಿಂದೆ ಹಿರಿಯರು ಮಹತ್ವಾಕಾಂಕ್ಷೆಯಿಂದ ಕಟ್ಟಿದ ಕನ್ನಡಿಗರ ಪ್ರಾತಿನಿಧಿಕ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಇಂಥಹ ಸಂಸ್ಥೆ ಇದೀಗ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಈ ದುರವಸ್ಥೆಗೆ ತೆರೆ ಎಳೆಯಲು ನಾನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ನನ್ನ ಪರ ರಾಜ್ಯದ ಮತದಾರರ ಸ್ಪಂದನೆ ಸಿಕ್ಮಿದೆ ಎಂದು ರಾಜಶೇಖರ ಮುಲಾಲಿ ಹೇಳಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಾಮಾಜಿಕ ಹೋರಾಟಗಾರ ನಾನು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಅಸ್ಮಿತೆ ಎಂಬ ಮೂಲ ಆಶಯವನ್ನು ಜನಮನದಲ್ಲಿ ಬಿತ್ತುವ ಕೆಲಸ ಮಾಡುತ್ತೇನೆ ಎಂದರು.

ಮೈಸೂರು ರಾಜ್ಯದ ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ, ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ 1915 ರಲ್ಲಿ ಚಾಲನೆ ಪಡೆದುಕೊಂಡ ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲೇ ಶತಮಾನ ಕಂಡ ಬೃಹತ್ ಸಂಖ್ಯೆಯ ಆಜೀವ ಸದಸ್ಯತ್ವ ಇರುವ ಸಂಸ್ಥೆ ಎಂಬ ಹಿರಿಮೆ ಹೊಂದಿದೆ. ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದ ಎಚ್.ವಿ.ನಂಜುಂಡಯ್ಯರಿಂದ ಮೊದಲ್ಗೊಂಡು ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ.ಹಂಪ ನಾಗರಾಜಯ್ಯ, ಪ್ರೊ. ಚಂದ್ರಶೇಖರ ಪಾಟೀಲ್, ಡಾ.ಸಾ.ಶಿ. ಮರುಳಯ್ಯ ನವರು ಹಾಗೂ ರೇವರೆಂಡ್ ಉತ್ತಂಗಿ ಚನ್ನಪ್ಪ ಅವರಂಥ ಮಹನೀಯರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಹುದ್ದೆ ಅಲಂಕರಿಸಿ ಪರಿಷತ್ತಿಗೊಂದು ಘನತೆ, ಗೌರವ, ಗಾಂಭೀರ್ಯ ತಂದು ಕೊಟ್ಟಿದ್ದರು. ಆದರೆ ಕಾಲಾನಂತರದಲ್ಲಿ ಸಾಹಿತ್ಯ ಪರಿಷತ್ತು ರಾಜಕಾರಣದ ಸಂಕೊಲೆಗೆ ಸಿಲುಕಿ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದಲ್ಲಿ ಮುಳುಗಿದೆ ಎಂದು ದೂರಿದರು.

ಇದನ್ನೂ ಓದಿ:ಬಿಟ್ ಕಾಯಿನ್ ಕೇಸ್ ನಲ್ಲಿ ಬೊಮ್ಮಾಯಿ, ಕಟೀಲ್ ಪಾತ್ರದ ಬಗ್ಗೆ ಕಾಂಗ್ರೆಸ್ ದಾಖಲೆ ಸಂಗ್ರಹ

ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ ಸಂಸ್ಥೆ 4700 ಸ್ಥಳೀಯರನ್ನು ಕೆಲಸದಿಂದ ವಜಾ ಮಾಡಿತ್ತು. ಆಗ ಕನ್ನಡ ನೆಲದಲ್ಲಿ ಕನ್ನಡಿಗರನ್ನೇ ಒಕ್ಕಲೆಬ್ಬಿಸುವ ಕೃತ್ಯದ ವಿರುದ್ಧ ನಾನು ಹೋರಾಟ ಮಾಡಿದ್ದು, ಉದ್ಯೋಗ ಕಳೆದುಕೊಂಡ ಎಲ್ಲರೂ ಮರಳಿ ಕೆಲಸಕ್ಕೆ ಸೇರುವಂತೆ ಆಯಿತು. ಆದರೆ ಕನ್ನಡಿಗರ ಆಸ್ಮಿತೆಯ ಕಸಾಪ ಸಂಸ್ಥೆ ಕುರ್ಚಿ ಮೇಲೆ ಕುಳಿತವರಿಗೆ ಇಂಥ ಸಮಸ್ಯೆಗಳು ತಮಗೆ ಸಂಬಂಧಿಸಿದ್ದಲ್ಲ ಎಂಬಂತಿದ್ದಾರೆ ಎಂದು ಹರಿಹಾಯ್ದರು.

ಕನ್ನಡ ನಾಡು ಕೂಡ ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಗಡಿ ಗಲಾಟೆ, ಅಂತರ ರಾಜ್ಯ ನೆಲ-ಜಲ ವಿವಾದಗಳು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಸಮಸ್ಯೆ, ಗಡಿ ಭಾಗದ ಕನ್ನಡ ಶಾಲೆಗಳ ದುಸ್ಥಿತಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ನಾಡಿನ ತುಂಬ ಎದ್ದು ಕಾಣುತ್ತಿವೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ಆಳುವ ಸರ್ಕಾರಗಳನ್ನು ಬಡಿದೆಬ್ಬಿಸುವ ಯಾವೊಂದು ಪ್ರಾಮಾಣಿಕ ಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರದಲ್ಲಿ ಇದ್ದವರಿಂದ ಆಗಿಲ್ಲ. ನಾನು ಗೆಲ್ಲುವುದರಿಂದ ಕನ್ನಡ ನೆಲದಲ್ಲಿ ಕನ್ನಡಿಗರೆ ಆಗುತ್ತಿರುವ ಅನ್ಯಾಯ ತಡೆಯುವ ನಿರಂತರ ಹೋರಾಟ ನಡೆಯಲಿವೆ ಎಂದು ಭರವಸೆ ನೀಡಿದರು.

ಇದಲ್ಲದೇ ಕಸಾಪ ಕಛೇರಿ ಹಾಗೂ ಆಡಳಿತ ನಡೆಸಿದವರು ಪಾರದರ್ಶಕ ಆಡಳಿತಕ್ಕೆ ತೆರೆ ಎಳೆದಿದ್ದಾರೆ. ಭ್ರಷ್ಟಾಚಾರದ ಚಿಗುರು ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಇವೆಲ್ಲದರ ಪರಿಣಾಮದಿಂದ ಯುವ ಜನಾಂಗ ಮತ್ತು ಇಚ್ಛಾಶಕ್ತಿಯುಳ್ಳ ಸಾಹಿತ್ಯಿಕ ಕೃಷಿಯಲ್ಲಿ ತೊಡಗಿರುವ ಯುವ ಪ್ರತಿಭೆಗಳು ಸಾಹಿತ್ಯ ಪರಿಷತ್ತಿನ ಯಾವೊಂದು ವಲಯದಲ್ಲೂ ಗುರುತಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ನವ್ಯ, ಕಾವ್ಯ, ಬಂಡಾಯದ ಪರಂಪರೆ ಹೊಂದಿರುವ ಕನ್ನಡ ನಾಡಿನ ಸಾಹಿತ್ಯ ಲೋಕ ನೂರೆಂಟು ವಿಘ್ನಗಳನ್ನು ಎದುರಿಸುತ್ತಿದೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲಿಕ್ಕಾಗಿ, ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಪಡೆ ಸಾಹಿತ್ಯ ಪರಿಷತ್ತನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿ ಆಗಲೆಂಬ ಹಿತದೃಷ್ಟಿಯಿಂದ ಸಾಮಾಜಿಕ ಹೋರಾಟಗಾರನಾದ ನಾನು ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದರು.

ಕಸಾಪ ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ, ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರ ಉದ್ಯೋಗದ ಮೀಸಲಾತಿ ಜಾರಿಗೆ ಬೃಹತ್ ಹೋರಾಟ ರೂಪಿಸುವ ಯೋಚನೆಗಳೊಂದಿಗೆ ಬಹುಮುಖ್ಯವಾಗಿ ಬ್ರಷ್ಟಾಚಾರ ಮುಕ್ತ ಸಾಹಿತ್ಯ ಪರಿಷತ್ತು ನಮ್ಮ ಗುರಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಾಜಮುಖಿಯಾಗಿ, ಜಾತ್ಯಾತೀತವಾಗಿ, ಬ್ರಷ್ಟಾಚಾರ ಮುಕ್ತವಾಗಿ ಕೊಂಡೊಯ್ಯುವ ಕನಸು ಹೊತ್ತಿರುವ ಎಲ್ಲ ವರ್ಗದ ಮನಸ್ಸುಗಳು ನಮ್ಮೊಂದಿಗೆ ಕೈಜೋಡಿಸಲು ಮನವಿ ಮಾಡುತ್ತೇನೆ ಎಂದರು.

ಟಾಪ್ ನ್ಯೂಸ್

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

Do you know why cricketers chew gum? Here’s the reason

Chewing Gum: ಕ್ರಿಕೆಟಿಗರು ಚೂಯಿಂಗ್ ಗಮ್ ಜಗಿಯುವುದು ಯಾಕೆ ಗೊತ್ತಾ? ಇಲ್ಲಿದೆ ಕಾರಣ

Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್‌ ಹನುಮಂತ ಪ್ರತಿಮೆ ಅನಾವರಣ

Uttara Pradesh: ವಾರಾಣಸಿಯಲ್ಲಿ 51 ಅಡಿ ಎತ್ತರದ ಬೃಹತ್‌ ಹನುಮಂತ ಪ್ರತಿಮೆ ಅನಾವರಣ

4

Renukaswamy Case: ಹೈಕೋರ್ಟ್‌ ನಲ್ಲಿ ದರ್ಶನ್‌ ಜಾಮೀನು ಅರ್ಜಿ ಮುಂದೂಡಿಕೆ

BBK11: 11 ವರ್ಷದ ಬಿಗ್‌ಬಾಸ್‌ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?

BBK11: 11 ವರ್ಷದ ಬಿಗ್‌ಬಾಸ್‌ ಜರ್ನಿಯಲ್ಲಿ ಕಿಚ್ಚ ಗೈರಾಗಿದ್ದು ಎಷ್ಟು ಬಾರಿ, ಯಾಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP-waqf

Waqf Property: ವಕ್ಫ್ ಭೂ ವಿವಾದ: ಬಿಜೆಪಿ ಗಡುವು, ಹೋರಾಟದ ಎಚ್ಚರಿಕೆ

Mann Ki Baat: “ಡಿಜಿಟಲ್‌ ಅರೆಸ್ಟ್‌’ಗೆ ತುತ್ತಾಗದ ವಿಜಯಪುರ ವ್ಯಕ್ತಿಗೆ ಮೋದಿ ಮೆಚ್ಚುಗೆ

Mann Ki Baat: “ಡಿಜಿಟಲ್‌ ಅರೆಸ್ಟ್‌’ಗೆ ತುತ್ತಾಗದ ವಿಜಯಪುರ ವ್ಯಕ್ತಿಗೆ ಮೋದಿ ಮೆಚ್ಚುಗೆ

B. S. Yediyurappa; ಸಿಎಂ ಆಗಲು ಯೋಗೇಶ್ವರ್‌ ಕಾರಣ: ಯತ್ನಾಳ್‌

B. S. Yediyurappa; ಸಿಎಂ ಆಗಲು ಯೋಗೇಶ್ವರ್‌ ಕಾರಣ: ಯತ್ನಾಳ್‌

ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರಲು ಹುಚ್ಚು ಹಿಡಿದಿದೆಯಾ?: ಯತ್ನಾಳ್‌

Basangouda Patil Yatnal: ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರಲು ಹುಚ್ಚು ಹಿಡಿದಿದೆಯಾ?

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Ajekar Case: ಆರೋಪಿ ದಿಲೀಪ್‌ ಹೆಗ್ಡೆಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Chikkamagaluru: ಮೃತ ಆನೆಯ ಕಳೇಬರ ನೋಡಲು ಬಂದ ಆನೆಗಳು; ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ

ಗಜೇಂದ್ರಗಡ: ವೀರಾಪುರದಲ್ಲಿ ಅಭಿವೃದ್ಧಿ ಮರೀಚಿಕೆ

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

Miracle: ವರ್ಷದಲ್ಲಿ 6ರಿಂದ 7 ತಿಂಗಳು ನೀರಿನಲ್ಲಿ ಮುಳುಗಡೆಯಾಗಿರುತ್ತೆ ಈ ದೇವಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.