ಅಮೃತ ನಿರ್ಮಲ ನಗರಕ್ಕೆ 7 ಪೌರಾಡಳಿತ  ಸಂಸ್ಥೆ 


Team Udayavani, Nov 14, 2021, 7:20 AM IST

ಅಮೃತ ನಿರ್ಮಲ ನಗರಕ್ಕೆ 7 ಪೌರಾಡಳಿತ  ಸಂಸ್ಥೆ 

ಕುಂದಾಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದ 75 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಸ್ವಚ್ಛ- ಸುಂದರ ವಾಗಿಸಲು “ಅಮೃತ ನಿರ್ಮಲ ನಗರ ಯೋಜನೆ’ ಅನುಷ್ಠಾನಗೊಳ್ಳಲಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 7 ಸಂಸ್ಥೆಗಳು ಆಯ್ಕೆಯಾಗಿವೆ. ಬೈಂದೂರು, ಬೆಳ್ತಂಗಡಿ ಪ.ಪಂ., ಕುಂದಾಪುರ, ಕಾರ್ಕಳ, ಬಂಟ್ವಾಳ, ಮೂಡುಬಿದಿರೆ ಪುರಸಭೆ, ಪುತ್ತೂರು ನಗರಸಭೆ ತಲಾ 1 ಕೋ.ರೂ. ಅನುದಾನ ಪಡೆಯಲಿವೆ.

ಅನುದಾನದಲ್ಲಿ ನಗರ, ಪಟ್ಟಣವನ್ನು ಸ್ವಚ್ಛ, ಸುಂದರವಾಗಿಸಬೇಕು. ಹಸಿ ಕಸ, ಒಣಕಸ ಸಂಸ್ಕರಣೆಗೆ ಯಂತ್ರ ಖರೀದಿ, ಆವರಣ ಗೋಡೆ, ಬೇಲಿ, ಸಂಪರ್ಕ ರಸ್ತೆ, ಶೌಚಾಲಯ ನಿರ್ಮಾಣ, ಸಕ್ಕಿಂಗ್‌ ಯಂತ್ರ, ಟ್ಯಾಂಕರ್‌ ಖರೀದಿ, ಪೌರಕಾರ್ಮಿಕರಿಗೆ ಸಮವಸ್ತ್ರ, ಕಲುಷಿತ ನೀರು ಸಂಸ್ಕರಣೆ, ಮಾಹಿತಿ ಚಟುವಟಿಕೆ, ನಗರ ಹಸುರೀ ಕರಣ, ಸೌಂದರ್ಯ ವೃದ್ಧಿ ಮಾಡಬಹುದು.

ವರ್ಷದ ಗಡುವು:

ಕಾಮಗಾರಿ ಮುಗಿಸಲು ಒಂದು ವರ್ಷದ ಕಾಲಾವಧಿ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಿಂದ ಅನುಮೋದನೆ ಪಡೆಯಬೇಕು. ಜಿಲ್ಲಾಮಟ್ಟದ ಸಮಿತಿ

ಯಲ್ಲಿ ಸಚಿವರ ಮೇಲುಸ್ತುವಾರಿಯಲ್ಲಿ, ಡಿ.ಸಿ. ಜತೆಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಕಾರ್ಯಪಾಲಕ ಎಂಜಿನಿಯರ್‌, ಸ್ಥಳೀಯಾಡಳಿತ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿ, ಪರಿಸರ ಎಂಜಿನಿಯರ್‌ ಇರುತ್ತಾರೆ.

ಪ್ರಗತಿಯಲ್ಲಿ ಕುಂದಾಪುರ ಮುಂದೆ:

ಅನುದಾನ ಬಿಡುಗಡೆಗೊಂಡ 75 ಪೌರಸಂಸ್ಥೆಗಳ ಪೈಕಿ ತ್ಯಾಜ್ಯ ಸಂಸ್ಕರಣ ಪ್ರಗತಿಯಲ್ಲಿ ಕುಂದಾಪುರ ಪುರಸಭೆ ಮುಂಚೂಣಿಯಲ್ಲಿದೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ಕುಂದಾಪುರ ಪುರಸಭೆ 96 ಶೇ., ಕಾರ್ಕಳ ಪುರಸಭೆ 93.9 ಶೇ., ಬೈಂದೂರು ಹೊಸ ಪಟ್ಟಣ ಪಂಚಾಯತ್‌ ಆದ ಕಾರಣ 0 ಶೇ., ಬಂಟ್ವಾಳ ಪುರಸಭೆ 57.14 ಶೇ., ಬೆಳ್ತಂಗಡಿ ಪ. ಪಂ. 66.67 ಶೇ., ಮೂಡುಬಿದಿರೆ ಪುರಸಭೆ 66.67 ಶೇ., ಪುತ್ತೂರು ನಗರಸಭೆ 57.14 ಶೇ. ಪ್ರಗತಿ ಸಾಧಿಸಿವೆ. ಕೋಲಾರ ನಗರಸಭೆ ಕನಿಷ್ಠ ಅಂದರೆ ಶೇ. 2.48ರಷ್ಟು ಪ್ರಗತಿ ಸಾಧಿಸಿದೆ.

ಕಸದಿಂದ ಗೊಬ್ಬರ:

ಕುಂದಾಪುರದಲ್ಲಿ ಶೇ. 96 ಪ್ರಗತಿ ಆಗುವಲ್ಲಿ ಪುರ ಸಭೆಯ ಪಾಲು ಮಹತ್ವದ್ದಾಗಿದೆ. ಇಲ್ಲಿ ಕಸವನ್ನು ಪ್ರತ್ಯೇಕಿಸಿ ಗೊಬ್ಬರ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಕಸದ ರಾಶಿ ಹೆಚ್ಚಿಸುತ್ತಾ ಕಸ ವಿಲೇಗೆ ಜಾಗದ ಕೊರತೆ ಉಂಟಾಗದಂತಿರಲು ಈ ವ್ಯವಸ್ಥೆ ಅನುಕೂಲವಾಗಿದೆ. ಕಸ ಪ್ರತ್ಯೇಕಿಸಲು ಯಂತ್ರಗಳು, ಕಸ ಪ್ರತ್ಯೇಕಿಸಿ ಮಾರಾಟ, ಕಸಗೊಬ್ಬರ, ಎರೆಗೊಬ್ಬರ, ಜೀವಜಲ ಹೀಗೆ ವೈವಿಧ್ಯಮಯವಾಗಿ ವಿಲೇವಾರಿ ನಡೆಯುತ್ತದೆ.

ರಾಜ್ಯದ 75 ಸಂಸ್ಥೆಗಳು, ಅಧಿಕಾರಿಗಳ ಜತೆ ನ. 11ರಂದು ನಡೆಯಬೇಕಿದ್ದ ಅಮೃತ ನಿರ್ಮಲ ನಗರ ಯೋಜನೆ ಕುರಿತ ಸಭೆ ನೀತಿಸಂಹಿತೆ ಕಾರಣದಿಂದ ಮುಂದೂಡಿಕೆಯಾಗಿದೆ. ಚುನಾ ವಣೆ ಬಳಿಕ ಪ್ರಕ್ರಿಯೆ ಮುಂದುವರಿ ಯಲಿದೆ. ಅನುದಾನ ಬಳಕೆಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ.-ಎಂ. ಕೂರ್ಮಾ ರಾವ್‌ ,ಜಿಲ್ಲಾಧಿಕಾರಿ, ಉಡುಪಿ  

 

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.