ಬಿ.ರಂ.ಬೆಟ್ಟದ ನೆಲಹಾಸು ಕಾಮಗಾರಿ ವಿಳಂಬ: ಭಕ್ತರಿಗೆ ತೊಂದರೆ
ಮಳೆ ನಡುವೆ ದೇವರ ದರ್ಶನಕ್ಕೆ ಭಕ್ತರ ಪರದಾಟ ದೇಗುಲದ ಆವರಣದಲ್ಲಿ ಓಡಾಡಲು ಹರಸಾಹಸ
Team Udayavani, Nov 14, 2021, 12:54 PM IST
ಯಳಂದೂರು: ಹಳೇ ಮೈಸೂರು ಭಾಗದ ಪ್ರಸಿದ್ಧ ಪೌರಾಣಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ನೆಲಹಾಸು ಕಾಮಗಾರಿ ಮಂದಗತಿಯಲ್ಲಿ ಅರ್ಧಂಬರ್ಧವಾಗಿ ಕೆಲಸವು ಸಾಗುತ್ತಿದ್ದು, ಭಕ್ತರು ದರ್ಶನಕ್ಕೆ ಪರದಾ ಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಸ್ಯೋದ್ಯಮ ಇಲಾಖೆಯಿಂದ ಒಂದು ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಗೊಂಡು ಹಲವು ತಿಂಗಳುಗಳೇ ಕಳೆದಿವೆ. ಆದರೆ ಕೋವಿಡ್, ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಕಾಮಗಾರಿ ಭರ ದಿಂದ ಸಾಗಿತ್ತು. ನಂತರ ರಾಷ್ಟ್ರಪತಿಗಳು ಕಾರ್ಯ ಕ್ರಮದ ಮುಗಿದ ತಕ್ಷಣ ಅಭಿವೃದ್ಧಿ ಕಾಮಗಾರಿಯು ಪೂರ್ಣವಾಗಿ ಪ್ರಗತಿ ಕಂಡಿಲ್ಲ.
ಇದನ್ನೂ ಓದಿ:- ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಹುಲಿ ದಾಳಿ: ಸಾರ್ವಜನಿಕರಲ್ಲಿ ಆತಂಕ
ಈಗ ಹಬ್ಬಗಳು ಸಾಲು ರಜೆಗಳ ಸರತಿ ಸಾಲಿನಲ್ಲಿವೆ. ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಗುಲದ ಪ್ರಾಂಗಣದಲ್ಲಿ ಕಲ್ಲು ಮಣ್ಣು, ಎಂ ಸ್ಯಾಂಡ್ ಸುರಿಯಲಾಗಿದೆ. ಈಗ ಮಳೆಯೂ ಸುರಿಯುತ್ತಿದೆ. ಇದನ್ನೇ ತುಳಿದು, ದಾಟಿಕೊಂಡು ಹೋಗುವುದು ಪ್ರಯಾಸದ ಕೆಲಸವಾಗಿದೆ. ವೃದ್ಧರು ಹಾಗೂ ಮಕ್ಕಳು ಓಡಾಡಲು ಪರದಾಡುವ ಪರಿಸ್ಥಿತಿ ಇದೆ. ಸ್ವಲ್ಪ ಆಯ ತಪ್ಪಿದರೂ ಜಾರಿ ಬೀಳುವ ಸಂಭವವಿದೆ.
ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಇದಕ್ಕೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಿ ಈ ಕೆಲಸವನ್ನು ಬೇಗ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಭಕ್ತರಾದ ನಾರಾಯಣಸ್ವಾಮಿ ಸೇರಿದಂತೆ ಹಲವರ ಆಗ್ರಹವಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಅ.7 ರಂದು ರಾಷ್ಟ್ರಪತಿಗಳ ಬಿಳಿಗಿರರಿರಂಗನಬೆಟ್ಟ ಆಗ ಮನ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಟ್ಟದಲ್ಲಿನ ರಸ್ತೆ, ಕುಡಿಯುವ ನೀರು, ಸ್ವತ್ಛತೆ, ಕಟ್ಟಡಗಳಿಗೆ ಸುಣ್ಣ ಬಣ್ಣ ದುರಸ್ತಿ ಭಾಗ್ಯ ಸೇರಿದಂತೆ ಸಾಕಷ್ಟು ಕೆಲಸ ಗಳನ್ನು ಕೈಗೊಂಡಿದ್ದರು. ರಾಷ್ಟ್ರಪತಿ ಹೋದ ಬಳಿಕ ಬೆಟ್ಟದ ಅಭಿವೃದ್ಧಿ ಬಗ್ಗೆ ಯಾರು ಕೂಡ ಗಮನ ಹರಿಸುತ್ತಿಲ್ಲ. ಇದರಿಂದ ಇಲ್ಲಿನ ರಸ್ತೆ, ಪ್ರವಾಸಿ ಮಂದಿರ ದುರಸ್ತಿ ಸೇರಿದಂತೆ ಸಾಕಷ್ಟ ಕಾಮಗಾರಿ ಗಳು ಗುಣಮಟ್ಟದಿಂದ ಮಾಡಿಲ್ಲ ಜತೆಗೆ ನೆಲಸ ಹಾಸು ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ.
“ಬಿಳಿಗಿರಿರಂಗಬೆಟ್ಟ ದೇಗುಲದ ಆವರಣದಲ್ಲಿ ನೆಲಹಾಸು ಕಾಮಗಾರಿಯು ಸತತ ಮಳೆಯಾಗುತ್ತಿರುವ ಕಾರಣ ಕಾಮಗಾರಿ ನಿಲ್ಲಿಸ ಲಾಗಿದ್ದು, ಕಡಿಮೆಯಾದ ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಮುಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು.”
– ಶಿವನಂದ್, ಜೆಇ, ಪುರಾತತ್ವ ಇಲಾಖೆ ಮೈಸೂರು
“ಕೋವಿಡ್ ಹಿನ್ನೆಲೆಯಲ್ಲಿ ದೇಗುಲದ ನೆಲಹಾಸು ಕಾಮಗಾರಿ ವಿಳಂಬವಾಗಿತ್ತು. ಇದರೊಂದಿಗೆ ಮಳೆಯೂ ಆಗಾಗ ಬೀಳುತ್ತಿರುವ ಪರಿಣಾಮ ಕಾಮಗಾರಿಯು ಸ್ಥಗಿತಗೊಂಡಿದೆ. ಸಂಬಂಧಪಟ್ಟ ಇಲಾಖೆಯವರಿಗೆ ಸೂಚಿಸಿ ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸಲಾಗುವುದು.” – ಮೋಹನ್‌ಕುಮಾರ್, ಇಒ ಬಿಳಿಗಿರಿರಂಗನಾಥಸ್ವಾಮಿ ದೇಗುಲ
- – ಫೈರೋಜ್‌ಖಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.