ಶಾಲಾ ಪರಿಸರದಲ್ಲಿ ಸಂಚಲನ ತಂದ ಪೆನ್ಸಿಲ್
Team Udayavani, Nov 14, 2021, 2:01 PM IST
ಸಿಂಧನೂರು: ಶಾಲಾ ಮಕ್ಕಳಿಂದಲೇ ರೂಪುಗೊಳ್ಳುವ ಈ ಪತ್ರಿಕೆಗೆ ಶಿಕ್ಷಕರು ಕರಡು ವಾಚಕರು. ಇನ್ನುಳಿದಂತೆ ಅವರೇ ತಮ್ಮ ಪರಿಸರ, ಅಭಿರುಚಿ ಕಟ್ಟಿಕೊಡುವ ಮೂಲಕ ಇತರರಲ್ಲೂ ಸ್ಪೂರ್ತಿ ತರುವ ಕೆಲಸ ಮಾಡುತ್ತಿದ್ದಾರೆ.
ತಿಡಿಗೋಳ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಿ. ಕೊಟ್ರೇಶ್ ಅವರ ಕಾಳಜಿ ಮೂಲಕ ಆರಂಭವಾದ ಈ ಪೆನ್ಸಿಲ್ ಪತ್ರಿಕೆ ಶಾಲಾ ಪರಿಸರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ತಕ್ಕಂತೆ ಬರಹಗಳನ್ನು ಜೋಡಿಸಿ, ಹೊರತರುವ ಪೆನ್ಸಿಲ್ ಪತ್ರಿಕೆ ಚಿಣ್ಣರಲ್ಲಿ ಕಲರವ ಮೂಡಿಸಿದೆ. ಕಳೆದ 8 ವರ್ಷದಿಂದ ಪೆನ್ಸಿಲ್ ಹೊರ ಬರುತ್ತಿದ್ದು, ಸರ್ಕಾರಿ ಶಾಲೆ ಶಿಕ್ಷಕರ ಪ್ರಯತ್ನ ಮೆಚ್ಚುಗೆ ಗಳಿಸಿದೆ.
ವಿಶೇಷ ಏನು?
ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳೇ ತಮ್ಮೂರಿನ ಜಾತ್ರೆ, ವಿಶೇಷ ವ್ಯಕ್ತಿಗಳ ಸಂದರ್ಶನ, ಕವನ-ಕತೆ ಇದರಲ್ಲಿ ಬರೆಯುತ್ತಾರೆ. ಚಿತ್ರಕಲೆಗೂ ಪ್ರೋತ್ಸಾಹ ಇದೆ. ಎಲ್ಲವನ್ನೂ ಸಂಗ್ರಹಿಸಿದ ಬಳಿಕ ವಿದ್ಯಾರ್ಥಿಗಳನ್ನೊಳಗೊಂಡ ಸಂಪಾದಕೀಯ ಮಂಡಳಿಯೇ ನಾಲ್ಕು ಪುಟದ ಪೆನ್ಸಿಲ್ ಪತ್ರಿಕೆಯಲ್ಲಿ ಪರಿಗಣಿಸುವ ಲೇಖನಗಳನ್ನು ಅಂತಿಮಗೊಳಿಸುತ್ತದೆ. ಬಳಿಕ ಶಿಕ್ಷಕರೊಬ್ಬರು ಕರಡು ವಾಚನ ಮಾಡಿ, ಮಾಸಿಕವಾಗಿ ಈ ಪತ್ರಿಕೆ ಪ್ರಕಟಿಸಲು ಅಂತಿಮ ಷರಾ ಬರೆಯುತ್ತಾರೆ.
ಇದನ್ನೂ ಓದಿ:ಅನ್ನದಾತನೇ ನಮ್ಮದೈವ: ‘ರೈತರೊಂದಿಗೊಂದು ದಿನ’ದಲ್ಲಿ ಸಚಿವ ಬಿ.ಸಿ.ಪಾಟೀಲ್
ದೇಣಿಗೆಯಿಂದಲೇ ಖರ್ಚು
ಶಿಕ್ಷಣ ಇಲಾಖೆ ಗೋಡೆ ಬರಹದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲು ನೀಡಿದ ಅವಕಾಶವನ್ನು ಶಿಕ್ಷಕ ಬಿ. ಕೊಟ್ರೇಶ್ ಪತ್ರಿಕೆ ರೂಪಕ್ಕೆ ತಂದಿದ್ದಾರೆ. ತಮ್ಮೂರಿನ ಮಕ್ಕಳೇ ಬರೆದ ಬರಹ, ಲೇಖನ, ಪರಿಚಯಾತ್ಮಕ ಸಂದರ್ಶನ ಒಳಗೊಂಡ ಪತ್ರಿಕೆಗಳನ್ನು ಆಯಾ ಗ್ರಾಮದಲ್ಲಿ ಹಂಚಿಕೆ ಮಾಡಲಾಗುತ್ತದೆ. ಸಹಜವಾಗಿಯೇ ಸರ್ಕಾರಿ ಶಾಲೆ ಮೇಲೆ ಗ್ರಾಮಸ್ಥರಲ್ಲಿ ಹಿರಿಮೆ ಮೂಡುತ್ತಿದೆ. ಮಕ್ಕಳ ಪ್ರತಿಭೆ ಬಗ್ಗೆಯೂ ಹೆಮ್ಮೆ ಬರುವುದರಿಂದ ಅವರು ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಜತೆಗೆ ಇದಕ್ಕೆ ತಗಲುವ ಖರ್ಚು-ವೆಚ್ಚ ದಾನಿಗಳಿಂದ ಸಂಗ್ರಹಿಸಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ.
ಪ್ರಾಥಮಿಕ ಶಾಲೆಯಲ್ಲಿದ್ದಾಗ ಪತ್ರಿಕೆ ಆರಂಭಿಸಿದ್ದು, 8ನೇ ವರ್ಷಕ್ಕೆ ಕಾಲಿಟ್ಟಿದೆ. ನಿರಂತರ ಕಲಿಕೆ ಪ್ರೋತ್ಸಾಹಿಸಲು, ಅವರಲ್ಲಿನ ಪ್ರತಿಭೆ ಹೊರತರಲು ಇದೊಂದು ವೇದಿಕೆಯಾಗಿದೆ. ನಮಗೆ ಇದೊಂದು ಖುಷಿ ಕೆಲಸ. -ಬಿ. ಕೊಟ್ರೇಶ್, ಶಿಕ್ಷಕ, ತಿಡಿಗೋಳ ಸರ್ಕಾರಿ ಪ್ರೌಢಶಾಲೆ, ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.