ದುರ್ಗಾಪರಮೇಶ್ವರಿ-ಭೂತೇಶ್ವರ ಸ್ವಾಮಿ ಪ್ರತಿಷ್ಠಾಪನೆ
Team Udayavani, Nov 14, 2021, 3:20 PM IST
ಸೊರಬ: ಶ್ರೀ ಭೂತೇಶ್ವರ ಸೇವಾ ಟ್ರಸ್ಟ್, ಓಂ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದಕಾನುಕೇರಿಯಲ್ಲಿ ನ. 14ರಿಂದ 15ರವರೆಗೆ ಶ್ರೀ ಜಗನ್ಮಾತೆದುರ್ಗಾಪರಮೇಶ್ವರಿ ಮತ್ತು ಶ್ರೀ ಭೂತೇಶ್ವರ ಸ್ವಾಮಿಯಪ್ರತಿಷ್ಠಾಪನಾ ಕಾರ್ಯಕ್ರಮ ವಿವಿಧ ಧಾರ್ಮಿಕ ವಿ ಧಿ-ವಿಧಾನಗಳೊಂದಿಗೆ ಜರುಗಲಿದೆ.
ಜಡೆ ಸಂಸ್ಥಾನ ಮಠದ ಶ್ರೀ ಡಾ| ಮಹಾಂತಸ್ವಾಮೀಜಿ ಹಾಗೂ ಜಡೆ ಹಿರೇಮಠದ ಶ್ರೀ ಘನಬಸವಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾಕಾರ್ಯಕ್ರಮ ನಡೆಯಲಿದೆ. ನ. 14ರಂದು ಶ್ರೀಮಲ್ಲಿಕಾರ್ಜುನ ಸ್ವಾಮಿ ಅರಮನೆ ಮಠದ ಮತ್ತು ಸಂಗಡಿಗರ ಆಚಾರ್ಯತ್ವದಲ್ಲಿ ಆಲಯ ಶುದ್ಧೀಕರಣ, ನ. 15ರಂದುಬೆಳಗ್ಗೆ 6.55ರಿಂದ 7.20ರ ಶುಭ ಮುಹೂರ್ತದಲ್ಲಿ ಆಲಯಪ್ರವೇಶ, ನಂತರ ಗಂಗಾ ಕಳಶ, ಗಣಪತಿ ಪುಣ್ಯನಾಂದಿ ,ಪಂಚಕಳಶ ನಂತರ ಗಣಹೋಮ ಮತ್ತು ರಾಕ್ಷೊàಜ್ಞ ಜರುಗಲಿದೆ.
ನ. 16ರಂದು ಗಂಗಾ ಪೂಜೆ, ಗಣಪತಿ ಪುಣ್ಯನಾಂ ದಿ,ಸೇರಿದಂತೆ ವಿವಿಧ ಧಾರ್ಮಿಕ ವಿವಿಧ ವಿಧಾನಗಳೊಂದಿಗೆಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ಹೋಮ,ಶ್ರೀ ದೇವಿಗೆ ಪಂಚಾಮೃತ, ಎಳನೀರ ಅಭಿಷೇಕ,ಕ್ಷೀರಾಭಿಷೇಕ, ಶಕ್ತಿ ಅಭಿಷೇಕ, ಹರಿದ್ರಾ ಚೂರಣ ಕುಂಕುಮಅಭಿಷೇಕ ಅಲಂಕಾರ, ಅಷ್ಟೋತ್ತರ ಮಹಾಪೂಜೆ,ಕುಂಕುಮ ಅರ್ಚನೆ ಮತ್ತು ಪೂಜಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12ಕ್ಕೆ ಶ್ರೀ ಘನಬಸವಅಮರೇಶ್ವರ ಸ್ವಾಮೀಜಿ ಅವರಿಂದ ಪ್ರಾಣ ಪ್ರತಿಷ್ಠಾಮಂತ್ರೋಪದೇಶ, ನೇತ್ರಮಿಲನ, ಬಲಿದಾನಮತ್ತು ಮಹಾಮಂಗಳಾರತಿ ನಡೆಯಲಿದೆ. ನಂತರತೀರ್ಥಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಇರುತ್ತದೆ.ಸಂಜೆ 6ಕ್ಕೆ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮನಡೆಯಲಿದ್ದು, ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುವಂತೆ ಶ್ರೀ ಭೂತೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಕೆರಿಯಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.