ಉತ್ತರ ಪ್ರದೇಶದಲ್ಲಿ ಜಿನ್ನಾರಿಂದ ದೇಶ ವಿಭಜನೆಯ ಸದ್ದು


Team Udayavani, Nov 15, 2021, 6:30 AM IST

ಉತ್ತರ ಪ್ರದೇಶದಲ್ಲಿ ಜಿನ್ನಾರಿಂದ ದೇಶ ವಿಭಜನೆಯ ಸದ್ದು

ಇನ್ನೇನು ಮುಂದಿನ ವರ್ಷಾರಂಭದಲ್ಲೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದ ಜತೆಗೆ ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ರಾಜ್ಯಗಳಿಗೂ ಚುನಾವಣೆ ನಡೆಯಲಿದೆ. ಇತ್ತೀಚೆಗಷ್ಟೇ ಈ ಐದೂ ರಾಜ್ಯಗಳ ಕುರಿತಂತೆ ಸಿ-ವೋಟರ್‌ ಸಮೀಕ್ಷೆ ನಡೆಸಿದ್ದು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ಸರಕಾರವೇ ಮತ್ತೂಮ್ಮೆ ಆರಿಸಿ ಬರಲಿದೆ ಎಂಬ ಭವಿಷ್ಯ ನುಡಿದಿದೆ. ಆದರೆ ಕಳೆದ ಬಾರಿಯಷ್ಟು ಸೀಟುಗಳನ್ನು ಪಡೆಯುವಲ್ಲಿ ಮಾತ್ರ ಬಿಜೆಪಿ ವಿಫ‌ಲವಾಗಲಿದೆ ಎಂದೂ ಈ ಸಮೀಕ್ಷೆ ಹೇಳಿದೆ. ಹಾಗೆಯೇ ಉತ್ತರಾಖಂಡ, ಗೋವಾದಲ್ಲಿಯೂ ಬಿಜೆಪಿ ಬರಲಿದೆ. ಪಂಜಾಬ್‌ ಮತ್ತು ಮಣಿಪುರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬುದು ಈ ಸಮೀಕ್ಷೆಯ ಸಾರಾಂಶ.

ಈ ಐದು ರಾಜ್ಯಗಳಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆದಿರುವುದು ದೇಶದಲ್ಲೇ ಅತ್ಯಂತ ದೊಡ್ಡ ರಾಜ್ಯವೆನಿಸಿರುವ ಮತ್ತು ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ. ಸಾಮಾನ್ಯವಾಗಿ ಇಲ್ಲಿ ಗೆದ್ದವರು, ಕೇಂದ್ರದಲ್ಲಿಯೂ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿಯೇ ಉತ್ತರ ಪ್ರದೇಶದ ಚುನಾವಣೆ ಬಿಜೆಪಿ, ಕಾಂಗ್ರೆಸ್‌, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ ಅತ್ಯಂತ ಪ್ರಮುಖವಾಗಿದೆ.

ಈಗಾಗಲೇ ಆಗುತ್ತಿರುವ ತಯಾರಿ ನೋಡಿದರೆ ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಧ್ರುವೀಕರಣವಾಗುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸುತ್ತಿವೆ. ಎಲ್ಲ ಪಕ್ಷಗಳು ಧರ್ಮಾಧಾರಿತವಾಗಿ ಮತ್ತು ಜಾತಿಯಾಧಾರಿತವಾಗಿ ಮತಗಳನ್ನು ಸೆಳೆದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ವಿಶೇಷವೆಂದರೆ, ಈ ಚುನಾವಣೆಯ ಪ್ರಮುಖ ಅಸ್ತ್ರವಾಗಬೇಕಾಗಿದ್ದ ರೈತರ ಪ್ರತಿಭಟನೆ ಮೂಲೆ ಸರಿದಿದೆ. ಇದಕ್ಕೆ ಬದಲಾಗಿ ಬೇರೆ ಬೇರೆ ವಿಚಾರಗಳ ಮೇಲೆ ಈ ಚುನಾವಣೆ ಕೇಂದ್ರೀಕರಣಗೊಂಡಿರುವುದು ಗೋಚರಿಸುತ್ತಿದೆ.

ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕಳೆದ ಬಾರಿಯೂ, ನಿಶದ್‌ ಸೇರಿದಂತೆ ಕೆಲವು ಸಣ್ಣಪುಟ್ಟ ಪಕ್ಷಗಳ ಜತೆಗೆ ಕೈಜೋಡಿಸಿಕೊಂಡು ಚುನಾವಣೆ ಎದುರಿಸಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಆಧಾರದಲ್ಲೇ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಉಳಿದೆಲ್ಲ ಪಕ್ಷಗಳಿಗೆ ದೊಡ್ಡ ಶಾಕ್‌ ನೀಡಿತ್ತು. ಈ ಚುನಾವಣೆಯಲ್ಲಿ ಗೆದ್ದ ಬಳಿಕ ಬಿಜೆಪಿ ಯೋಗಿ ಆದಿತ್ಯನಾಥ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಈ ಬಾರಿ ಇವರ ನೇತೃತ್ವದಲ್ಲೇ, ಅಂದರೆ ಯೋಗಿ ಅವರ ಹೆಸರಲ್ಲೇ ಚುನಾವಣೆ ಎದುರಿಸುತ್ತಿದೆ. ಈ ಮೂಲಕ ನೇರವಾಗಿ ಹಿಂದೂ ಮತಗಳ ಧ್ರುವೀಕರಣದತ್ತ ಹೋಗಿದೆ.

ರಾಜಕೀಯ ತಜ್ಞರು ಹೇಳುವಂತೆ ಈ ಬಾರಿ ಬಿಜೆಪಿಗೆ ಯೋಗಿ ಹೆಸರೇ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ. ಹಿಂದೂ ಮತಗಳು ಧ್ರುವೀಕರಣವಾಗಿ ಬೇರೆಡೆ ಹೋಗದಂತೆ ತಡೆಯಬಲ್ಲ ಶಕ್ತಿ ಯೋಗಿ ಆದಿತ್ಯನಾಥ್‌ ಅವರಿಗೆ ಇದೆ. ಹೀಗಾಗಿಯೇ ಅಯೋಧ್ಯೆಯ ಅಭಿವೃದ್ಧಿ ಮತ್ತು ಕೆಲವು ನಗರಗಳ ಹೆಸರು ಬದಲಾವಣೆಯಂಥ ಕ್ರಮಗಳಿಗೆ ಯೋಗಿ ಆದಿತ್ಯನಾಥ್‌ ಕೈಹಾಕಿದ್ದಾರೆ ಎಂಬ ಮಾತುಗಳಿವೆ.

ಇವೆಲ್ಲದಕ್ಕಿಂತ ಮುಖ್ಯವಾಗಿ ಈ ಬಾರಿ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳನ್ನು ವಿಪಕ್ಷಗಳೇ ನೀಡಿವೆ ಎಂಬುದು ರಾಜಕೀಯ ವಿಶ್ಲೇಷಕರು ಹೇಳುವ ಮಾತು. ಏಕೆಂದರೆ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ  ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. 2017ರಲ್ಲಿ ಎಸ್‌ಪಿ, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಒಟ್ಟಾಗಿ ಸ್ಪರ್ಧೆ ಮಾಡಿದ್ದರೂ, ಬಿಜೆಪಿಯ ಅಬ್ಬರವನ್ನು ಕಡಿಮೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ 2019ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು, ಕಾಂಗ್ರೆಸ್‌ ಅನ್ನು ಹೊರಗಿಟ್ಟು ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿದ್ದವು. ಆದರೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಎಲ್ಲ ಪಕ್ಷಗಳೂ ಕೊಚ್ಚಿಕೊಂಡು ಹೋದವು.

ಈ ಎರಡೂ ಚುನಾವಣೆಗಳಲ್ಲಿನ ಸೋಲಿನಿಂದಾಗಿ ಈ ಬಾರಿ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತಿವೆ. ವಿಶೇಷವಾಗಿ ಈ ಮೂರು ಪಕ್ಷಗಳೂ ಹಿಂದೂ ಮತಗಳ ಜತೆಗೆ ಮುಸ್ಲಿಂ ಮತಗಳ ಮೇಲೆ ಕಣ್ಣು ಹಾಕಿವೆ. ಆದರೆ ಈ ಮೂರು ಪಕ್ಷಗಳ ನಡುವೆ ಮುಸ್ಲಿಂ ಮತಗಳು ವಿಭಜನೆಯಾದರೆ ಬಿಜೆಪಿಗೇ ಹೆಚ್ಚು ಲಾಭವಾಗಲಿದೆ ಎಂಬುದು ರಾಜಕೀಯ ಪಂಡಿತರು ಹೇಳುವ ಮಾತು.

ಉತ್ತರ ಪ್ರದೇಶದ 140 ಕ್ಷೇತ್ರಗಳಲ್ಲಿ ಶೇ.20ರಷ್ಟು ಮುಸ್ಲಿಂ ಮತಗಳಿವೆ. ಇವು ಆ ಕ್ಷೇತ್ರದ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಧಾನವಾದ ಮತಗಳು. 2012ರಲ್ಲಿ ಬಿಎಸ್‌ಪಿ ವಿರುದ್ಧ ಎಸ್‌ಪಿ ಗೆಲ್ಲಲು ಈ ಕ್ಷೇತ್ರಗಳೇ ಕಾರಣವಾಗಿದ್ದವು. ಏಕೆಂದರೆ ಈ ಕ್ಷೇತ್ರಗಳ ಅರ್ಧದಷ್ಟು ಕ್ಷೇತ್ರಗಳಲ್ಲಿ ಎಸ್‌ಪಿ ಜಯಗಳಿಸಿತ್ತು. ಆದರೆ, 2017ರಲ್ಲಿ ಈ 140 ಕ್ಷೇತ್ರಗಳ ಪೈಕಿ 111 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ವಿಶೇಷವೆಂದರೆ ಮುಸ್ಲಿಂ ಹೊರತುಪಡಿಸಿ ಉಳಿದೆಲ್ಲ ಸಮುದಾಯಗಳ ಮತಗಳನ್ನು ಧ್ರುವೀಕರಣ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಈ ಕ್ಷೇತ್ರಗಳ ಶೇ.20ರಷ್ಟು ಮತಗಳು ಎಸ್‌ಪಿ ಕೈಹಿಡಿದರೆ ಬಿಜೆಪಿಗೆ ಬಲವಾದ ಫೈಟ್‌ ಕೊಡಬಲ್ಲದು ಎಂದು ಹೇಳಲಾಗುತ್ತಿದೆ.

ಇದರ ಜತೆಗೆ ಮುಸ್ಲಿಂ ಮತಗಳ ಓಲೈಕೆಗಾಗಿಯೇ ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ ಮತ್ತು ರಾಜ್‌ಭರ್‌ ಅವರ ಸುಹಾಲ್‌ದೇವ್‌ ಭಾರತೀಯ ಸಮಾಜ್‌ ಪಾರ್ಟಿ ಹೊಂದಾಣಿಕೆ ಮಾಡಿಕೊಂಡಿವೆ. ಈ ಪಕ್ಷಗಳ ನಾಯಕರಾದ ಅಖೀಲೇಶ್‌ ಯಾದವ್‌ ಮತ್ತು ರಾಜ್‌ಭರ್‌ ನೇರವಾಗಿಯೇ ಮಹಮ್ಮದ್‌ ಅಲಿ ಜಿನ್ನಾ ಅವರನ್ನು ಹೊಗಳುವ ಮೂಲಕ ಮುಸ್ಲಿಂ ಮತಗಳ ಓಲೈಕೆಗೆ ಮುಂದಾಗಿದ್ದಾರೆ. ಅಖೀಲೇಶ್‌ ಯಾದವ್‌ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಿನ್ನಾ ಅವರ ಪಾಲೂ ಇದೆ ಹೇಳಿದ್ದರೆ, ರಾಜ್‌ಭರ್‌ ಅವರು ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿಯನ್ನಾಗಿ ಮಾಡಿದ್ದರೆ, ದೇಶ ವಿಭಜನೆಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗಳು ಉತ್ತರ ಪ್ರದೇಶದಲ್ಲಿ ಈಗ ಭಾರೀ ಸದ್ದಿಗೆ ಕಾರಣವಾಗಿವೆ. ಬಿಜೆಪಿಯಂತೂ ಮುಸ್ಲಿಂ ಮತಗಳಿಗಾಗಿ ಅಖೀಲೇಶ್‌ ಯಾದವ್‌ ಮತ್ತು ರಾಜ್‌ಭರ್‌ ಜಿನ್ನಾ ಅವರ ಹೊಗಳಿಕೆಗೆ ಮುಂದಾಗಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದೆ. ಆದರೆ ಅಖೀಲೇಶ್‌ ಮತ್ತು ರಾಜ್‌ಭರ್‌ ಅವರು, ತಾವು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಾದಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇವರಿಬ್ಬರ ಈ ಹೇಳಿಕೆಗಳಿಗೆ ಹೈದರಾಬಾದ್‌ನ ಎಐಎಂಐಎಂ ನಾಯಕ ಅಸ್ಸಾವುದ್ದೀನ್‌ ಓವೈಸಿ ತಿರುಗೇಟು ನೀಡಿದ್ದು, ದೇಶ ವಿಭಜನೆಗೆ ಕಾಂಗ್ರೆಸ್‌ ನೇರ ಕಾರಣ ಎಂದು ಆರೋಪಿಸಿದ್ದಾರೆ. ಹಾಗೆಯೇ ವಿಭಜನೆಗೆ ಮುಸ್ಲಿಮರು ಕಾರಣವಲ್ಲ, ಜಿನ್ನಾ ಅವರೇ ಕಾರಣ ಎಂದೂ ಹೇಳಿದ್ದಾರೆ.

ಅತ್ತ ಎಸ್‌ಪಿ ಮುಸ್ಲಿಂ ಓಟುಗಳಿಗಾಗಿ ಪ್ರಯತ್ನಿಸುತ್ತಿದ್ದರೆ, ಇತ್ತ ಕಾಂಗ್ರೆಸ್‌ ಮತ್ತು ಆಪ್‌ ಪಕ್ಷಗಳು ಬಿಜೆಪಿಯಿಂದ ಹಿಂದೂ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಸದ್ಯ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಅವರ ನೇತೃತ್ವದಲ್ಲೇ ಹೋಗುವುದು ಎಂಬ ನಿರ್ಧಾರವಾದಂತೆ ಕಾಣಿಸುತ್ತಿದೆ. ಈಗಾಗಲೇ ಪ್ರಿಯಾಂಕಾ ವಾದ್ರಾ ಅವರೂ ಪ್ರಚಾರದ ತಯಾರಿ ಶುರು ಮಾಡಿಕೊಂಡಿದ್ದಾರೆ. ಅಲ್ಲದೆ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ನಾವು ಹಿಂದೂಗಳ ವಿರೋಧಿಗಳಲ್ಲ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಲೇ ಇದ್ದಾರೆ.

ಇದಕ್ಕಿಂತ ಮುಖ್ಯವಾಗಿ 2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮಹಿಳಾ ಮತಗಳೇ ಪ್ರಮುಖ ಕಾರಣ ಎಂಬುದು ಚುನಾವಣೋತ್ತರ ವಿಶ್ಲೇಷಣೆಗಳಿಂದ ಗೊತ್ತಾಗಿದೆ. ಹೀಗಾಗಿಯೇ ಪ್ರಿಯಾಂಕಾ ಅವರು ಮಹಿಳಾ ಮತಗಳನ್ನು ಸೆಳೆಯುವ ಸಲುವಾಗಿ ಶೇ.40ರಷ್ಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ಮಹಿಳಾ ಮತಗಳನ್ನು ಸೆಳೆದರೆ, ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬುದು ಪ್ರಿಯಾಂಕಾ ಅವರ ಲೆಕ್ಕಾಚಾರ.

ಇವರೆಲ್ಲರ ನಡುವೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಸದ್ದಿಲ್ಲದೇ ಚುನಾವಣೆ ಸಿದ್ಧತೆಯಲ್ಲಿ ತೊಡಗಿ

ದ್ದಾರೆ. ಈ ಬಾರಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಇದರ ನಡುವೆಯೇ ಬಿಎಸ್‌ಪಿಯಲ್ಲಿದ್ದ ಪ್ರಮುಖ ನಾಯಕರು ಪಕ್ಷ ತೊರೆದು

ಎಸ್‌ಪಿ ಸೇರಿದಂತೆ ಬೇರೆ ಬೇರೆ ಪಕ್ಷ ಸೇರಿರುವುದು ಮಾಯಾವತಿ ಅವರಿಗೆ ಹಿನ್ನಡೆಯೇ. ಆದರೂ ತಕ್ಕಮಟ್ಟಿಗೆ ಪ್ರಯತ್ನದಲ್ಲಂತೂ ಇದ್ದಾರೆ.

ಒಟ್ಟಾರೆಯಾಗಿ ಉತ್ತರ ಪ್ರದೇಶದಲ್ಲಿಯೇ ರೈತರ ಹೋರಾಟ ಜೋರಾಗಿ ನಡೆಯುತ್ತಿದ್ದರೂ ಈ ಬಗ್ಗೆ ಹೆಚ್ಚಿನ ಚರ್ಚೆಗಳಾಗುತ್ತಿಲ್ಲ. ಸದ್ದಾಗದಿದ್ದರೂ ಇದು ಬಿಜೆಪಿಗೆ ಎಲ್ಲೋ ಒಂದು ಕಡೆ ಸಮಸ್ಯೆ ನೀಡಬಲ್ಲುದು ಎಂದು ವಿಶ್ಲೇಷಕರು ಹೇಳುತ್ತಾರೆ. ಹೀಗಾಗಿಯೇ ಬಿಜೆಪಿ ಪರ್ಯಾಯ ಯೋಜನೆಗಳೊಂದಿಗೆ ಚುನಾವಣೆ ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. 

– ಸೋಮಶೇಖರ ಸಿ.ಜೆ

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.