ಪೈಲಟ್ ರಾವಣ: ನಡೆಯಲಿದೆ ರಿಸರ್ಚ್
ಸ್ಥಗಿತಗೊಂಡಿದ್ದ ಕೆಲಸ ಮುಂದುವರಿಸಲು ತೀರ್ಮಾನ; ಭಾರತಕ್ಕೂ ಆಹ್ವಾನವಿತ್ತ ಲಂಕಾ ಸರ್ಕಾರ
Team Udayavani, Nov 16, 2021, 5:50 AM IST
ಕೊಲಂಬೊ: ರಾವಣನೇ ಜಗತ್ತಿನ ಮೊದಲ ಪೈಲಟ್ ಎಂದು ದ್ವೀಪ ರಾಷ್ಟ್ರ ಶ್ರೀಲಂಕಾದ ಸರ್ಕಾರ ಕಳೆದ ವರ್ಷವೇ ಹೇಳಿಕೊಂಡಿತ್ತು. ಅದನ್ನು ಪುಷ್ಟೀಕರಿಸಲು ಸಂಶೋಧನೆ ನಡೆಸಲು ತಂಡವನ್ನೂ ರಚಿಸಿತ್ತು. ಸದ್ಯದ ಬೆಳವಣಿಗೆ ಏನೆಂದರೆ, ಶೀಘ್ರದಲ್ಲಿಯೇ ಅದು ತನ್ನ ಕೆಲಸ ಮುಂದುವರಿಸಲಿದೆ.
ರಾವಣನೇ ಜಗತ್ತಿನ ಮೊದಲ ಪೈಲಟ್. ಆತನ ಕಾಲದಲ್ಲಿ ಲಂಕೆಯಲ್ಲಿ ವಿಮಾನ ನಿಲ್ದಾಣಗಳಿದ್ದವು ಎಂದು ಲಂಕಾ ನಾಗರಿಕರು ನಂಬಿದ್ದಾರೆ. ಈ ಚರಿತ್ರೆ ಖಚಿತಪಡಿಸಿಕೊಳ್ಳಲು, ಇತಿಹಾಸ ಕಾಲದಲ್ಲಿ ಹೊಂದಿದ್ದ ತಾಂತ್ರಿಕ ಶಕ್ತಿಯನ್ನು ಅರಿಯಲು ಪ್ರಯತ್ನ ಮುಂದುವರಿಸಲಿದ್ದಾರೆ. ಈ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೂ ಆಹ್ವಾನ ನೀಡಲಾಗಿದೆ.
ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ಧನತುಂಗೆ ಲಂಕಾದಾದ್ಯಂತ ಸಾಕ್ಷ್ಯಗಳಿಗಾಗಿ ಹುಡುಕಾಡಿದ್ದಾರೆ! ಅವರಿಗೆ ರಾವಣ ಹಾಗೂ ವಿಮಾನ ಕಾಲ್ಪನಿಕ ಸಂಗತಿಗಳಲ್ಲ ಎಂದು ಖಚಿತವೂ ಆಗಿದೆಯಂತೆ. ಅವರು ಹೇಳುವ ಪ್ರಕಾರ, ಆಗಿನ ಕಾಲದ ವಿಮಾನಗಳು, ನಿಲ್ದಾಣಗಳು ಈಗಿನ ಕಾಲದಂತೆ ಇರದಿರಬಹುದು. ಆದರೆ ಶ್ರೀಲಂಕಾ ಮತ್ತು ಭಾರತೀಯರ ಬಳಿ ಆ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಂತೂ ಇತ್ತು ಎನ್ನುತ್ತಾರೆ.
ಇದನ್ನೂ ಓದಿ:ಕಿರಿಯರ ವಿಶ್ವಕಪ್ ಹಾಕಿ: ಭಾರತಕ್ಕೆ ಲಾಲ್ರೆಮ್ಸಿಯಾಮಿ ನಾಯಕಿ
ಪುಷ್ಪಕ ವಿಮಾನದ ಮಾಲಿಕ ಬ್ರಹ್ಮ!
ಶ್ರೀಲಂಕನ್ನರು ಮೊದಲು ವಿಮಾನ ಓಡಿಸಿದ್ದು ರಾವಣ ಎಂದಿದ್ದರೂ ಭಾರತೀಯ ಪುರಾಣಗಳು ಅದನ್ನು ಸಮರ್ಥಿಸುವುದಿಲ್ಲ. ಪುಷ್ಪಕ ವಿಮಾನ ಮೊದಲು ಇದ್ದಿದ್ದು ಬ್ರಹ್ಮನ ಬಳಿ. ಅನಂತರ ಅದು ವಂಶಪರಂಪರೆಯಾಗಿ ಕುಬೇರನಿಗೆ ಹೋಯಿತು. ಈತ ಇದ್ದಿದ್ದು ಮೊದಲು ಲಂಕೆಯಲ್ಲೇ. ತನ್ನ ಮಲತಾಯಿಯ ಮಗನಾದ ಕುಬೇರನಿಂದ ರಾವಣ ಆ ವಿಮಾನವನ್ನು ಬಲಾತ್ಕಾರವಾಗಿ ಕಿತ್ತುಕೊಂಡ. ರಾವಣ ಮೂಲತಃ ಉತ್ತರ ಭಾರತೀಯ. ರಾವಣನ ನಿಧನದ ನಂತರ ವಿಮಾನ ವಿಭೀಷಣನ ಪಾಲಾಯಿತು ಎನ್ನುತ್ತದೆ ವಾಲ್ಮೀಕಿ ರಾಮಾಯಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.