ಜೈಪುರ ಟಿ20ಗೆ ಎದುರಾಗಲಿದೆ ದಟ್ಟ ಮಂಜು
Team Udayavani, Nov 16, 2021, 7:00 AM IST
ಜೈಪುರ: ಪಿಂಕ್ ಸಿಟಿಯ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ 2013ರ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ವಹಿಸುವ ಸಡಗರದಲ್ಲಿದೆ.
ಬುಧವಾರ ಇಲ್ಲಿ ಭಾರತ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಟಿ20 ಮುಖಾಮುಖಿ ಸಾಗಲಿದೆ. ಇದು ಜೈಪುರದಲ್ಲಿ ನಡೆಯಲಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವೆಂಬುದು ಮತ್ತೊಂದು ಸಡಗರಕ್ಕೆ ಕಾರಣ.
ಆದರೆ ಕಳೆದೆರಡು ದಿನಗಳಿಂದ ಜೈಪುರ ದಟ್ಟ ಮಂಜಿನಿಂದ ಆವೃತ ವಾಗಿದೆ. ಪಂದ್ಯ 7 ಗಂಟೆಗೆ ಆರಂಭ ವಾಗುವುದಿದ್ದರೂ ಮೊದಲ ಇನ್ನಿಂಗ್ಸ್ ವೇಳೆಯೇ ಮಂಜಿನ ಪ್ರಭಾವ ತೀವ್ರಗೊಳ್ಳಲಿದೆ. ಹೀಗಾಗಿ “ಆಂಟಿ ಡ್ಯೂ ಸ್ಪ್ರೇ’ ಪ್ರಯೋಗಿಸಬೇಕಾಗುತ್ತದೆ ಎಂದು ಕ್ರೀಡಾಂಗಣದ ಅಧಿಕಾರಿ ಯೊಬ್ಬರು ಹೇಳಿದ್ದಾರೆ.
ಬ್ಯಾಟಿಂಗ್ ಟ್ರ್ಯಾಕ್?
ಆದರೂ ಇಲ್ಲಿನ ಟ್ರ್ಯಾಕ್ ಬ್ಯಾಟಿಂಗಿಗೆ ಹೆಚ್ಚಿನ ಸಹಕಾರ ನೀಡುವ ಸಾಧ್ಯತೆ ಇದೆ. 2013ರಲ್ಲಿ ಇಲ್ಲಿ ಆಸ್ಟ್ರೇಲಿಯ ವಿರುದ್ಧ ಕೊನೆಯ ಏಕದಿನ ಪಂದ್ಯ ನಡೆದಾಗ ರನ್ ಪ್ರವಾಹವೇ ಹರಿದು ಬಂದಿತ್ತು. ಆಸೀಸ್‌ನ 359 ರನ್ನುಗಳ ಕಠಿನ ಗುರಿಯನ್ನು ಭಾರತ 43.3 ಓವರ್‌ಗಳಲ್ಲೇ ಬೆನ್ನಟ್ಟಿತ್ತು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು.
ಇದನ್ನೂ ಓದಿ:ನಮ್ಮ ಕುಟುಂಬದ ತಂಟೆಗೆ ಬಂದರೆ ಹುಷಾರ್: ಬಿಜೆಪಿಗೆ ಎಚ್‌ಡಿಕೆ ಎಚ್ಚರಿಕೆ
25 ಸಾವಿರ ಸಾಮರ್ಥ್ಯ
ಸ್ಟೇಡಿಯಂ 25 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಆನ್‌ಲೈನ್‌ನಲ್ಲಿ 8 ಸಾವಿರ ಟಿಕೆಟ್ ಮಾರಾಟ ವಾಗಿದೆ ಎಂದು ಆರ್‌ಸಿಎ ಕಾರ್ಯದರ್ಶಿ ಮಹೇಂದ್ರ ವರ್ಮ ಹೇಳಿದ್ದಾರೆ.
ರಾಜಸ್ಥಾನ್ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಒಳಜಗಳದಿಂದಾಗಿ ಕಳೆದೊಂದು ದಶಕದಲ್ಲಿ ಜೈಪುರಕ್ಕೆ ಅಂತಾರಾಷ್ಟ್ರೀಯ ಪಂದ್ಯದ ಆತಿಥ್ಯ ತಪ್ಪಿತ್ತು. ಈಗ ಸಮಸ್ಯೆ ತಿಳಿಯಾಗಿದೆ. ಫೆಬ್ರವರಿಯಲ್ಲಿ ಇಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಕೂಡ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.