ನಷ್ಟದ ಸುಳಿಯಲ್ಲಿದ್ದ ರೈತನ ಕೈಹಿಡಿದ ಗುಲಾಬಿ
ಇಲಾಖೆಯಿಂದ ಅನುದಾನ ಸಿಗುತ್ತದೆ ಎಂದು ರೈತ ಮಹೇಶ ಹೇಳುತ್ತಾರೆ.
Team Udayavani, Nov 16, 2021, 8:47 PM IST
ಹಾವೇರಿ: ಅಜ್ಜ ಹಾಕಿದ ಆಲದಮರ ಎಂಬಂತೆ ಅದಕ್ಕೆ ಜೋತು ಬಿದ್ದು ಪ್ರತಿವರ್ಷ ಗೋವಿನಜೋಳ ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತನೋರ್ವ ಈಗ ಹೂ ಬೆಳೆದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗೋವಿನ ಜೋಳದಿಂದ ನಷ್ಟ ಅನುಭವಿಸಿ ಬೇಸತ್ತಿದ್ದ ಅನ್ನದಾತನಿಗೆ ಉದ್ಯೋಗ ಖಾತ್ರಿ ಯೋಜನೆ ವರವಾಗಿದ್ದು, ಇದೀಗ ತಿಂಗಳಿಗೆ ಉತ್ತಮ ಆದಾಯ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಕಬ್ಬೂರು ಗ್ರಾಮದ ರೈತ ಮಹೇಶ ದೇಸೂರು ತಮ್ಮ ಜಮೀನಿನಲ್ಲಿ ಹೂ ಬೆಳೆದು ಲಾಭ ಪಡೆಯುತ್ತಿದ್ದಾರೆ. ಮೊದಲು ಗೋವಿನಜೋಳ ಬೆಳೆಯುತ್ತಿದ್ದವರು ಪರ್ಯಾಯವಾಗಿ ಬೇರೆ ಏನಾದರೂ ಬೆಳೆಯಬೇಕು ಎಂದುಕೊಂಡಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂ ಬೆಳೆಯಲು ಗ್ರಾಪಂ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂದು ತಿಳಿದು ಇಲಾಖೆ ಅಧಿಕಾರಿಗಳನ್ನು ಭೇಟಿಯಾದರು. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸದ್ಯ ಯೋಜನೆ ಲಾಭ ಪಡೆದಿದ್ದಾರೆ.
1 ಎಕರೆಯಲ್ಲಿ ಬಟನ್ ರೋಜ್: ಗೋವಿನಜೋಳ ಬೆಳೆದಿದ್ದರೆ1 ಎಕರೆಯಲ್ಲಿ 20ರಿಂದ 25ಕ್ವಿಂಟಲ್ ಉತ್ಪನ್ನ ಬೆಳೆಯಬಹುದಿತ್ತು. ಇದರಿಂದ ಬರುವ ಆದಾಯ ಕೇವಲ 20ರಿಂದ 25 ಸಾವಿರ ರೂ., ಆದರೆ, ಹೂ ಬೆಳೆದಿದ್ದರಿಂದ ಪ್ರತಿದಿನಕ್ಕೆ1000ದಂತೆತಿಂಗಳಿಗೆ30ರಿಂದ 35 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಮಹೇಶ ದೇಸೂರು ಅವರು ಗುಲಾಬಿ ಹೂವು ನಾಟಿ ಮಾಡಲು 60ರಿಂದ 80 ಸಾವಿರ ರೂ. ಖರ್ಚು ಮಾಡಿದ್ದಾರೆ. ಈಗ ನಿತ್ಯ ಹೊಲದಲ್ಲಿ ಹೂವು ಕಟಾವು ಮಾಡುತ್ತಿರುವ ಕೂಲಿಕಾರರು ಕೂಲಿಯನ್ನು ವಾರಕ್ಕೆ ಒಂದು ಬಾರಿ ಉದ್ಯೋಗ ಖಾತ್ರಿಯಡಿ ಪಡೆಯುತ್ತಿದ್ದಾರೆ. ಇದರಿಂದ ನಾವು ವೆಚ್ಚ ಮಾಡಿದ ಹಣ ವಾಪಸ್ ಬರುತ್ತದೆ. ಜೊತೆಗೆ ಇಲಾಖೆಯಿಂದ ಅನುದಾನ ಸಿಗುತ್ತದೆ ಎಂದು ರೈತ ಮಹೇಶ ಹೇಳುತ್ತಾರೆ.
ಹಬ್ಬದ ದಿನಗಳಲ್ಲಿ ಡಿಮ್ಯಾಂಡ್: ಹಬ್ಬದ ದಿನಗಳಲ್ಲಿ ಗುಲಾಬಿ ಹೂವಿಗೆ ತುಂಬಾ ಬೇಡಿಕೆ ಇರುತ್ತದೆ. ಮಹಾರಾಷ್ಟ್ರ, ಗೋವಾ, ಹರಿಯಾಣ ಮುಂತಾದವರು ಗುಲಾಬಿ ತೋಟಗಳನ್ನು ನೋಡಿಕೊಂಡು ಐದರಿಂದ ಆರು ವರ್ಷ ನಮಗೆಬೇಕು ಎಂದು 2-3 ಲಕ್ಷ ರೂ. ಅಡ್ವಾನ್ಸ್ ಹಣವನ್ನು ಕೊಟ್ಟು ಒಂದೇ ಮಾರ್ಕೆಟ್ ದರವನ್ನು ಮಾಡಿ ಹೋಗುತ್ತಿದ್ದಾರೆ ಎಂದು ರೈತ ಮಹೇಶ ಖುಷಿಯಿಂದ ಹೇಳುತ್ತಾರೆ.
ಯೋಜನೆ ಕುರಿತು ಜಾಗೃ ತಿ
ಉದ್ಯೋಗಖಾತ್ರಿಯೋಜನೆಅನುಷ್ಟಾನ ಗ್ರಾಮೀಣಪ್ರದೇಶಕ್ಕೆವರದಾನವಾಗಿದೆ.ಇದರ ಮಹತ್ವವನ್ನು ಐಇಸಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿಸಿ ಕೊಡಲಾಯಿತು.ಅಲ್ಲದೇ ಮನೆಮನೆ ಭೇಟಿ ಮಾಡಿ ಜನರಿಗೆ ಈ ಯೋಜನೆಯಲ್ಲಿರುವ 21 ವಲಯಕಾಮಗಾರಿಗಳಬಗ್ಗೆ ಮಾಹಿತಿ ನೀಡಲಾಯಿತು. ಜನರಿಗೆ ರೋಜ್‌ಗಾರ್ ದಿನಾಚರಣೆ ಮೂಲಕ ವೈಯಕ್ತಿಕ ಕಾಮಾಗಾರಿಗಳ ಬಗ್ಗೆಜಾಗೃತಿ ಮೂಡಿಸಲಾಯಿತು. ಸಮುದಾಯ ಕಾಮಗಾರಿಗಳನ್ನು ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ಮಿಸಿಕೊಳ್ಳಲು ಸಣ್ಣ-ಅತಿಸಣ್ಣ ರೈತರಿಗೆಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ 2.50ಲಕ್ಷ ರೂ.ವರೆಗೂ ಸಹಾಯಧನ ನೀಡಲಾಗುತ್ತಿದೆ ಎಂದು ಗ್ರಾಪಂ ವತಿಯಿಂದ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ.
ಯೋಜನೆ ಸದ್ಬಳಕೆ ಹೇಗೆ?
ಉದ್ಯೋಗಖಾತ್ರಿಯೋಜನೆಯಲ್ಲಿ ರೈತರು ಜಾಬ್‌ಕಾರ್ಡ್‌ಹೊಂದಿರಬೇಕು.ಇಂಥವರು ಸಣ್ಣ, ಅತಿಸಣ್ಣ ರೈತ ಮತ್ತು ಪರಿಶಿಷ್ಟಜಾತಿ ಮತ್ತುಪರಿಶಿಷ್ಟ ಪಂಗಡದವರಿಗೆ ಈಯೋಜನೆ ಲಾಭ ಸಿಗುತ್ತದೆ.ಈಯೋಜನೆಯಲ್ಲಿ ಜೀವನಪರ್ಯಂತ 2.50 (ಒಂದೇ ಸಾರಿ) ಲಕ್ಷ ರೂ.ವರೆಗೂಯೋಜನೆಯಲಾಭ ಪಡೆದುಕೊಳ್ಳಬಹುದು.
ಒಂದು ಎಕರೆಯಲ್ಲಿ ನರೇಗಾ ಯೋಜನೆಯಡಿ ಬಟನ್ ರೋಜ್‌ಬೆಳೆದಿದ್ದೇನೆ.ಮೊದಲು ಗೋವಿನಜೋಳ ಬೆಳೆಯುತ್ತಿದ್ದೆ.ಆದರೆ, ಈಗ ಗೋವಿನ ಜೋಳಕ್ಕಿಂತ ಹೂವಿನಲ್ಲಿ ಉತ್ತಮ ಲಾಭ ಸಿಗುತ್ತಿದೆ. ಗ್ರಾಪಂ, ತಾಪಂಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಮಗೆ ಹೆಚ್ಚಿನ ಸಹಕಾರ ನೀಡಿದ್ದಾರೆ.
ಮಹೇಶ ದೇಸೂರ,
ಗುಲಾಬಿಹೂಬೆಳೆದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.