‘ವೆಡ್ಡಿಂಗ್ ಗಿಫ್ಟ್’ ಖುಷಿಯಲಿ ನಟಿ ಸೋನುಗೌಡ
Team Udayavani, Nov 17, 2021, 7:50 AM IST
“ವೆಡ್ಡಿಂಗ್ ಗಿಫ್ಟ್’ ಹೀಗೊಂದು ಸಿನಿಮಾದ ಬಗ್ಗೆ ನೀವು ಕೇಳಿರಬಹುದು. ಸೋನು ಗೌಡ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು.
ವಿಕ್ರಂ ಪ್ರಭು “ವೆಡ್ಡಿಂಗ್ ಗಿಫ್ಟ್’ ಚಿತ್ರದ ಮೂಲಕ ಸಿನಿಮಾ ನಿರ್ದೇಶಕರಾಗಿ ಆಗಿ ಚಂದನವನಕ್ಕೆ ಅಡಿಯಿಡುತ್ತಿದ್ದಾರೆ. ತನ್ನದೇ ಕನಸಿನ ಕಥೆಗೆ ತಾನೇ ಕಾಸು ಹಾಕಿ “ವಿಕ್ರಂ ಪ್ರಭು ಫಿಲಂಸ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿರುವ ವಿಕ್ರಂ ಪ್ರಭು, ನಿರ್ದೇಶನ ಜವಾಬ್ದಾರಿಯನ್ನೂ ತಾನೇ ವಹಿಸಿಕೊಂಡಿದ್ದಾರೆ.
“ವೆಡ್ಡಿಂಗ್ ಗಿಫ್ಟ್’ ಚಿತ್ರದಲ್ಲಿ ನಾಯಕಿಯಾಗಿ ಸೋನುಗೌಡ ಕಾಣಿಸಿಕೊಳ್ಳುತ್ತಿದ್ದಾರೆ. “ಇವತ್ತಿನ ಜನರೇಶನ್‌ನ ಟ್ರೆಂಡ್ ಸ್ಟೋರಿ ಈ ಸಿನಿಮಾದಲ್ಲಿದೆ. ನಾನು ಇಲ್ಲಿಯವರೆಗೆ ಮಾಡಿರುವ ಕ್ಯಾರೆಕ್ಟರ್‌ಗಳಿಗಿಂತ ಹೊಸಥರದ ಕ್ಯಾರೆಕ್ಟರ್ “ವೆಡ್ಡಿಂಗ್ ಗಿಫ್ಟ್’ನಲ್ಲಿದೆ.
ಇದರಲ್ಲಿ ನಾನು ಔಟ್ ಆ್ಯಂಡ್ ಔಟ್ ಕಾರ್ಪೋರೆಟ್ ಲೈಫ್ ಸ್ಟೈಲ್ ನಡೆಸುವ ಹುಡುಗಿಯ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಎಲ್ಲವನ್ನೂ ಕಾರ್ಪೋರೆಟ್ ದೃಷ್ಟಿಯಲ್ಲೇ ನೋಡುವ ಹುಡುಗಿಯೊಬ್ಬಳ ಲೈಫ್ನಲ್ಲಿ ಮದುವೆಯ ನಂತರ ಏನೆಲ್ಲ ಬದಲಾವಣೆ ಆಗುತ್ತದೆ ಅನ್ನೋದರ ಸುತ್ತ ಸಿನಿಮಾ ನಡೆಯುತ್ತದೆ. ಕಾರ್ಪೋರೆಟ್ ಲೈಫ್ ಬಯಸುವ, ಇಂಡಿಪೆಂಡೆಂಟ್ ಆಗಿರುವಂಥ, ನಾನೇ ಎಲ್ಲವೂ ಎನ್ನುವಂಥ “ಇಗೋ’ ಇರುವಂಥ ಕ್ಯಾರೆಕ್ಟರ್ ನನ್ನದು. ಸ್ಕ್ರಿಪ್ಟ್ ನಲ್ಲಿ ನನ್ನ ಪಾತ್ರ ಇಷ್ಟವಾಯ್ತು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಸೋನು ಗೌಡ.
“ಸಿನಿಮಾಕ್ಕಾಗಿ ಈಗಾಗಲೇ ಒಂದಷ್ಟು ವರ್ಕ್ ಶಾಪ್, ರಿಹರ್ಸಲ್ ಮಾಡಿದ್ದೇವೆ. ಸ್ಕ್ರೀನ್ ಮೇಲೆ ನನ್ನ ಕ್ಯಾರೆಕ್ಟರ್ ಹೊಸಥರದಲ್ಲಿ ಬರುತ್ತದೆ. ಆಡಿಯನ್ಸ್‌ಗೂ ಈ ಸಿನಿಮಾ ಇಷ್ಟವಾಗುತ್ತದೆ’ ಎಂಬ ವಿಶ್ವಾಸದ ಮಾತುಗಳನ್ನಾಡುತ್ತಾರೆ ಸೋನು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಕ್ರಂ ಪ್ರಭು, “ಸಿನಿಮಾದ ಟೈಟಲ್ಲೇ ಹೇಳುವಂತೆ, “ವೆಡ್ಡಿಂಗ್ ಗಿಫ್ಟ್’ ಸಿನಿಮಾ ಮದುವೆ, ಗಂಡ-ಹೆಂಡತಿ ಸಂಬಂಧಗಳು, ಕಾನೂನಿನ ದುರುಪಯೋಗ ಹೀಗೆ ಹಲವು ಸಂಗತಿಗಳ ಸುತ್ತ ಸಾಗುತ್ತದೆ.
ಕಂಪ್ಲೀಟ್ ಥ್ರಿಲ್ಲರ್ ಸಬೆಕ್ಟ್ ಮತ್ತು ಹೊಸ ಥರದ ಸ್ಕ್ರೀನ್ ಪ್ಲೇ ಈ ಸಿನಿಮಾದ ಹೈಲೈಟ್ ಅಂಶಗಳು. ಎಲ್ಲ ಥರದ ಆಡಿಯನ್ಸ್‌ಗೂ ಕನೆಕ್ಟ್ ಆಗುವಂಥ ಕಥೆ ಸಿನಿಮಾದಲ್ಲಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಆದಷ್ಟು ಬೇಗ ಅಂದುಕೊಂಡಂತೆ ಸಿನಿಮಾ ಮುಗಿಸಿ ಮುಂದಿನ ವರ್ಷದ ಮಧ್ಯ ಭಾಗಕ್ಕೆ “ವೆಡ್ಡಿಂಗ್ ಗಿಫ್ಟ್’ ಆಡಿಯನ್ಸ್ ಮುಂದೆ ತರುವ ಯೋಚನೆ ಇದೆ’ ಎನ್ನುತ್ತಾರೆ. ಚಿತ್ರದಲ್ಲಿ ನಟಿ ಪ್ರೇಮ ಕೂಡಾ ನಟಿಸುತ್ತಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಪ್ರೇಮ, “ನಮ್ಮ ಸುತ್ತಮುತ್ತ ನಡೆಯುವಂಥ ಕಥೆ ಈ ಸಿನಿಮಾದಲ್ಲಿದೆ. ಎಲ್ಲರಿಗೂ ಕನೆಕ್ಟ್ ಆಗುವಂಥ ಸಬ್ಜೆಕ್ಟ್ ಇದು. ನಿರ್ದೇಶಕರು ಅನೇಕ ಸೂಕ್ಷ್ಮ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದಾರೆ. ಸಿನಿಮಾದ ಕಥೆ ಮತ್ತು ನನ್ನ ಪಾತ್ರ ಇಷ್ಟವಾಗಿದ್ದರಿಂದ, ಈ ಸಿನಿಮಾ ಒಪ್ಪಿಕೊಂಡೆ.
ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ. ಇನ್ನು, “ವೆಡ್ಡಿಂಗ್ ಗಿಫ್ಟ್’ ಚಿತ್ರದ ಮೂಲಕ ನಿಶಾನ್ ನಾಣಯ್ಯ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.