ವೀಳ್ಯದೆಲೆಗೆ ಸೊರಗು ರೋಗ ಬಾಧೆ
Team Udayavani, Nov 17, 2021, 5:48 PM IST
ದಾವಣಗೆರೆ: ಪ್ರಸ್ತುತ ವರ್ಷ ಅತಿಯಾದಮಳೆಯಿಂದಾಗಿ ಹರಿಹರ ತಾಲೂಕಿನ ಬಹಳಷ್ಟುವೀಳ್ಯದೆಲೆ ತಾಕುಗಳಲ್ಲಿ ಮಣ್ಣಿನಲ್ಲಿ ತೇವಾಂಶಹೆಚ್ಚಾಗಿರುವ ಕಾರಣ ಕೆಲವು ಗ್ರಾಮಗಳವೀಳ್ಯದೆಲೆ ತೋಟಗಳಲ್ಲಿ ಸೊರಗು ರೋಗದಬಾಧೆ ತೀವ್ರವಾಗಿದೆ ಎಂದು ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡಎಂ.ಜಿ. ಹೇಳಿದರು.
ಹರಿಹರ ತಾಲೂಕಿನ ರಾಮತೀರ್ಥಗ್ರಾಮದಲ್ಲಿ ಏರ್ಪಡಿಸಿದ್ದ “ವೀಳ್ಯದೆಲೆಯಲ್ಲಿಸಮಗ್ರ ಬೇಸಾಯ ಕ್ರಮಗಳು’ ಕುರಿತಮುಂಚೂಣಿ ಪ್ರಾತ್ಯಕ್ಷಿಕೆ ತರಬೇತಿಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವೀಳ್ಯದೆಲೆಯಲ್ಲಿ ಅತಿಯಾದರಾಸಾಯನಿಕಗಳನ್ನು ಬಳಸದೆ ಸಾವಯವಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಅರ್ಕಾಸೂಕ್ಷಾಣುಜೀವಿಗಳ ಸಮ್ಮಿಶ್ರಣವನ್ನು ಐದುಮಿಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿಸಿಂಪರಣೆ ಮತ್ತು ಗಿಡದ ಬುಡಗಳಿಗೆಉಪಚಾರ ಮಾಡುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಲಭ್ಯ ರೂಪದಲ್ಲಿ ಬೆಳೆಗೆಸಿಗುವುದರಿಂದ ಉತ್ತಮ ಇಳುವರಿಯನ್ನುನಿರೀಕ್ಷಿಸಬಹುದು. ಜೊತೆಗೆ ರೋಗ ನಿರೋಧಕಶಕ್ತಿಯೂ ಹೆಚ್ಚುತ್ತದೆ ಎಂದರು.
ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ|ಅವಿನಾಶ್ ಟಿ.ಜಿ.,ಬೆಳೆಗಳಲ್ಲಿ ಸಸ್ಯಜನ್ಯಕೀಟನಾಶಕ ಹಾಗೂ ಜೈವಿಕ ಗೊಬ್ಬರಗಳಬಳಕೆ ಬಗ್ಗೆ ತಿಳಿಸಿಕೊಟ್ಟರು. ನಂತರತಾಲೂಕಿನ ರಾಮತೀರ್ಥ, ಹೊಳೆಸಿರಿಗೆರೆ,ಕಡಾರನಾಯಕನಹಳ್ಳಿ ಗ್ರಾಮದ ವಿವಿಧ ಅಡಿಕೆ,ತೆಂಗು, ಹೂವಿನ ತಾಕುಗಳಿಗೆ ವಿಜ್ಞಾನಿಗಳ ತಂಡಭೇಟಿ ನೀಡಿ ವೈಜ್ಞಾನಿಕ ಮಾಹಿತಿ ನೀಡಿತು.ಕೇಂದ್ರದ ಗೃಹ ವಿಜ್ಞಾನಿ ಡಾ| ಸುಪ್ರಿಯಾಪಿ. ಪಾಟೀಲ್, ರೈತರಾದ ಕುಬೇರ ಗೌಡ,ರುದ್ರೇಶ್, ಮಂಜಣ್ಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.