4ಜಿ ಡೇಟಾ ಡೌನ್‌ಲೋಡ್ ವೇಗ: ಮೊದಲ ಸ್ಥಾನದಲ್ಲಿ ಮುಂದುವರಿದ ಜಿಯೋ
Team Udayavani, Nov 17, 2021, 6:21 PM IST
ನವದೆಹಲಿ: ರಿಲಯನ್ಸ್ ಜಿಯೋ ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್ (ಎಂಬಿಪಿಎಸ್) ಡೌನ್‌ಲೋಡ್ ವೇಗದೊಂದಿಗೆ 4ಜಿ ವಿಭಾಗದಲ್ಲಿ ಅಕ್ಟೋಬರ್ ತಿಂಗಳಲ್ಲಿಯೂ ಮೊದಲ ಸ್ಥಾನದಲ್ಲಿದಲ್ಲಿ ಮುಂದುವರಿದಿದೆ ಎಂದು ಟ್ರಾಯ್ ತಿಳಿಸಿದೆ.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋ ತನ್ನ 4ಜಿ ನೆಟ್‌ವರ್ಕ್ ವೇಗವನ್ನು ಜೂನ್ ತಿಂಗಳಲ್ಲಿ ದಾಖಲಾಗಿದ್ದಂತೆ 21.9 ಎಂಬಿಪಿಎಸ್‌ಗೆ ಮತ್ತೆ ಹೆಚ್ಚಿಸಿಕೊಂಡಿದೆ. ಅದರ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕೂಡ ತಮ್ಮ ಡೇಟಾ ಡೌನ್‌ಲೋಡ್ ವೇಗದಲ್ಲಿ ಹೆಚ್ಚಳ ಕಂಡುಕೊಂಡಿವೆ.
ಏರ್‌ಟೆಲ್ 4ಜಿ ಡೇಟಾ ಡೌನ್‌ಲೋಡ್ ವೇಗವು ಅಕ್ಟೋಬರ್ ತಿಂಗಳಲ್ಲಿ 13.2 ಎಂಬಿಪಿಎಸ್‌ಗೆ ಏರಿಕೆಯಾಗಿದೆ. ಜೂನ್ ತಿಂಗಳಲ್ಲಿ ಇದರ ಸರಾಸರಿ ಡೌನ್‌ಲೋಡ್ ವೇಗ 5 ಎಂಬಿಪಿಎಸ್ ಇತ್ತು. ಹಾಗೆಯೇ ವಿಐಎಲ್ ಕೂಡ ಡೌನ್‌ಲೋಡ್ ವೇಗವನ್ನು 6.5 ಎಂಬಿಪಿಎಸ್ ವೇಗದಿಂದ 15.6 ಎಂಬಿಪಿಎಸ್‌ಗೆ ಹೆಚ್ಚಿಸಿಕೊಂಡಿದೆ.
ಇನ್ನು ಅಪ್‌ಲೋಡ್ ವಿಭಾಗದಲ್ಲಿ 7.6 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಕ್ಟೋಬರ್‌ನಲ್ಲಿ ಕೂಡ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಜಿಯೋ ಹಾಗೂ ಏರ್‌ಟೆಲ್‌ಗಳು ಅಕ್ಟೋಬರ್ ತಿಂಗಳಲ್ಲಿ ತಮ್ಮ ಅಪ್‌ಲೋಡ್ ವೇಗವನ್ನು ಹೆಚ್ಚಿಸಿಕೊಂಡಿದೆ. ಇದು ಕಳೆದ ಐದು ತಿಂಗಳಲ್ಲಿಯೇ ಅತ್ಯಧಿಕ ವೇಗವಾಗಿದೆ. ಜಿಯೋ 6.4 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿದ್ದರೆ, ಏರ್‌ಟೆಲ್ 5.2 ಎಂಬಿಪಿಎಸ್ ವೇಗ ದಾಖಲಿಸಿದೆ.
ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ತ್ವರಿತವಾಗಿ ರವಾನಿಸಲು ನೆರವಾಗುತ್ತದೆ.
ಮೈಸ್ಪೀಡ್ ಆಪ್‌ನ ಸಹಾಯದೊಂದಿಗೆ ದೇಶಾದ್ಯಂತ ರಿಯಲ್ ಟೈಮ್ ಆಧಾರದಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಟ್ರಾಯ್, ಅದರ ಮೂಲಕ ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.