ಗೋವಾ: ಪ್ರವಾಸೋದ್ಯಮ ಅವಲಂಬಿತ ಉದ್ಯೋಗಗಳ ಶುಲ್ಕದ ಮೇಲೆ ಶೇ. 50 ರಷ್ಟು ರಿಯಾಯತಿ
Team Udayavani, Nov 17, 2021, 6:32 PM IST
ಪಣಜಿ: ಗೋವಾ ಪ್ರವಾಸೋದ್ಯಮ ವಿಭಾಗವು ರಾಜ್ಯದ ವಿವಿಧ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಗಳ ನೋಂದಣಿ ಮತ್ತು ನವೀಕರಣ ಶುಲ್ಕದ ಮೇಲೆ ಶೇ 50 ರಷ್ಟು ರಿಯಾಯತಿ ನೀಡಿ ಆದೇಶ ಜಾರಿಗೊಳಿಸಲಾಗಿದೆ.
ಬೀಚ್ ಬಳಿಯಿರುವ ಬಾರ್ ಮತ್ತು ರೆಸ್ಟೊರೆಂಟ್, ಪ್ರವಾಸೋದ್ಯಮ ಅವಲಂಬಿತ ಇತರ ಉದ್ಯೋಗಗಳಿಗೆ ಕಳೆದ ಎರಡು ಸೀಜನ್ನಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ಹೆಚ್ಚಿನ ತೊಂದರೆಯುಂಟಾಗಿರುವುದರಿಂದ ಈ ಉದ್ಯೋಗಿಗಳು ತೆರಿಗೆಯಲ್ಲಿ ವಿನಾಯತಿ ಕೋರಿದ್ದರು.
2021-22 ಈ ಆರ್ಥಿಕ ವರ್ಷದಲ್ಲಿ ಹೆಚ್ಚು ಭರಿಸಿರುವ ಶುಲ್ಕವನ್ನು ಮುಂದಿನ ವರ್ಷ ನೀಡಬೇಕಿರುವ ಶುಲ್ಕದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಂಚಾಲಕ ಮೆನಿನೊ ಡಿಸೋಜಾ ರವರು ಜಾರಿಗೊಳಿಸಿರುವ ಆದೇಶದಲ್ಲಿ ನಮೂದಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಅದರಲ್ಲೂ ಲಾಕ್ಡೌನ್ ಸಡಿಲಿಕೆಯ ನಂತರ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸದ್ಯ ರಾಜ್ಯದ ಪ್ರತಿಯೊಂದೂ ಪ್ರವಾಸಿ ತಾಣವೂ ಕೂಡ ಪ್ರವಾಸಿಗರಿಂದ ಭರ್ತಿಯಾಗಿದೆ. ಇದರಿಂದಾಗಿ ಕಳೆದ ಎರಡು ವರ್ಷ ನಷ್ಟ ಅನುಭವಿಸಿರುವ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.