ಪಿಯುಸಿ: ಡಿ.13ರಿಂದ 24ರ ವರೆಗೆ ಅರ್ಧ ವಾರ್ಷಿಕ ಪರೀಕ್ಷೆ
ಉಪನ್ಯಾಸಕರ ಬೇಡಿಕೆಗೆ ಮಣಿದ ಪಿಯು ಮಂಡಳಿ
Team Udayavani, Nov 18, 2021, 6:30 AM IST
ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ.
ಡಿ.13ರಿಂದ 24ರ ವರೆಗೆ ಪರೀಕ್ಷೆ ನಡೆಯಲಿದೆ ಹಾಗೂ ಕಾಲೇಜು ಹಂತದಲ್ಲಿಯೇ ಮೌಲ್ಯಮಾಪನ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಮೊದಲು ನ.29ರಿಂದ ಡಿ.10ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಪ್ರಥಮ ಪಿಯುಸಿ ಮಧ್ಯ ವಾರ್ಷಿಕ ನಡೆಸಲು ನಿರ್ಧರಿಸಲಾಗಿತ್ತು.
ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಒತ್ತಾಯದ ಮೇರೆಗೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಏಕಕಾಲದಲ್ಲಿ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಿದೆ. ಬುಧವಾರ ನಡೆದ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಪ್ರಮುಖ ನಿರ್ಧಾರಗಳು
ಡಿ.13ರಿಂದ 24ರ ವರೆಗೆ ಪರೀಕ್ಷೆ ನಡೆಸಿ ಕಾಲೇಜು ಹಂತದಲ್ಲಿಯೇ ಮೌಲ್ಯಮಾಪನ ಮಾಡಿಸಬೇಕು. ಡಿ.31ರೊಳಗೆ ವಿದ್ಯಾರ್ಥಿಗಳ ಅಂಕಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಪರೀಕ್ಷೆಗೆ ಸಂಬಂಧಿಸಿ ಇಲಾಖೆ ನಿಗದಿಪಡಿಸಿದ ಎಲ್ಲ ಪಠ್ಯಕ್ರಮಗಳನ್ನು ಪೂರ್ಣಗೊಳಿಸಬೇಕು ಹಾಗೂ ಪೂರ್ಣಗೊಂಡ ಬಗ್ಗೆ ಪ್ರಾಂಶುಪಾಲರು ಇಲಾಖೆಗೆ ವರದಿ ನೀಡಬೇಕು.
ವಿಜ್ಞಾನ ವಿಭಾಗದ ಕಾಲೇಜುಗಳ ಪ್ರಾಚಾರ್ಯರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕಾಲೇಜಿನ ಅವಧಿ ಬಳಿಕ ಹೆಚ್ಚುವರಿಯಾಗಿ ಒಂದು ಗಂಟೆ ಬೋಧನೆ ಮಾಡಲು ತಿಳಿಸಲಾಗಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯನ್ನು ಕಡ್ಡಾಯವಾಗಿ ಬೆಳಗ್ಗೆ 12 ಗಂಟೆಯೊಳಗೆ ಸ್ಯಾಟ್ಸ್‌ನಲ್ಲಿ ನಮೂದಿಸಬೇಕು. ವಿದ್ಯಾರ್ಥಿಗಳಿಗೆ ನಡೆಸುವ ಘಟಕ ಪರೀಕ್ಷೆಗಳ ಹಾಗೂ ಅಸೈನ್‌ಮೆಂಟ್‌ಗಳ ಅಂಕಗಳನ್ನೂ ಸ್ಯಾಟ್ಸ್‌ನಲ್ಲಿ ನಮೂದಿಸಬೇಕು. ಪ್ರಾಂಶುಪಾಲರು ಇನ್ನು ಮುಂದೆ ಕಡ್ಡಾಯವಾಗಿ ಇ- ಆಫೀಸಿನಲ್ಲಿಯೇ ಕರ್ತವ್ಯಗಳನ್ನು ನಿರ್ವಹಿಸಬೇಕು.
20 ಗಂಟೆಗಿಂತ ಕಡಿಮೆ ಕಾರ್ಯಭಾರ ಹೊಂದಿರುವ ಉಪನ್ಯಾಸಕರನ್ನು ಮತ್ತೂಂದು ಕಾಲೇಜಿಗೆ ಮೂರು ದಿನಗಳಂತೆ ನಿಯೋಜನೆ ಮಾಡಲು ಪ್ರಾಂಶುಪಾಲರು ಗಮನ ಹರಿಸಬೇಕು.
ಕೊರೊನಾ ಸಮಯದಲ್ಲಿ ಹಾಳಾಗಿರುವ ಸಮಯವನ್ನು ಸರಿಹೊಂದಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಮತ್ತು ಶಿಕ್ಷಕರು ಎರಡೆರಡು ಬಾರಿ ಪರೀಕ್ಷೆಗೆ ಸಿದ್ಧತೆ ನಡೆಸುವುದನ್ನು ತಾಪತ್ರಯ ತಪ್ಪಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ.
– ಎ.ಎಚ್. ನಿಂಗೇಗೌಡ, ಅಧ್ಯಕ್ಷರು, ಉಪನ್ಯಾಸಕರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.