![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 18, 2021, 2:40 PM IST
ಇಂಡಿ: ಪಟ್ಟಣದಿಂದ ಸಿಂದಗಿಗೆ ಹೋಗುವ ರಸ್ತೆ ಮತ್ತು ಪಟ್ಟಣದಿಂದ ಹಂಜಗಿ ಗ್ರಾಮದ ರಸ್ತೆಗಳಲ್ಲಿನ ತಗ್ಗು-ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ರಸ್ತೆಗಳನ್ನು ನಿರ್ಮಿಸಿ ನಾಲ್ಕೈದು ತಿಂಗಳಲ್ಲೆ ದುರಸ್ತಿಗೆ ಬಂದಿವೆ.
ಈ ರಸ್ತೆ ಎರಡು ಬದಿಯಲ್ಲಿ ವಾಹನಗಳು ಎದುರು ಬದುರಾದರೆ ಸಾಕು ವಾಹನ ಬಿದ್ದೆ ಬಟ್ಟಿತ್ತು ಏನೊ ಎಂಬ ಭಯವಾಗಿ ಬಿಡುತ್ತದೆ. ಡಾಂಬರ್ ರಸ್ತೆ ಬದಿಯಲ್ಲಿ ಅಷ್ಟೊಂದು ಪ್ರಮಾಣದ ಕಚ್ಚಾ ರಸ್ತೆಯ ಮಣ್ಣು ಕಿತ್ತುಕೊಂಡು ಹೋಗಿದ್ದರು. ಸಹ ಕಳೆದ ಐದಾರು ವರ್ಷಗಳಿಂದ ರಸ್ತೆ ಬಲ ಮತ್ತು ಎಡ ಬದಿಯಲ್ಲಿ ನಿರ್ಮಾಣವಾದ ಆಳವಾದ ತಗ್ಗು ಗುಂಡಿಗಳನ್ನು ತುಂಬುವ ಕಾರ್ಯ ಮಾಡಿಲ್ಲ.
ಈ ರಸ್ತೆಯಲ್ಲಿ ಕಳೆದ ಎರಡು ಮೂವರು ತಿಂಗಳಲ್ಲಿ ಸುಮಾರು ಮೂರು, ನಾಲ್ಕು ಜನ ದ್ವಿಚಕ್ರ ವಾಹನ ಸವಾರರು ಅಪಘಾತ ಸಂಭವಿಸಿ ಜೀವ ತೆತ್ತ ಉದಾಹರಣೆಗಳಿವೆ. ಅಲ್ಲದೆ ತಾಲೂಕಿನ ಅನೇಕ ರಾಜ್ಯ, ಜಿಲ್ಲಾ ರಸ್ತೆ ಬದಿಯಲ್ಲಿ ಅಪಘಾತಕ್ಕೆ ಸಂಬಂಧಿಸಿದ ಮುಂಜಾಗೃತೆ ಮೂಡಿಸುವ ಫಲಕಗಳು ಅಳವಡಿಸಿರುವುದಿಲ್ಲ. ಲೋಕೊಪಯೋಗಿ ಇಲಾಖೆ ಅಧಿಕಾರಿ ಕಂಡು ಕಾಣದಂತೆ, ಕೇಳಿ ಕೇಳದಂತೆ ಮೂಕವಿಸ್ಮಿತರಾಗಿ ಬೇಜಾಬ್ದಾರಿತನದಿಂದ ಕುಳಿತಿದ್ದಾರೆ ಎಂದು ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ಇನ್ನಾದರೂ ಲೊಕೊಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೆ ರಸ್ತೆ ಸೈಡ್ ಪಟ್ಟಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ವಾಹನಗಳ ಸವಾರರಾದ ಹಾಗೂ ಮಾಲೀಕರಾದ ಆಗ್ರಹವಾಗಿದೆ.
ಇದನ್ನೂ ಓದಿ:ಅಜೇಯ ಶತಕ: ಬಿಬಿಎಲ್ ನಲ್ಲಿ ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ
ರಸ್ತೆ ಎರಡು ಬದಿಗಳಲ್ಲಿ ತಗ್ಗು ಬಿದ್ದಿರುವುದು ನಿಜ. ಆದರೆ ಈ ಬಾರಿಯ ಅನುದಾನದಲ್ಲಿ ರಸ್ತೆಯ ಸೈಡ್ ಪಟ್ಟಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಒಂದು ವೇಳೆ ರಸ್ತೆ ಅಗಲೀಕರಣ ಕಾರ್ಯ ಮಾಡದೆ ಇದ್ದಲ್ಲಿ ರಸ್ತೆಯ ಸೈಡ್ ಪಟ್ಟಿಯ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು. -ದಯಾನಂದ ಮಠ ಕಾರ್ಯನಿವಾರ್ಹಕ ಅಭಿಯಂತರ ಲೋಕೊಪಯೋಗಿ ಇಲಾಖೆ, ಇಂಡಿ
ಸಿಂದಗಿಗೆ ಹೋಗುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆ ಬದಿಗೆ ಸ್ವಲ್ಪ ಮಟ್ಟಿಗೆ ಎತ್ತರವಾದ ಪಟ್ಟಿ ಹಾಕಬೇಕಿತ್ತು, ಆದರೆ ಪಟ್ಟಿ ಹಾಕದೆ ಹಾಗೆ ರಸ್ತೆಯನ್ನು ಪೂರ್ಣಗೊಳಿಸಿದ್ದಾರೆ. ಇದರಿಂದ ಅನೇಕ ಅನಾಹುತಗಳು ಸಂಭವಿಸಿವೆ. ಅಲ್ಲದೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನಗಳ ತಿರುಗಾಟಕ್ಕೆ ತೊಂದರೆಯಾಗುತ್ತಿದೆ. ಈ ಕೂಡಲೆ ರಸ್ತೆ ಬದಿಗೆ ಪಟ್ಟಿ ಹಾಕುವುದು ಮತ್ತು ಗುಂಡಿ ಮುಚ್ಚುವ ಕಾರ್ಯ ಮಾಡಬೇಕಿದೆ. -ಮಲ್ಲಿಕಾರ್ಜುನ ಇಂಗಳೆ, ಸಾಲೋಟಗಿ ಗ್ರಾಮಸ್ಥ
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.