ಉದುರುತ್ತಿರುವ ಶಂಕರಪುರ ಮಲ್ಲಿಗೆ: ಬೆದರಿದ ಬೆಳೆಗಾರರು
Team Udayavani, Nov 19, 2021, 3:50 AM IST
ಕಟಪಾಡಿ: ಅಕಾಲಿಕ ಮಳೆಯಿಂದ ಶಂಕರಪುರ ಮಲ್ಲಿಗೆ ಬೆಳೆಗಾರರು ತತ್ತರಿಸಿದ್ದು, ಮಲ್ಲಿಗೆ ಗಿಡಗಳು ಸರಿಯಾಗಿ ಮೊಗ್ಗು ಬಿಡದೆ ಇಳುವರಿ ಕಡಿಮೆಯಾಗಿ ಪರಿತಪಿಸುವಂತಾಗಿದೆ.
ಮಣ್ಣು ಪಾಲಾಗುತ್ತಿವೆ…
ಮಲ್ಲಿಗೆ ಗಿಡದಲ್ಲಿ ಮೊಗ್ಗು ಸರಿಯಾಗಿ ಬೆಳೆಯದೆ ಅರಳುತ್ತಿಲ್ಲ. ಉದುರಿ ಹೋಗುತ್ತಿದೆ. ಕಾಂಡಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಎಲೆಗಳು ಕರಟಿ ಹೋದಂತೆ ಕಂಡು ಬರುತ್ತಿದ್ದು, ಮಲ್ಲಿಗೆ ಮೊಗ್ಗು ಸಹಿತ ಗಿಡಗಳ ಗೆಲ್ಲುಗಳು ತುಂಡಾಗಿ ಮಣ್ಣು ಪಾಲಾಗುತ್ತಿದೆ.
ಮಲ್ಲಿಗೆ ಹೂವು ಸಹಜ ಗಾತ್ರಕ್ಕೆ ಬೆಳೆಯದೆ ಇದ್ದು, ಇಳುವರಿ ಕುಂಠಿತವಾಗಿದೆ. ಸುಮಾರು 8-10 ಚೆಂಡುಗಳಷ್ಟು ಶಂಕರಪುರ ಮಲ್ಲಿಗೆ ಹೂವನ್ನು ಪಡೆಯುತ್ತಿದ್ದ ಬೆಳೆಗಾರರು ಇದೀಗ ಕೇವಲ 300-400 ಬಿಡಿ ಹೂವುಗಳನ್ನು ಪಡೆಯುವಲ್ಲಿ ಸಂತೃಪ್ತಿ ಕಾಣಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅರ್ಧಕ್ಕರ್ಧ ಕಡಿಮೆ:
ಭಾರೀ ಮಳೆ ಸುರಿದಿದ್ದರಿಂದ ಶಂಕರಪುರ ಮಲ್ಲಿಗೆ ಗಿಡ ಮತ್ತು ಬೆಳೆ ಹಾಳಾಗಿದೆ. ಮಲ್ಲಿಗೆ ಹೂವು ಮಾರುಕಟ್ಟೆಗೆ ಬರುವ ಪ್ರ ಮಾ ಣ ಮಾಮೂಲಿಗಿಂತ ಅರ್ಧಕ್ಕರ್ಧ ಕಡಿಮೆಯಾಗಿದೆ ಎಂದು ಶಂಕರಪುರ ಮಲ್ಲಿಗೆ ಹೂವಿನ ವ್ಯಾಪಾರಿ ವಿನ್ಸೆಂಟ್ ರಾಡ್ರಿಗಸ್ ಅವರು ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಲ್ಲಿಗೆ ಬೆಳೆಗಾರರ ಸಂಕಟಕ್ಕೆ ಕೈ ಜೋಡಿಸುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಮೇಲಧಿಕಾರಿಯ ಮಾರ್ಗಸೂಚಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.–ಅಮಿತ್ ಸಿಂಪಿ, ಸಹಾಯಕ ತೋಟಗಾರಿಕಾ ಅಧಿಕಾರಿ
ಈ ಬಾರಿ ಮಳೆ ವಿಪರೀತ ಆಗಿದ್ದರಿಂದ ಮಲ್ಲಿಗೆ ಹೂವು ಕೊಳೆತು ಹೋಗುತ್ತಿವೆ. ಮಲ್ಲಿಗೆ ಗಿಡಗಳು ರೋಗ ಬಾಧಿತವಾಗಿದೆ. ಇದರಿಂದ ಗಿಡದಲ್ಲಿ ಚಿಗುರು ಬರುತ್ತಿಲ್ಲ. ಸುಮಾರು 8 -10 ಚೆಂಡು ಹೂವು ಪಡೆಯುತ್ತಿದ್ದು ಇದೀಗ ಕೇವಲ 300, 400 ಬಿಡಿ ಹೂವು ಮಾತ್ರ ಸಿಗುತ್ತದೆ. –ಬಿಬಿಯಾನ್ ಹಿಲ್ಡಾ ಲೋಬೋ, ಮಲ್ಲಿಗೆ ಬೆಳೆಗಾರರು ಶಂಕರಪುರ
ಮಲ್ಲಿಗೆ ಹೂವಿನ ಗಿಡದ ಬೆಳವಣಿಗೆ ಕುಂಠಿತವಾಗಿದೆ. ಸಿರಿ ತುಂಡಾಗಿ ಕೆಳಗೆ ಬೀಳುತ್ತಿದೆ. ಕೆಲವು ಗಿಡಗಳು, ಮಲ್ಲಿಗೆ ಮೊಗ್ಗು ಸತ್ತಿದೆ. ಇದೀಗ 200ರಷ್ಟು ಬಿಡಿ ಹೂವು ಮಾತ್ರ ಕೈ ಸೇರುತ್ತಿದೆ. ಕುಟುಂಬ ನಿರ್ವಹಣೆಗೆ ಮಲ್ಲಿಗೆ ಹೂವನ್ನೇ ನೆಚ್ಚಿಕೊಂಡಿದ್ದು ಈಗ ಏನು ಮಾಡುವುದೆಂದು ದಿಕ್ಕೇ ತೋಚುತ್ತಿಲ್ಲ. –ಭವಾನಿ, ಮಲ್ಲಿಗೆ ಬೆಳೆಗಾರರು ಸುಭಾಸ್ ನಗರ, ಕುರ್ಕಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.