“ಮನೆ ಮನೆಗೆ ಲಸಿಕೆ’ ಯೋಜನೆ ಶೀಘ್ರ ಆರಂಭ: ಡಾ| ಸುಧಾಕರ್
Team Udayavani, Nov 19, 2021, 7:30 AM IST
ದಾವಣಗೆರೆ: ಸಾರ್ವಜನಿಕರು ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ “ಮನೆ ಮನೆಗೆ ಲಸಿಕೆ’ ಯೋಜನೆ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಶೇ.88ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೇ.50ರಷ್ಟು ಜನರಿಗೆ ಎರಡನೇ ಡೋಸ್ ನೀಡಲಾಗಿದ್ದು, ಉಳಿದವರು ಆಸಕ್ತಿ ತೋರುತ್ತಿಲ್ಲ. ಹಾಗಾಗಿ “ಮನೆ ಮನೆಗೆ ಲಸಿಕೆ’ ಯೋಜನೆ ಮೂಲಕ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲಾಗುವುದು ಎಂದರು.
70 ಲಕ್ಷ ಡೋಸ್ ಲಸಿಕೆ ದಾಸ್ತಾನು:
ರಾಜ್ಯದಲ್ಲಿ 70 ಲಕ್ಷ ಡೋಸ್ ಲಸಿಕೆ ದಾಸ್ತಾನಿದೆ. ಬೇರೆ ದೇಶಗಳಲ್ಲಿ ಕೊರೊನಾದ 3 ಮತ್ತು 4ನೇ ಅಲೆ ಕಾಣಿಸಿಕೊಂಡಿದೆ. ಹಾಗಾಗಿ ಅಲ್ಲಿ ನಿರ್ಬಂಧ ವಿಧಿಸಲಾಗಿದೆ. ನಮ್ಮಲ್ಲೂ ಮೂರನೇ ಅಲೆ ಬರಬಹುದು. ಆದರೆ ಈಗ ಬಂದಿರುವ ಎರಡು ವರದಿಗಳ ಪ್ರಕಾರ ಕೊರೊನಾ ಎಂಡಮಿಕ್ ಹಂತ ತಲುಪಿದೆ. ಸೋಂಕು ಸ್ಥಳೀಯವಾಗಿ ತೀವ್ರತೆ ಕಳೆದುಕೊಂಡಿದೆ. ಆದರೂ ಕೊರೊನಾ ಎಂಬುದು ಕರ್ನಾಟಕ, ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಗತ್ತು ಕೊರೊನಾದಿಂದ ಮುಕ್ತ ಆಗುವ ತನಕ ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.